ನವದೆಹಲಿ: ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬೆನ್ನಲ್ಲಿಯೇ ಟ್ವಿಟರ್‍ನಿಂದ ವಜಾಗೊಂಡಿರುವ ಸಿಇಒ ಪರಾಗ್ ಅಗ್ರವಾಲ್ 38.7 ಮಿಲಿಯನ್ ಅಮೆರಿಕ ಡಾಲರ್(345 ಕೋಟಿ ರೂ.) ಹಣ ಪಡೆಯಲಿದ್ದಾರೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಮಸ್ಕ್‌ ಟ್ವಿಟ್ಟರ್‌ ಕಂಪನಿ ಖರೀದಿಸಲಿದ್ದಾರೆ ಅನ್ನೋ ಸುದ್ದಿ ಪ್ರಕಟವಾದ ಬೆನ್ನಲ್ಲೇ ಪರಾಗ್ ಅಗ್ರವಾಲ್ ರನ್ನು ವಜಾಗೊಳಿಸಬಹುದು ಎಂದು ಏಪ್ರಿಲ್‌ನಲ್ಲೇ ಸುದ್ದಿ ಪ್ರಕಟವಾಗಿತ್ತು. ಈಗ ಆ ಸುದ್ದಿ ನಿಜವಾಗಿದೆ. ಮಸ್ಕ್ ಬರೋಬ್ಬರಿ 44 ಬಿಲಿಯನ್ ಅಮೆರಿಕನ್ ಡಾಲರ್‍ಗೆ ಟ್ವಿಟರ್  ಖರೀದಿಸಿದ್ದಾರೆ. ಹೀಗಾಗಿ ಟ್ವಿಟರ್ ನ ಅಗ್ರ ಕಾರ್ಯನಿರ್ವಾಹಕರಿಗೆ(CEO) 88 ಮಿಲಿಯನ್ ಅಮೆರಿಕನ್ ಡಾಲರ್ ಹಣ ಸಿಗಲಿದೆ. ಮಾಹಿತಿಯ ಪ್ರಕಾರ ಸಿಇಒ ಅತಿಹೆಚ್ಚಿನ ಮೊತ್ತದ ಪೇ ಔಟ್ (38.7 ಮಿಲಿಯನ್ ಅಮೆರಿಕನ್ ಡಾಲರ್) ಪಡೆಯಲಿದ್ದಾರೆ.


ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರಿಗೊಂದು ಬಂಬಾಟ್ ಸುದ್ದಿ! ವೇತನದಲ್ಲಿ 49,420 ಹೆಚ್ಚಳ


ವಜಾಗೊಳ್ಳುತ್ತಿರುವ ಹಿನ್ನೆಲೆ ಟ್ವಿಟರ್ ನ ಮುಖ್ಯ ಆರ್ಥಿಕ ಅಧಿಕಾರಿ ನೆಡ್ ಸೇಗಲ್‍ 25.4 ಮಿಲಿಯನ್ ಅಮೆರಿಕನ್ ಡಾಲರ್ ಮತ್ತು ಮುಖ್ಯ ಕಾನೂನು ಅಧಿಕಾರಿ ವಿಜಯ ಗಡ್ದೆ 12.5 ಮಿಲಿಯನ್ ಅಮೆರಿಕನ್ ಡಾಲರ್ ಪಡೆಯಲಿದ್ದಾರೆ. ಮುಖ್ಯ ಗ್ರಾಹಕ ಅಧಿಕಾರಿಯಾಗಿರುವ ಸಾರಾ ಪರ್ಸೊನೆಟ್ 11.2 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಪಡೆಯಲಿದ್ದಾರೆ.


ಮಸ್ಕ್ ಟ್ವಿಟರ್ ಅನ್ನು ಮರು ಸಂಘಟಿಸಲಿದ್ದು, ಬೃಹತ್ ಪ್ರಮಾಣದಲ್ಲಿ ಕೆಲಸಗಾರರ ಸಂಖ್ಯೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಜಾಗತಿಕ ಮಟ್ಟದಲ್ಲಿ ಟ್ವಿಟರ್ ಸಿಬ್ಬಂದಿಗಳ ಪೈಕಿ ಶೇ.75 ರಷ್ಟು ಅಂದರೆ 5,600 ಉದ್ಯೋಗಿಗಳನ್ನು ಮಸ್ಕ್ ವಜಾಗೊಳಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: Insurance New Rule: ಇನ್ಸುರೆನ್ಸ್ ಖರೀದಿಸುವ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ IRDAI


ಈ ಹಿಂದೆ ಮುಖ್ಯ ಟೆಕ್ನಾಲಜಿ ಅಧಿಕಾರಿಯಾಗಿದ್ದ ಪರಾಗ್ ಅಗ್ರವಾಲ್ ಕಳೆದ ನವೆಂಬರ್‌ನಲ್ಲಿ ಟ್ವಿಟರ್ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಐಐಟಿ ಬಾಂಬೆ ಮತ್ತು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಅಗ್ರವಾಲ್ ದಶಕಗಳ ಹಿಂದೆ ಟ್ವಿಟ್ಟರ್‌ ಕಂಪನಿ ಸೇರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ