Home Loan Prepayment: ಗೃಹ ಸಾಲ/ಹೋಂ ಲೋನ್ ಪಡೆಯುವ ಮೂಲಕ ಕನಸಿನ ಮನೆಯನ್ನು ಕಟ್ಟಿಸಬಹುದು. ಆದರೆ, ಬ್ಯಾಂಕ್‌ನಿಂದ ಪಡೆದ ಗೃಹ ಸಾಲವನ್ನು ಇಎಂಐ ಮೂಲಕ ಮರುಪಾವತಿಸಬೇಕಾಗುತ್ತದೆ. ಒಂದೊಮ್ಮೆ ನೀವು ಸಮಯಕ್ಕೆ ಮುಂಚಿತವಾಗಿ ಹೋಂ ಲೋನ್ ಪೂರ್ಣಗೊಳಿಸಲು ಬಯಸಿದರೆ ಈ ಸಂದರ್ಭದಲ್ಲಿ ಕೆಲವು ವಿಶಾರಗಳ ಬಗ್ಗೆ ವಿಶೇಷ ಗಮನಹರಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಏನಿದು ಹೋಂ ಲೋನ್ ಪೂರ್ವಪಾವತಿ? 
ಹೋಂ ಲೋನ್ (Home Loan) ಪಡೆದಿರುವ ಗ್ರಾಹಕರು ಸ್ವಯಂಪ್ರೇರಣೆಯಿಂದ ತಮ್ಮ ಇಎಂಐಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ಗೆ ಪಾವತಿಸಿದಾಗ, ಅದನ್ನು ಪೂರ್ವ-ಪಾವತಿ ಎಂದು ಕರೆಯಲಾಗುತ್ತದೆ. ಹೋಮ್ ಲೋನ್ ಪೂರ್ವಪಾವತಿಯನ್ನು (Home Loan Prepayment) ಭಾಗಶಃ ಅಥವಾ ಸಂಪೂರ್ಣವಾಗಿ ಮಾಡಬಹುದು. 


ಪ್ರತಿ ತಿಂಗಳು ಹೋಂ ಲೋನ್ ಇಎಂಐ (Home Loan EMI) ಪಾವತಿಸುವುದನ್ನು ಹೊರತುಪಡಿಸಿ, ನೀವು ಪೂರ್ವಪಾವತಿಯಾಗಿ ಬ್ಯಾಂಕಿನಲ್ಲಿ ಒಂದು ದೊಡ್ಡ ಮೊತ್ತವನ್ನು ಠೇವಣಿ ಮಾಡಿದಾಗ, ಪೂರ್ವಪಾವತಿಯ ಮೊತ್ತವನ್ನು ನಿಮ್ಮ ಅಸಲು ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಇದು ನೀವು ಬ್ಯಾಂಕ್‌ನಿಂದ ಪಡೆದಿರುವ ಸಾಲದ  ಮೊತ್ತವನ್ನು ಕಡಿಮೆ ಮಾಡುತ್ತದೆ. ಸಾಲದ ಪೂರ್ವಪಾವತಿಯ ಮೂಲಕ ನೀವು ಸಾಲವನ್ನು ಮುಂಚಿತವಾಗಿ ಮರುಪಾವತಿಸಿದಾಗ, ನೀವು ಹೆಚ್ಚಿನ ಬಡ್ಡಿಯನ್ನು ಉಳಿಸಬಹುದಾಗಿದೆ. 


ಇದರ ಹೊರತಾಗಿ, ಅಸಲು ಮೊತ್ತ ಕಡಿಮೆಯಾದಂತೆ, ನೀವು ಪ್ರತಿ ತಿಂಗಳು ಭರಿಸುವ ಇಎಂಐ ಮೊತ್ತವೂ ಸಹ ಕಡಿಮೆ ಆಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಸುಧಾರಿಸುತ್ತದೆ. ನೀವು ಸಾಲವನ್ನು ಮರುಪಾವತಿಸಲು ಸಂಪೂರ್ಣವಾಗಿ ಸಮರ್ಥರಾಗಿರುವಿರಿ ಎಂದು ಸಾಲದ ಪೂರ್ವಪಾವತಿಯು ಸಾಲದಾತನಿಗೆ ಭರವಸೆ ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಭವಿಷ್ಯದಲ್ಲಿ ನೀವು ಎಂದಾದರೂ ಸಾಲವನ್ನು ಪಡೆಯಲು ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. 


ಇದನ್ನೂ ಓದಿ- GST Collection record: ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಸಂಗ್ರಹ, ಕರ್ನಾಟಕದಲ್ಲಿ ಎಷ್ಟು ಗೊತ್ತಾ?


ಆದಾಗ್ಯೂ, ನೀವು ಹೋಂ ಲೋನ್ ಪೂರ್ವ ಪಾವತಿ ಮಾಡುವಾಗ ಐದು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಅವುಗಳೆಂದರೆ... 


* ಫ್ಲೋಟಿಂಗ್ ದರಗಳಲ್ಲಿ ಪಡೆದ ಗೃಹ ಸಾಲ: 
ನೀವು ಹೋಂ ಲೋನ್ ಪೂರ್ವಪಾವತಿ ಮಾಡುವಾಗ ಹೆಚ್ಚಿನ ಶುಲ್ಕವನ್ನು ಪಾವತಿಸಬಾರದು ಎಂದಾದರೆ ಫ್ಲೋಟಿಂಗ್ ದರದಲ್ಲಿ ಗೃಹ ಸಾಲವನ್ನು ಪಡೆಯುವುದು ಒಳ್ಳೆಯದು. ನೀವು ಲೋನ್ ಪೂರ್ವಪಾವತಿ ಮಾಡುವ ಮೊದಲು ಬ್ಯಾಂಕ್‌ನಿಂದ ಈ ಬಗ್ಗೆ ಸರಿಯಾದ ಮಾಹಿತಿ ಪಡೆಯಿರಿ. ಸಾಲದಾತರಿಂದ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ತಿಳಿದುಕೊಳ್ಳಿ. 


* ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾದ ಸಾಲ: 
ನೀವು ಗೃಹ ಸಾಲದ ಹೊರತಾಗಿ ಇನ್ನಾವುದೇ ಹೆಚ್ಚಿನ ಬಡ್ಡಿ ಪವತಿಸಬೇಕಾದ ಸಾಲಗಳನ್ನು ಹೊಂದಿದ್ದರೆ ಅರ್ಥಾತ್ ರ್ಸನಲ್ ಲೋನ್ ಅಥವಾ ಕಾರ್ ಲೋನ್ ಅಥವಾ ಇನ್ನಾವುದೇ ಸಾಲವನ್ನು  ಹೊಂದಿದ್ದರೆ ಮೊದಲು ಅವುಗಳನ್ನು ಪೂರ್ಣಗೊಳಿಸಿ. ನಂತರ ಗೃಹ ಸಾಲವನ್ನು ಪಾವತಿ ಮಾಡಿ. ಏಕೆಂದರೆ ಬೇರೆಲ್ಲಾ ಸಾಲಗಳಿಗಿಂತ ಗೃಹ ಸಾಲದ ಮೇಲಿನ ಬಡ್ಡಿ ಕಡಿಮೆ ಇರುತ್ತದೆ. 


* ತುರ್ತು ನಿಧಿ ಬಳಕೆ: 
ಗೃಹ ಸಾಲವನ್ನು ಪೂರ್ವ ಪಾವತಿ ಮಾಡುವ ಭರದಲ್ಲಿ ಎಂದಿಗೂ ಸಹ ನಿಮ್ಮ ತುರ್ತು ನಿಧಿಯನ್ನು ಬಳಸುವ ತಪ್ಪನ್ನು ಮಾಡಬೇಡಿ. ಇಲ್ಲದಿದ್ದರೆ, ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. 


ಇದನ್ನೂ ಓದಿ- Bank Holiday on May: ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಫುಲ್ ಲಿಸ್ಟ್


* ಎಫ್‌ಡಿ/ಪಾಲಿಸಿ ಬಳಕೆ: 
ನಿಮ್ಮ ಹೋಂ ಲೋನ್ ಮುಂಗಡ ಪಾವತಿಗಾಗಿ ಯಾವುದೇ ಕಾರಣಕ್ಕೂ ಭವಿಷ್ಯಕ್ಕಾಗಿ ಕೂಡಿಟ್ಟಿರುವ ಎಫ್‌ಡಿ ಅಥವಾ ಪಾಲಿಸಿ ಹಣವನ್ನು ಬಳಸಬೇಡಿ.


* ಪೂರ್ವನಿರ್ಧರಿತ ಅವಧಿ: 
ಪೂರ್ವನಿರ್ಧರಿತ ಅವಧಿಯೊಳಗೆ ಗೃಹ ಸಾಲವನ್ನು ಮರುಪಾವತಿ ಮಾಡುವ ಬಗ್ಗೆ ನೀವು ಮೊದಲೇ ಯೋಚಿಸಿ ನಿರ್ಧರಿಸಿದರೆ ಒಳ್ಳೆಯದು. ಇದರಿಂದ ಲಕ್ಷಾಂತರ ರೂಪಾಯಿ ಬಡ್ಡಿಯನ್ನು ಉಳಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.