ಅಕ್ಟೋಬರ್ 1 ರಿಂದ ಬದಲಾಗಲಿವೆ ಪಿಂಚಣಿ ನಿಯಮಗಳು..! ಪ್ರತಿಯೊಬ್ಬರಿಗೂ ಅನ್ವಯವಾಗುವ ನಿಯಮದ ಸಂಪೂರ್ಣ ವಿವರ ಇಲ್ಲಿದೆ
ಪಿಂಚಣಿದಾರರು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, 1 ಅಕ್ಟೋಬರ್‌ನಿಂದ 30 ನವೆಂಬರ್ 2021 ರವರೆಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು ನವೆಂಬರ್ 1 ರಿಂದ ನವೆಂಬರ್ 30 ರವರೆಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ನವದೆಹಲಿ : Pension News: ಅಕ್ಟೋಬರ್ 1, 2021 ರಿಂದ, ಹೊಸ ಪಿಂಚಣಿ ನಿಯಮ ಜಾರಿಗೆ ಬರಲಿದೆ. ಪಿಂಚಣಿದಾರರು ಈ ಹೊಸ ನಿಯಮವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಈಗ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (Digital Life Certificate) ಅನ್ನು ದೇಶದ ಎಲ್ಲಾ ಮುಖ್ಯ ಅಂಚೆ ಕಚೇರಿಗಳ ಜೀವನ್ ಪ್ರಮಾಣ ಕೇಂದ್ರದಲ್ಲಿ ಅಂದರೆ ಜೆಪಿಸಿಯಲ್ಲಿ ಜಮಾ ಮಾಡಬಹುದು.
ಪಿಂಚಣಿದಾರರು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, 1 ಅಕ್ಟೋಬರ್‌ನಿಂದ 30 ನವೆಂಬರ್ 2021 ರವರೆಗೆ ಜೀವನ ಪ್ರಮಾಣಪತ್ರವನ್ನು (Jeevan praman patra) ಸಲ್ಲಿಸಬಹುದು. 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು ನವೆಂಬರ್ 1 ರಿಂದ ನವೆಂಬರ್ 30 ರವರೆಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ಇದನ್ನೂ ಓದಿ : EPFO Alert! ನೌಕರ ವರ್ಗದವರಿಗೆ ಅಲರ್ಟ್ ಜಾರಿಗೊಳಿಸಿದ EPFO, ಸಲಹೆ ಅನುಸರಿಸದೆ ಹೋದರೆ ಖಾತೆ ಖಾಲಿ
ಇಂಡಿಯಾ ಪೋಸ್ಟ್ ನಿಂದ ಈ ಸೇವೆ ಲಭ್ಯ :
ಲೈಫ್ ಸರ್ಟಿಫಿಕೇಟ್ (Life certificate) ಅನ್ನು ಪೋಸ್ಟ್ ಆಫೀಸ್‌ನಲ್ಲಿ ಜಮಾ ಮಾಡಲಾಗುತ್ತಿದೆ. ಜೀವನ್ ಪ್ರಮಾಣ ಕೇಂದ್ರದ ಐಡಿ ಬಂದ್ ನಿಷ್ಕ್ರಿಯಗೊಂಡಿದ್ದರೆ, ಅದನ್ನು ಸಮಯಕ್ಕೆ ಸರಿಯಾಗಿ ಆಕ್ಟಿವ್ ಮಾಡುವಂತೆ, ಭಾರತೀಯ ಅಂಚೆ ಇಲಾಖೆಯು ಎಲ್ಲ ಪಿಂಚಣಿದಾರರನ್ನು ಒತ್ತಾಯಿಸಿದೆ. ಜೀವನ್ ಪ್ರಮಾಣ ಕೇಂದ್ರಗಳನ್ನು ಹೊಂದಿರದ ಮುಖ್ಯ ಅಂಚೆ ಕಚೇರಿಗಳಲ್ಲಿ (Post office) ಈ ಕೇಂದ್ರವನ್ನು ತಕ್ಷಣವೇ ಸ್ಥಾಪಿಸಲು ಸರ್ಕಾರದಿಂದ ಆದೇಶಿಸಿದೆ.
ಇಂಡಿಯಾ ಪೋಸ್ಟ್ ಈಗಾಗಲೇ ಮಾಹಿತಿಯನ್ನು ನೀಡಿದೆ :
ಹಿರಿಯ ನಾಗರಿಕರು (Senior Citizen) ಈಗ ಹತ್ತಿರದ ಅಂಚೆ ಕಚೇರಿಯ ಸಿಎಸ್ ಸಿ ಕೌಂಟರ್ ನಲ್ಲಿ ಜೀವನ್ ಪ್ರಮಾಣ ಸೇವೆಯನ್ನು ಸುಲಭವಾಗಿ ಪಡೆಯಬಹುದು' ಎಂದು ಇಂಡಿಯಾ ಪೋಸ್ಟ್ (India Post) ಟ್ವೀಟ್ ನಲ್ಲಿ ಮಾಹಿತಿ ನೀಡಿದೆ. ಜೀವನ್ ಪ್ರಮಾಣದ ಅಧಿಕೃತ ವೆಬ್‌ಸೈಟ್ - jeevanpramaan.gov.in ಪ್ರಕಾರ, 'ಈ ಜೀವನ್ ಪ್ರಮಾಣವನ್ನು ಪಡೆಯಲು, ಪಿಂಚಣಿ (Pension) ಪಡೆಯುವ ವ್ಯಕ್ತಿಯು ವೈಯಕ್ತಿಕವಾಗಿ ಪಿಂಚಣಿ ವಿತರಿಸುವ ಏಜೆನ್ಸಿಗೆ ಭೇಟಿ ನೀಡಬೇಕು ಅಥವಾ ಪ್ರಾಧಿಕಾರದಿಂದ ನೀಡಲಾದ ಜೀವ ಪ್ರಮಾಣಪತ್ರವನ್ನು ಪಡೆಯಬೇಕು.
ಇದನ್ನೂ ಓದಿ : ಅಂಚೆ ಇಲಾಖೆಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹಣದ ಹೊಳೆ ಖಂಡಿತಾ..! ಶೀಘ್ರ ದುಪ್ಪಟ್ಟಾಗಲಿದೆ ಮೊತ್ತ
ಜೀವನ ಪ್ರಮಾಣಪತ್ರವನ್ನು ಸುಲಭವಾಗಿ ಪಡೆಯಬಹುದು :
ಇಲಾಖೆಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಭಾರತ ಸರ್ಕಾರದ ಪಿಂಚಣಿದಾರರ ಯೋಜನೆಗಾಗಿ ಡಿಜಿಟಲ್ ಲೈಫ್ ಪ್ರಮಾಣಪತ್ರವು (Digital Life certificate) ಜೀವನ ಪ್ರಮಾಣಪತ್ರವನ್ನು ಪಡೆಯುವ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಈ ಪ್ರಮಾಣಪತ್ರವನ್ನು ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಇದರ ಗುರಿಯಾಗಿದೆ. ಈ ಅನುಕ್ರಮದಲ್ಲಿ, ಇಂಡಿಯಾ ಪೋಸ್ಟ್ ಈ ಸೌಲಭ್ಯವನ್ನು ನೀಡಿದೆ.
ಅರ್ಜಿ ಹಾಕುವುದು ಹೇಗೆ ?
ಅರ್ಜಿಗಾಗಿ, ನಿಮ್ಮ ಮೊಬೈಲ್ ಸಂಖ್ಯೆಯಿಂದ 7738299899 ಗೆ SMS ಕಳುಹಿಸುವ ಮೂಲಕ ನೀವು ಮೊದಲು ಹತ್ತಿರದ ಜೀವನ್ ಪ್ರಮಾಣ ಕೇಂದ್ರದ ಅಪ್ಡೇಟ್ ಪಡೆಯಬಹುದು. SMS ಗಾಗಿ 'JPL <PIN ಕೋಡ್>' ಟೈಪ್ ಮಾಡಬೇಕಾಗುತ್ತದೆ. ಪಿಂಚಣಿದಾರರಿಗೆ ನೀಡುವ ಪಿನ್ ಕೋಡ್‌ನಿಂದ ಹತ್ತಿರದ ಜೀವನ್ ಪ್ರಮಾಣ ಕೇಂದ್ರಗಳ ಪಟ್ಟಿಯನ್ನು ಪಡೆಯಬಹುದು. ಈ ಪಟ್ಟಿಯನ್ನು ಪಡೆದ ನಂತರ, ನಿಮ್ಮ ಹತ್ತಿರದ ಕೇಂದ್ರವನ್ನು ಆಯ್ಕೆ ಮಾಡಬಹುದು. ಅಲ್ಲಿಗೆ ಹೋಗುವುದರ ಮೂಲಕ ನಿಮ್ಮ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.