ಬೆಂಗಳೂರು: ಕಳೆದ ಕೆಲ ದಿನಗಳಿಂದ ಸ್ಥಿರವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸಾರ್ವಜನಿಕರಿಗೆ ಕೊಂಚ ರಿಲೀಫ್‌ ನೀಡಿದೆ. ತೈಲ ಕಂಪನಿಗಳು ಏಪ್ರಿಲ್ 6 ರಂದು ಕೊನೆಯದಾಗಿ ಲೀಟರ್‌ಗೆ 80 ಪೈಸೆ ಹೆಚ್ಚಿಸಿದ್ದವು. ಇನ್ನು ದೂರ ಪ್ರಯಾಣ ಮಾಡುವವರು ತಮ್ಮ ವಾಹನ ಚಾಲನೆ ಮಾಡುವ ಮುನ್ನ ಪೆಟ್ರೋಲ್‌ ಡೀಸೆಲ್‌ ಬೆಲೆ ಎಷ್ಟಿದೆ ಎಂದು ನೋಡಿಕೊಳ್ಳುವುದು ಸೂಕ್ತ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Gold-Silver Price: ಚಿನ್ನ ಪ್ರಿಯರಿಗೆ ಶಾಕ್‌: ಮತ್ತೆ ಏರಿಕೆ ಕಂಡ ಬಂಗಾರದ ಬೆಲೆ


ರಾಜ್ಯ ರಾಜಧಾನಿ ಬೆಂಗಳೂರು ನಗರದ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​​ಗೆ 111.09 ರೂಪಾಯಿ ಇದ್ದು, ಡೀಸೆಲ್ ಬೆಲೆ ಒಂದು ಲೀಟರ್​ಗೆ 94.79 ರೂಪಾಯಿ ದರವಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಇಂತಿದೆ. ಮಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 110.29 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್​ಗೆ 94.03 ರೂಪಾಯಿಯಿದೆ. ರಾಜ್ಯದಲ್ಲಿಯೂ ಸಹ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 


ಮೈಸೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 110.61 ರೂಪಾಯಿ, ಡೀಸೆಲ್‌ ದರ ಒಂದು ಲೀಟರ್‌ಗೆ 94.35 ರೂಪಾಯಿ ಇದೆ. ಶಿವಮೊಗ್ಗದಲ್ಲಿ ಇಂದಿನ ತೈಲ ದರ ಪೆಟ್ರೋಲ್ ಲೀಟರ್​ಗೆ 112.74 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.19 ರೂಪಾಯಿ ಇದೆ. ದಾವಣಗೆರೆಯಲ್ಲಿ ಪೆಟ್ರೋಲ್ ಲೀಟರ್​ಗೆ 113.09 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.46 ರೂಪಾಯಿ ಇದೆ. 


​ಇದನ್ನು ಓದಿ: Vegetable price: ಗ್ರಾಹಕರೇ ಗಮನಿಸಿ: ಇಲ್ಲಿದೆ ಇಂದಿನ ತರಕಾರಿಗಳ ಬೆಲೆ


ಮಹಾನಗರಗಳು ಪೆಟ್ರೋಲ್ ದರ ಡೀಸೆಲ್ ದರ
ನವದೆಹಲಿ 105.41 ರೂ 96.67 ರೂ
ಮುಂಬೈ 120.51 ರೂ 104.77 ರೂ
ಕೋಲ್ಕತ್ತಾ 115.12 ರೂ 99.83 ರೂ
ಚೆನ್ನೈ 110.85 ರೂ 100.94 ರೂ
ಭೋಪಾಲ್  118.14 ರೂ 101.16 ರೂ
ಹೈದರಾಬಾದ್ 119.49 ರೂ 105. 49 ರೂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.