ಬೆಂಗಳೂರು: ಕಳೆದ ಕೆಲ ದಿನಗಳಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ತಮಿಳುನಾಡಿನ ಚೆನ್ನೈನಲ್ಲಿ 10 ಪೈಸೆ ಲೆಕ್ಕದಲ್ಲಿ ಏರಿಳಿತವಾಗುತ್ತಿತ್ತು. ಇದೀಗ ಮತ್ತೆ 10 ಪೈಸೆ ಇಳಿಕೆ ಕಂಡುಬಂದಿದ್ದು, ಹೊರತಾಗಿ ದೇಶದೆಲ್ಲೆಡೆ ದರ ಸ್ಥಿರವಾಗಿದೆ. ತೈಲ ಕಂಪನಿಗಳು ದರ ಏರಿಕೆ ಮಾಡದಿರುವುದು ಸಾರ್ವಜನಿಕರಿಗೆ ಕೊಂಚ ರಿಲೀಫ್‌ ನೀಡಿದೆ ಎನ್ನಬಹುದು. ಇನ್ನು ತೈಲ ಕಂಪನಿಗಳು ಏಪ್ರಿಲ್ 6 ರಂದು ಕೊನೆಯದಾಗಿ ಲೀಟರ್‌ಗೆ 80 ಪೈಸೆ ಹೆಚ್ಚಿಸಿದ್ದವು. 


COMMERCIAL BREAK
SCROLL TO CONTINUE READING

ರಾಜ್ಯ ರಾಜಧಾನಿ ಬೆಂಗಳೂರಿನ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​​ಗೆ 111.09 ರೂಪಾಯಿ ಇದ್ದು, ಡೀಸೆಲ್ ಬೆಲೆ ಒಂದು ಲೀಟರ್​ಗೆ 94.79 ರೂಪಾಯಿ ಇದೆ.  ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಇಂತಿದೆ. ಮಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 110.29 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್​ಗೆ 94.03 ರೂಪಾಯಿಯಿದೆ. ರಾಜ್ಯದಲ್ಲಿಯೂ ಸಹ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದನ್ನು ಗಮನಿಸಬಹುದು. 


ಮೈಸೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 110.61 ರೂಪಾಯಿ, ಡೀಸೆಲ್‌ ದರ ಒಂದು ಲೀಟರ್‌ಗೆ 94.35 ರೂಪಾಯಿ ಇದೆ. ಶಿವಮೊಗ್ಗದಲ್ಲಿ ಇಂದಿನ ತೈಲ ದರ ಪೆಟ್ರೋಲ್ ಲೀಟರ್​ಗೆ 112.74 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.19 ರೂಪಾಯಿ ಇದೆ. ದಾವಣಗೆರೆಯಲ್ಲಿ ಪೆಟ್ರೋಲ್ ಲೀಟರ್​ಗೆ 113.09 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.46 ರೂಪಾಯಿ ಇದೆ. 


ಮಹಾನಗರಗಳು ಪೆಟ್ರೋಲ್ ದರ ಡೀಸೆಲ್ ದರ
ನವದೆಹಲಿ 105.41 ರೂ 96.67 ರೂ
ಮುಂಬೈ 120.51 ರೂ 104.77 ರೂ
ಕೋಲ್ಕತ್ತಾ 115.12 ರೂ 99.83 ರೂ
ಚೆನ್ನೈ  110.85 ರೂ 100.94 ರೂ
ಭೋಪಾಲ್ 118.14 ರೂ 101.16 ರೂ
ಹೈದರಾಬಾದ್ 119.49 ರೂ 105. 49 ರೂ

https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.