Patanjali Product  : ಯೋಗ ಗಿರಿ ಬಾಬಾ ರಾಮ್‌ದೇವ್ ಅವರ ಕಂಪನಿಯಾದ ಪತಂಜಲಿ ಫುಡ್ಸ್ ಷೇರು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಹೂಡಿಕೆದಾರರಿಗೆ ಭಾರಿ ಆಘಾತವಾಗಿದೆ. ಕಳೆದ 1 ವಾರದಿಂದ ಪತಂಜಲಿ ಫುಡ್‌ನ ಷೇರುಗಳು ನಿರಂತರವಾಗಿ ಕುಸಿಯುತ್ತಿವೆ. ಕಂಪನಿಯಲ್ಲಿ ಹಣ ಹೂಡಿರುವ ಹೂಡಿಕೆದಾರರು ಇದುವರೆಗೆ ಸುಮಾರು 7000 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಷೇರುಗಳು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಹೂಡಿಕೆದಾರರು ಮತ್ತಷ್ಟು ನಷ್ಟ ಅನುಭವಿಸಬೇಕಾಗುವ ಸ್ಥಿತಿ ಎದುರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಫೆಬ್ರವರಿ 3 ರಂದು ಲೋವರ್ ಸರ್ಕ್ಯೂಟ್ ಅಳವಡಿಕೆ


ಫೆಬ್ರವರಿ 3 ರಂದು, ಪತಂಜಲಿ ಫುಡ್ಸ್ ಷೇರುಗಳು ಲೋವರ್ ಸರ್ಕ್ಯೂಟ್ ಅನ್ನು ಹೊಡೆದವು. 903.35 ಬೆಲೆಗೆ ಉರುಳಿತ್ತು. ವಹಿವಾಟಿನ ಅಂತ್ಯದ ವೇಳೆಗೆ, ಷೇರಿನ ಬೆಲೆಯು 906.80 ರೂ.ನಷ್ಟಿತ್ತು, ಇದು 1 ದಿನದ ಹಿಂದಿನ ದಿನಕ್ಕೆ ಹೋಲಿಸಿದರೆ ಶೇ. 4.63 ರಷ್ಟು ಕುಸಿತವನ್ನು ತೋರಿಸುತ್ತದೆ. ಹಾಗೆ, ಕಂಪನಿಯ ಮಾರುಕಟ್ಟೆ ಬಂಡವಾಳ 32825.69 ಕೋಟಿ ರೂ. ಜನವರಿ 27 ರಂದು ಷೇರಿನ ಬೆಲೆ 1102 ರೂ. ಮಾರುಕಟ್ಟೆ ಬಂಡವಾಳ ಸುಮಾರು 40,000 ಕೋಟಿ ರೂ. ಈ ಹಿನ್ನೆಲೆಯಲ್ಲಿ ವಾರದಲ್ಲಿ 7000 ಕೋಟಿ ರೂ.ಗಳಷ್ಟು ಮಾರುಕಟ್ಟೆ ಬಂಡವಾಳ ಕುಸಿದಿದೆ. ಇದು ಹೂಡಿಕೆದಾರರಿಗೆ ಭಾರಿ ಹೊಡೆತ ನೀಡಿದೆ.


ಇದನ್ನೂ ಓದಿ : PF Rules : ಪಿಎಫ್‌ ಖಾತೆದಾರರ ಗಮನಕ್ಕೆ : ಖಾತೆಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿ


ತ್ರೈಮಾಸಿಕ ಫಲಿತಾಂಶ ಬಿಡುಗಡೆ 


ಪತಂಜಲಿ ಫುಡ್ಸ್ 31 ಡಿಸೆಂಬರ್ 2022 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಶೇ.15ರಷ್ಟು ಏರಿಕೆಯೊಂದಿಗೆ 269 ಕೋಟಿ ರೂ.ಗಳ ಲಾಭವಾಗಿದೆ ಎಂದು ಕಂಪನಿ ವರದಿ ನೀಡಿತ್ತು. ಆದರೆ 1 ವರ್ಷದ ಹಿಂದಿನ ಅವಧಿಯಲ್ಲಿ 234 ಕೋಟಿ ಇತ್ತು. ಪತಂಜಲಿ ಫುಡ್‌ನ ಆದಾಯವು 26% ರಷ್ಟು ಏರಿಕೆಯಾಗಿದ್ದು, 7929 ಕೋಟಿ ರೂ. ಅದೇ 1 ವರ್ಷದ ಹಿಂದೆ 6280 ಕೋಟಿ ರೂ. ಪತಂಜಲಿ ಫುಡ್ಸ್‌ನ ದಾಸ್ತಾನು ಎಷ್ಟು ದಿನ ಹೀಗೆ ಇರುತ್ತದೆ ಎಂದು ಹೇಳುವುದು ಜನರಿಗೆ ಕಷ್ಟವಾಗಿದೆ.


ಆತಂಕಗೊಂಡ ಹೂಡಿಕೆದಾರರು 


ಶೇರು ಮಾರುಕಟ್ಟೆ ಇಳಿಯುತ್ತಿದ್ದಂತೆ. ದಿನದಿಂದ ದಿನಕ್ಕೆ ಹೂಡಿಕೆದಾರರ ಆತಂಕವೂ ಹೆಚ್ಚಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪತಂಜಲಿಯ ಷೇರುಗಳನ್ನು ಖರೀದಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಷೇರುಪೇಟೆಯಲ್ಲಿ ಸಾಕಷ್ಟು ಏರುಪೇರು ಉಂಟಾಗಿದೆ.


ಇದನ್ನೂ ಓದಿ : DA Hike : ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಸಿಹಿ ಸುದ್ದಿ : ನಿಮ್ಮ ಡಿಎ ಹೆಚ್ಚಾಗಲಿದೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.