Pension News Update: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನೀವೂ ಒಂದು ವೇಳೆ ಪಿಂಚಣಿ ಯೋಜನೆಯ ಲಾಭಾರ್ಥಿಗಳಾಗಿದ್ದಾರೆ ಈ ಸಂತಸದ ಸುದ್ದಿ ಕೇವಲ ನಿಮಗಾಗಿ. ಪಿಂಚಣಿ ದಿನಾಂಕಕ್ಕೆ ಸಂಬಂಧಿಸಿದಂತೆ ಸರ್ಕಾರ ಈ ವಿಶೇಷ ಘೋಷಣೆ ಮಾಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ ಪಿಂಚಣಿ) ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಇಪಿಎಫ್‌ಒ ಪರವಾಗಿ ಸುತ್ತೋಲೆ ಹೊರಡಿಸುವ ಮೂಲಕ ಪಿಂಚಣಿ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗಿದೆ. ನಿಮಗೆ ಯಾವ ದಿನ ಪಿಂಚಣಿ ಸಿಗಲಿದೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ತಿಂಗಳ ಕೊನೆಯ ಕೆಲಸದ ದಿನದಂದು ಪಿಂಚಣಿ ನೀಡಲಾಗುವುದು
ಇಪಿಎಫ್‌ಒ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಪಿಂಚಣಿದಾರರಿಗೆ ತಿಂಗಳ ಕೊನೆಯ ಕೆಲಸದ ದಿನದಂದು ಪಿಂಚಣಿ ನೀಡಲಾಗುವುದು, ಅಂದರೆ ಇನ್ನು ಮುಂದೆ, ಇಪಿಎಸ್ ಸೌಲಭ್ಯವನ್ನು ಪಡೆಯುವವರು ಪಿಂಚಣಿಗಾಗಿ ತಿಂಗಳಲ್ಲಿ ಒಂದು ದಿನವೂ ಹೆಚ್ಚಿಗೆ ಕಾಯಬೇಕಾಗಿಲ್ಲ.


ಆರ್‌ಬಿಐ ಈ ಮಾಹಿತಿ ನೀಡಿದೆ
ಮಾಧ್ಯಮ ವರದಿಗಳಿಂದ ಪ್ರಕಾರ, ಪಿಂಚಣಿ ವಿಭಾಗವನ್ನು ಪರಿಶೀಲಿಸಲಾಗಿದೆ. ಇದರೊಂದಿಗೆ, ಎಲ್ಲಾ ಕ್ಷೇತ್ರ ಅಧಿಕಾರಿಗಳು ಮಾಸಿಕ ಬಿಆರ್‌ಎಸ್ ಅನ್ನು ಪಿಂಚಣಿ ಇಲಾಖೆಗೆ ಕಳುಹಿಸಬಹುದು ಎಂದು ಆರ್‌ಬಿಐ ನಿರ್ಧರಿಸಿದೆ. ಇದರಲ್ಲಿ ಎಲ್ಲ ಪಿಂಚಣಿದಾರರ ಖಾತೆಗೆ ಸಕಾಲಕ್ಕೆ ಹಣ ಸೇರಬೇಕು ಎಂದು ತಿಳಿಸಲಾಗಿದೆ. ಇದರೊಂದಿಗೆ ಎಲ್ಲ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಹೇಳಿದೆ.


58 ವರ್ಷಗಳ ನಂತರ ಪಿಂಚಣಿಗೆ ಅವಕಾಶ
ಯಾವುದೇ ಉದ್ಯೋಗಿಯು 58 ವರ್ಷಗಳ ನಂತರ ಪಿಂಚಣಿ ಪಡೆಯಲು ಅರ್ಹನಾಗಿರುತ್ತಾನೆ ಎಂಬುದು ಇಲ್ಲಿ ಉಲ್ಲೇಖನೀಯ. ಇದಕ್ಕಾಗಿ ನೌಕರರು ನಿರಂತರವಾಗಿ ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡುವುದು ಕಡ್ಡಾಯವಾಗಿದೆ. ಇದರೊಂದಿಗೆ, ಇಪಿಎಫ್‌ಗೆ ಕೊಡುಗೆ ನೀಡುವ ಉದ್ಯೋಗಿಗಳು ಸಹ ಇಪಿಎಸ್‌ಗೆ ಅರ್ಹರಾಗಿದ್ದಾರೆ.


ಇದನ್ನೂ ಓದಿ-Indian Railway: ಕೋಟ್ಯಾಂತರ ರೈಲು ಯಾತ್ರಿಗಳಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್!


ಪಿಂಚಣಿದಾರರು ಈ ಹಿಂದೆ ಸಾಕಷ್ಟು ದೂರುಗಳನ್ನು ನೀಡಿದ್ದಾರೆ
ಇತ್ತೀಚಿನ ದಿನಗಳಲ್ಲಿ ಪಿಂಚಣಿದಾರರಿಂದ ಸಾಕಷ್ಟು ದೂರುಗಳು ಬಂದಿದ್ದು, ಪಿಂಚಣಿಗಾಗಿ ಜನರು ಬಹಳ ದಿನ ಕಾಯಬೇಕಾಗುತ್ತದೆ ಎಂದಿದ್ದರು. ಹೀಗಾಗಿ ಇದೀಗ ನೌಕರರ ಭವಿಷ್ಯ ನಿಧಿ ಸಂಘಟನೆ ಪಿಂಚಣಿ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದೆ.


ಇದನ್ನೂ ಓದಿ-Akshay Tritiya 2023: ಚಿನ್ನಾಭರಣ ಅಲ್ಲ, ಈ ನಾಲ್ಕು ರೂಪದಲ್ಲಿ ಚಿನ್ನ ಖರೀದಿಸಿ, ಸಿಗುತ್ತೆ ಬಂಪರ್ ಲಾಭ!


ಇಪಿಎಫ್‌ಒ ತೆಗೆದುಕೊಂಡ ಈ ನಿರ್ಧಾರದ ನಂತರ ಪಿಂಚಣಿದಾರರಲ್ಲಿ ಸಂತಸದ ವಾತಾವರಣವಿದೆ. ಈಗ ಆ ಜನರು ಪಿಂಚಣಿಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಪಿಂಚಣಿ ಮೊತ್ತವನ್ನು ತಿಂಗಳ ಕೊನೆಯ ದಿನಾಂಕದಂದು ಎಲ್ಲಾ ಪಿಂಚಣಿದಾರರ ಖಾತೆಗೆ ವರ್ಗಾಯಿಸಲಾಗುತ್ತದೆ. ಅನೇಕ ಬಾರಿ ಪಿಂಚಣಿದಾರರು ಸಾರ್ವತ್ರಿಕ ರಜೆಗಳ ಕಾರಣ ಅಥವಾ ಯಾವುದೇ ಕಾರಣಗಳಿಂದಾಗಿ ದೀರ್ಘಾವಧಿಯವರೆಗೆ ಕಾಯಬೇಕಾಗುತ್ತಿತ್ತು. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.