Post Office Recurring Deposit Account: ಭವಿಷ್ಯದ ಭದ್ರತೆಗಾಗಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ತುಂಬಾ ಮುಖ್ಯ. ಇಂತಹ ಸಣ್ಣ ಉಳಿತಾಯ ಯೋಜನೆಗಳಲ್ಲಿ ಮರುಕಳಿಸುವ ಠೇವಣಿ ಎಂದರೆ ಆರ್‌ಡಿ ಕೂಡ ಒಂದು. ಮರುಕಳಿಸುವ ಠೇವಣಿ ಒಂದು ಪಿಗ್ಗಿ ಬ್ಯಾಂಕ್‌ನಂತೆಯೇ. ಇದರಲ್ಲಿ ಪ್ರತಿ ತಿಂಗಳು ನಿಗದಿತ ಹಣವನ್ನು ಹೂಡಿಕೆ ಮಾಡುವ ಮೂಲಕ ದೊಡ್ಡ ಮೊತ್ತವನ್ನು ನಿಮ್ಮದಾಗಿಸಬಹುದು. ಆದರೆ, ನೀವು ಪೋಸ್ಟ್ ಆಫೀಸ್‌ನಲ್ಲಿ ಆರ್‌ಡಿ ಮಾಡಲು ಯೋಚಿಸುತ್ತಿದ್ದರೆ ಇದರ ನಿಯಮಗಳನ್ನು ತಿಳಿದಿರುವುದು ಅತ್ಯಗತ್ಯ. 


COMMERCIAL BREAK
SCROLL TO CONTINUE READING

ಪೋಸ್ಟ್ ಆಫೀಸ್ ಆರ್‌ಡಿ ಮೆಚುರಿಟಿ ನಿಯಮಗಳು: 
ನೀವು ಪೋಸ್ಟ್ ಆಫೀಸ್‌ನಲ್ಲಿ ಆರ್‌ಡಿ ಅವಧಿಯು 5 ವರ್ಷಗಳು ಎಂಬುದನ್ನು ನೆನಪಿನಲ್ಲಿಡಿ. ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ 6.7% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ. ಅಂದರೆ, ನೀವು ಒಮ್ಮೆ ಆರ್‌ಡಿಯನ್ನು ಪ್ರಾರಂಭಿಸಿದರೆ, ಅದನ್ನು 5 ವರ್ಷಗಳವರೆಗೆ ಮುಂದುವರಿಸಬೇಕಾಗುತ್ತದೆ. ಆದರೆ, ಮುಕ್ತಾಯ ಅವಧಿಗೂ ಮೊದಲೇ ನೀವು ಆರ್‌ಡಿ ತೆಗೆಯಬಹುದೇ? ಇದರ ನಿಯಮಗಳೇನು ಎಂದು ತಿಳಿಯೋಣ... 


ಮುಕ್ತಾಯದ ಮೊದಲು ಆರ್‌ಡಿ ಹಿಂಪಡೆಯುವಾಗ ಈ ನಿಯಮಗಳನ್ನು ತಪ್ಪದೇ ನೆನಪಿನಲ್ಲಿಡಿ: 
ನೀವು ಪೋಸ್ಟ್ ಆಫೀಸ್ ಆರ್‌ಡಿ ಮೇಲಿನ ಬಡ್ಡಿಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಬಯಸಿದರೆ, 5 ವರ್ಷಗಳ ಮೊದಲು ಆರ್‌ಡಿಯನ್ನು ಹಿಂಪಡೆಯುವ ತಪ್ಪನ್ನು ಮಾಡಬೇಡಿ. ಒಂದೊಮ್ಮೆ ನಿಮ್ಮ ಆರ್‌ಡಿ ಮೆಚ್ಯೂರಿಟಿ ಅವಧಿ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ನೀವು ಅದನ್ನು ಹಿಂಪಡೆದರೂ, ದಂಡದ ರೂಪದಲ್ಲಿ ನೀವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. 


ಇದನ್ನೂ ಓದಿ- Credit Card Rules: ಕ್ರೆಡಿಟ್ ಕಾರ್ಡ್‌ನ ಬದಲಾಗಿರುವ ಈ ನಿಯಮಗಳ ಬಗ್ಗೆ ತಿಳಿದಿದೆಯೇ?


ವಾಸ್ತವವಾಗಿ, ನಿಯಮಗಳ ಪ್ರಕಾರ, ಅಗತ್ಯವಿದ್ದರೆ, ಖಾತೆಯನ್ನು ತೆರೆದ ದಿನಾಂಕದಿಂದ ಮೂರು ವರ್ಷಗಳ ನಂತರ ನೀವು ಪೋಸ್ಟ್ ಆಫೀಸ್ ಆರ್‌ಡಿ ಖಾತೆಯನ್ನು ಮುಚ್ಚಬಹುದು. ಆದರೆ ಈ ಪರಿಸ್ಥಿತಿಯಲ್ಲಿ,  ಆರ್‌ಡಿಯ ಪ್ರಸ್ತುತ ಬಡ್ಡಿದರದ ಪ್ರಕಾರ ಬಡ್ಡಿಯನ್ನು ನೀಡಲಾಗುವುದಿಲ್ಲ ಅಂದರೆ ಪ್ರಸ್ತುತ ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ 6.7% ಬಡ್ಡಿಯನ್ನು ನೀಯಲಾಗುತ್ತಿದೆ. ಒಂದೊಮ್ಮೆ ನೀವು ಮಧ್ಯದಲ್ಲೇ ಅಥವಾ ಆರ್‌ಡಿ ಮುಕ್ತಾಯದ ಅವಧಿ ಪೂರ್ಣಗೊಳ್ಳುವ ಮೊದಲು ಆರ್‌ಡಿ ಖಾತೆಯನ್ನು ಮುಚ್ಚಿದರೆ  ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಸಮಾನವಾಗಿ ಬಡ್ಡಿಯನ್ನು ನೀಡಲಾಗುತ್ತದೆ. ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಶೇಕಡಾ 4 ರ ದರದಲ್ಲಿ ಬಡ್ಡಿ ಲಭ್ಯವಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. 


ವಿಸ್ತರಣೆಯ ನಿಯಮಗಳು: 
ನೀವು ಬಯಸಿದರೆ ಐದು ವರ್ಷಗಳ ನಂತರವೂ ನಿಮ್ಮ ಆರ್‌ಡಿಯನ್ನು ಮುಂದುವರಿಸಬಹುದು. ಇದಕ್ಕಾಗಿ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ ಆ ಖಾತೆಯನ್ನು ತೆರೆಯುವ ಸಮಯದಲ್ಲಿ ನೀಡಲಾದ ನಿಮ್ಮ ವಿಸ್ತೃತ ಆರ್‌ಡಿ ಖಾತೆಗೆ ಅದೇ ಬಡ್ಡಿಯನ್ನು ನೀಡಲಾಗುತ್ತದೆ. ವಿಸ್ತೃತ ಖಾತೆಯನ್ನು ಯಾವುದೇ ಸಮಯದಲ್ಲಿ ಮುಚ್ಚಬಹುದು. ಆದರೆ ಮೆಚ್ಯೂರಿಟಿಯ ನಂತರ ಒಂದು, ಎರಡು, ಮೂರು ಇತ್ಯಾದಿ ವರ್ಷಗಳು ಪೂರ್ಣಗೊಂಡ ನಂತರವೇ ವಿಸ್ತೃತ ಖಾತೆಯನ್ನು ಮುಚ್ಚಿದರಷ್ಟೇ ನಿಮಗೆ ಲಾಭವಾಗುತ್ತದೆ ಎಂಬುದನ್ನು ಮರೆಯಬೇಡಿ. 


ಇದನ್ನೂ ಓದಿ- UPI Payment:ಈ ರೀತಿ ಆದ್ರೆ ಬಹುತೇಕ ಜನ UPI ಬಳಸುವುದನ್ನ ನಿಲ್ಲಿಸ್ತಾರೆ, ಸಮೀಕ್ಷೆಯಲ್ಲಿ ಗಂಭೀರ ಅಂಶ ಬಹಿರಂಗ!


ಗಮನಾರ್ಹವಾಗಿ, ಪೋಸ್ಟ್ ಆಫೀಸ್ ಆರ್‌ಡಿ ಬಡ್ಡಿ ದರವನ್ನು ಸಂಪೂರ್ಣ ವರ್ಷಗಳಿಗೆ ಅನ್ವಯಿಸಲಾಗುತ್ತದೆ. ಆದರೆ ಯಾವುದೇ ವರ್ಷದ ಅವಧಿಯು ಒಂದು ವರ್ಷಕ್ಕಿಂತ ಕಡಿಮೆಯಿದ್ದರೆ ಅಂತಹ ಆರ್‌ಡಿ ಖಾತೆಯಲ್ಲಿ ಪೋಸ್ಟ್ ಆಫೀಸ್ ಉಳಿತಾಯ ಖಾತೆ ಬಡ್ಡಿ ದರವು ಅನ್ವಯಿಸುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.