ನವದೆಹಲಿ: ಕಳೆದ ಕೆಲವು ದಿನಗಳಲ್ಲಿ ದಾಖಲೆಯ ಕುಸಿತದ ನಂತರ ಕಚ್ಚಾ ತೈಲದ ಬೆಲೆಯಲ್ಲಿ ಇದೀಗ ಭಾರೀ ಏರಿಕೆ ಕಾಣುತ್ತಿದೆ. ಉತ್ಪಾದನೆ  ಕಡಿತಗೊಳಿಸುವ ಒಪೆಕ್ ರಾಷ್ಟ್ರಗಳ ನಿರ್ಧಾರದ ನಂತರ ಸ್ಥಿರವಾದ ಏರಿಕೆ  ಕಾಣುತ್ತಿದೆ. ಭಾನುವಾರ ಬೆಳಗ್ಗೆ ಕಚ್ಚಾತೈಲ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಕಳೆದ 5 ತಿಂಗಳಿನಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ದರ ಒಂದೇ ಮಟ್ಟದಲ್ಲಿದೆ.


COMMERCIAL BREAK
SCROLL TO CONTINUE READING

ಒಪೆಕ್ ರಾಷ್ಟ್ರಗಳಿಂದ ಉತ್ಪಾದನೆ ಕಡಿತಗೊಳಿಸಲಾಗಿದ್ದು, ನ.1ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್‌ಗೆ 40 ಪೈಸೆಯಷ್ಟು ಇಳಿಕೆ ಮಾಡಲಾಗಿದೆ. ಆದರೆ ನಂತರ ಅದು ಕಾರ್ಯರೂಪಕ್ಕೆ ಬರಲಿಲ್ಲ. ಡಬ್ಲ್ಯುಟಿಐ ಕಚ್ಚಾ ತೈಲವು ಭಾನುವಾರ ಬೆಳಗ್ಗೆ ಬ್ಯಾರೆಲ್‌ಗೆ $4 ಕ್ಕಿಂತ ಹೆಚ್ಚಾಗಿ $92.61ಕ್ಕೆ ಏರಿಕೆ ಕಂಡಿದೆ. ಬ್ರೆಂಟ್ ಕ್ರೂಡ್ ಆಯಿಲ್ ಸಹ $4 ಏರಿಕೆ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ $98.57ಗೆ ತಲುಪಿದೆ. ಒಪೆಕ್ ರಾಷ್ಟ್ರಗಳ ಉತ್ಪಾದನೆ ಕಡಿತದಿಂದ ಕಳೆದ ಕೆಲವು ದಿನಗಳಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ.


ಇದನ್ನೂ ಓದಿ: ಉಕ್ರೇನ್ - ರಷ್ಯಾ ಯುದ್ಧ ಪರಿಣಾಮ: ರಾಜ್ಯದಲ್ಲಿ ಗರಿಗೆದರಿದ ಹಸಿರು ಇಂಧನ ಕ್ಷೇತ್ರದಲ್ಲಿನ ಹೂಡಿಕೆ


ದೇಶೀಯ ಮಾರುಕಟ್ಟೆಯಲ್ಲಿ ತೈಲದರ


ದೇಶೀಯ ಮಾರುಕಟ್ಟೆಯಲ್ಲಿ ಕಳೆದ 5 ತಿಂಗಳಿನಿಂದ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮೇ 22ರಂದು ತೈಲ ಬೆಲೆಯಲ್ಲಿ ಕೊನೆಯದಾಗಿ ಬದಲಾವಣೆಯಾಗಿತ್ತು. ಇಷ್ಟು ದಿನ ಪೆಟ್ರೋಲ್ ಮತ್ತು ಡೀಸೆಲ್ ಒಂದೇ ಮಟ್ಟದಲ್ಲಿರುವುದು ಇದೇ ಮೊದಲು. ಮೇ 22ರಂದು ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಇದರಿಂದಾಗಿ ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಕೊಂಚ ಅಗ್ಗವಾಗಿತ್ತು. ಇದರ ನಂತರ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತೈಲದ ಮೇಲಿನ ವ್ಯಾಟ್ ಕಡಿಮೆಗೊಳಿಸಲಾಯಿತು, ಇದರಿಂದಾಗಿ ಜನಸಾಮಾನ್ಯರಿಗೆ ಕೊಂಚ ರಿಲೀಫ್ ಸಿಕ್ಕಿತ್ತು.


ಪ್ರಮುಖ ನಗರಗಳಲ್ಲಿ ಇಂದಿನ ತೈಲ ಬೆಲೆ


- ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.72 ರೂ. ಮತ್ತು ಡೀಸೆಲ್ 89.62 ರೂ. ಇದೆ


 - ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 111.35 ರೂ. & ಡೀಸೆಲ್ 97.28 ರೂ. ಇದೆ.


- ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ 94.24 ರೂ. ಇದೆ.


- ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 106.03 ಮತ್ತು ಡೀಸೆಲ್ 92.76 ರೂ. ಇದೆ.


- ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ 89.96 ರೂ. ಇದೆ.


- ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ರೂ 96.57 ಮತ್ತು ಡೀಸೆಲ್ 89.76 ರೂ. ಇದೆ.   


 - ಗುರುಗ್ರಾಮ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 97.18 ರೂ. ಮತ್ತು ಡೀಸೆಲ್ 90.05 ರೂ. ಇದೆ.


- ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 101.94 ರೂ. ಮತ್ತು ಡೀಸೆಲ್ 87.89 ರೂ. ಇದೆ.


- ಭುವನೇಶ್ವರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 103.19 ರೂ. ಮತ್ತು ಡೀಸೆಲ್  94.76 ರೂ ಇದೆ.


- ತಿರುವನಂತಪುರಂನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.71 ರೂ. ಇದ್ದರೆ, ಡೀಸೆಲ್ 96.52 ರೂ. ಇದೆ.


ಇದನ್ನೂ ಓದಿ: ಭಾರತದಲ್ಲಿನ ತನ್ನ ಇಡೀ ತಂಡವನ್ನೇ ವಜಾಗೊಳಿಸಿದ ಟ್ವಿಟರ್...!


ಈ ರೀತಿ ದರ ಪರಿಶೀಲಿಸಿ


ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ದರಗಳ ಬಗ್ಗೆ ತಿಳಿಯಲು ತೈಲ ಕಂಪನಿಗಳು SMS ಮೂಲಕ ಬೆಲೆ ಪರಿಶೀಲಿಸುವ ಸೌಲಭ್ಯ ನೀಡುತ್ತವೆ. ನೀವೂ ಸಹ ದರವನ್ನು ಪರಿಶೀಲಿಸಲು ಇಂಡಿಯನ್ ಆಯಿಲ್ (IOC) ಗ್ರಾಹಕರು RSP<ಡೀಲರ್ ಕೋಡ್> ಬರೆದು 9224992249ಗೆ ಕಳುಹಿಸಬೇಕು. ಅದೇ ರೀತಿ HPCL ಗ್ರಾಹಕರು HPPRICE <ಡೀಲರ್ ಕೋಡ್> ಬರೆದು 9222201122ಗೆ ಮತ್ತು BPCL ಗ್ರಾಹಕರು RSP<ಡೀಲರ್ ಕೋಡ್> ಟೈಪ್ ಮಾಡಿ 9223112222ಗೆ SMS ಮಾಡಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.