Paytm FASTag Port: ಫಾಸ್ಟ್‌ಟ್ಯಾಗ್ ಪೋರ್ಟ್ ಮಾಡುವ ಸುಲಭ ವಿಧಾನ
Paytm FASTag Port: ನಿಮ್ಮ ಫಾಸ್ಟ್‌ಟ್ಯಾಗ್ ಕೂಡ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಲಿಂಕ್ ಆಗಿದ್ದರೆ, ನೀವು ಅದನ್ನು ಡಿಲೀಟ್ ಮಾಡುವುದರ ಜೊತೆಗೆ ಸುಲಭವಾಗಿ ಪೋರ್ಟ್ ಕೂಡ ಮಾಡಬಹುದು.
Paytm FASTag Port: ಭಾರತೀಯ ರಿಸರ್ವ್ ಬ್ಯಾಂಕ್(RBI) ಇತ್ತೀಚೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ನಿಷೇಧಿಸಿದೆ. ಇದರ ಬೆನ್ನಲ್ಲೇ ಇತ್ತೀಚೆಗೆ, ಅಧಿಕೃತ ಬ್ಯಾಂಕ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಈ ಪಟ್ಟಿಯಿಂದ ಕೈಬಿಟ್ಟಿದೆ. ಆರ್‌ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಠೇವಣಿ ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸುವುದನ್ನು ನಿಷೇಧಿಸಿರುವುದೇ ಇದಕ್ಕೆ ಮುಖ್ಯ ಕಾರಣ ಎಂಬುದು ಗಮನಾರ್ಹ ವಿಷಯ.
ಎನ್‌ಎಚ್‌ಎಐ ಬಿಡುಗಡೆ ಮಾಡಿರುವ ಅಧಿಕೃತ ಬ್ಯಾಂಕ್‌ಗಳ ಪಟ್ಟಿಯಲ್ಲಿ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಯೂನಿಯನ್ ಬ್ಯಾಂಕ್, ಕಾಸ್ಮಾಸ್ ಬ್ಯಾಂಕ್. , ಈಕ್ವಿಟಾಸ್ ಸ್ಮಾಲ್ ಹಣಕಾಸು ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್ ಇತ್ಯಾದಿಗಳನ್ನು ಸೇರಿಸಲಾಗಿದೆ.
ಇದನ್ನೂ ಓದಿ- Home Loan ತೆಗೆದುಕೊಳ್ಳುವಾಗ ಈ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ!
ಆದಾಗ್ಯೂ, ನೀವು ಪೇಟಿಎಂ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಇನ್ನೂ ಬ್ಯಾಲೆನ್ಸ್ ಹೊಂದಿದ್ದರೆ ಮಾರ್ಚ್ 15 ರ ನಂತರವೂ ನೀವು ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ಬಳಸಬಹುದು ಎಂಬುದು ನೆಮ್ಮದಿಯ ಸುದ್ದಿ. ಆದಾಗ್ಯೂ,ಇದನ್ನು ಟಾಪ್ ಅಪ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ, ಪೇಟಿಎಂ ಬ್ಯಾಂಕ್‌ಗೆ ಫಾಸ್ಟ್‌ಟ್ಯಾಗ್ ಲಿಂಕ್ ಆಗಿರುವ ಚಾಲಕರು ಈಗ ಮತ್ತೊಂದು ಬ್ಯಾಂಕ್‌ನಿಂದ ಫಾಸ್ಟ್‌ಟ್ಯಾಗ್ ನೀಡಲು ಯೋಚಿಸುತ್ತಿದ್ದಾರೆ. ನೀವು ಅಂತಹವರಲ್ಲಿ ಒಬ್ಬರಾಗಿದ್ದರೆ ನಿಮ್ಮ ಪೇಟಿಎಂ ಫಾಸ್ಟ್‌ಟ್ಯಾಗ್ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ? ನಂತರ ಅದನ್ನು ಪೋರ್ಟ್ ಮಾಡವುದು ಹೇಗೆ ಎಂಬುದನ್ನು ತಿಳಿಯೋಣ...
ಇದನ್ನೂ ಓದಿ- Debit-Credit Cards: ಈ ಸ್ಥಳಗಳಲ್ಲಿ ಮಿಸ್ ಆಗಿಯೂ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬೇಡಿ
ಪೇಟಿಎಂ ಪೇಮೆಂಟ್ಸ್ ಫಾಸ್ಟ್‌ಟ್ಯಾಗ್ ಅನ್ನು ಡಿಲೀಟ್ ಮಾಡುವುದು ಹೇಗೆ?
ನೀವು ಹೊಸ ಫಾಸ್ಟ್‌ಟ್ಯಾಗ್ ಖಾತೆಯನ್ನು ರಚಿಸಲು ಮೊದಲಿಗೆ ನಿಮ್ಮ ಹಳೆಯ ಫಾಸ್ಟ್‌ಟ್ಯಾಗ್ ಖಾತೆಯನ್ನು ಡಿಲೀಟ್ ಮಾಡಬೇಕಾಗುತ್ತದೆ. ಇದಕ್ಕಾಗಿ, ಈ ಕೆಳಗಿನ ಹಂತಗಳನ್ನು ಅನುಸರಿಸಿ...
* ಮೊದಲಿಗೆ ಬಳಕೆದಾರ ಐಡಿ, ವ್ಯಾಲೆಟ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಫಾಸ್ಟ್ಯಾಗ್ ಪೇಟಿಎಂ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
* ಬಳಿಕ ಸಹಾಯ ಮತ್ತು ಬೆಂಬಲ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ಫಾಸ್ಟ್‌ಟ್ಯಾಗ್ ಪ್ರೊಫೈಲ್ ನವೀಕರಿಸಲು ಸಂಬಂಧಿಸಿದ ಪ್ರಶ್ನೆಯನ್ನು ಆಯ್ಕೆಮಾಡಿ.
* ಇದರಲ್ಲಿ ಕಾಣುವ 'ಐ ವಾಂಟ್ ಟು ಕ್ಲೋಸ್ ಮೈ ಫಾಸ್ಟ್‌ಟ್ಯಾಗ್' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಸಲ್ಲಿಸಿದರೆ ಫಾಸ್ಟ್‌ಟ್ಯಾಗ್ ಖಾತೆಯನ್ನು ಡಿಲೀಟ್ ಮಾಡಬಹುದು.
ಫಾಸ್ಟ್‌ಟ್ಯಾಗ್ ಖಾತೆಯನ್ನು ಪೋರ್ಟ್ ಮಾಡವುದು ಹೇಗೆ?
ನೀವು ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯನ್ನು ಇನ್ನೊಂದು ಬ್ಯಾಂಕ್‌ಗೆ ಪೋರ್ಟ್ ಮಾಡಲು ಬಯಸಿದರೆ ಪೇಟಿಎಂ ಬ್ಯಾಂಕ್‌ನಿಂದ ಮತ್ತೊಂದು ಸೇವಾ ಪೂರೈಕೆದಾರರಿಗೆ ಫಾಸ್ಟ್‌ಟ್ಯಾಗ್ ಅನ್ನು ಪೋರ್ಟ್ ಮಾಡಲು ನೀವು ಇತರ ಬ್ಯಾಂಕ್‌ನ ಗ್ರಾಹಕ ಸೇವೆಯನ್ನು ಸಂಪರ್ಕಿಸಬೇಕಾಗುತ್ತದೆ. ಬಳಿಕ ಅವರ ಮಾರ್ಗದರ್ಶನದಂತೆ ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯನ್ನು ಪೋರ್ಟ್ ಮಾಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.