Petrol Price Hike: ಒಂದು ವಾರದಲ್ಲಿ ಮೂರನೇ ಬಾರಿಗೆ ಸಿಎನ್‌ಜಿ ಬೆಲೆ ಏರಿಕೆ
Petrol-Diesel-CNG Price Hike: ಗ್ರಾಹಕರು ಹಣದುಬ್ಬರದ ಎರಡು ಹೊಡೆತವನ್ನು ಎದುರಿಸುತ್ತಿದ್ದಾರೆ. ಪೆಟ್ರೋಲ್-ಡೀಸೆಲ್ (Petrol-Diesel) ಬೆಲೆಯೊಂದಿಗೆ, ಈಗ ಸಿಎನ್‌ಜಿ ಬೆಲೆಯೂ ಹೆಚ್ಚಾಗಲು ಪ್ರಾರಂಭಿಸಿದೆ.
Petrol-Diesel-CNG Price Hike: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಭಾನುವಾರ 14 ದಿನಗಳಲ್ಲಿ 12ನೇ ಬಾರಿಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರೊಂದಿಗೆ ಸಿಎನ್‌ಜಿ ಬೆಲೆಯಲ್ಲಿ ಸಹ ಹೆಚ್ಚಳ ಮಾಡಲಾಗಿದೆ. ಕಳೆದ ಒಂದು ವಾರದಲ್ಲಿ ಸಿಎನ್‌ಜಿ ಬೆಲೆಯಲ್ಲಿ ಇದು ಮೂರನೇ ಏರಿಕೆಯಾಗಿದೆ. ಹೆಚ್ಚಿದ ಬೆಲೆಗಳು ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಅನ್ವಯವಾಗಲಿದೆ.
ಡೀಸೆಲ್-ಪೆಟ್ರೋಲ್ ಬೆಲೆ ಮತ್ತೆ ಏರಿಕೆ:
ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ (Petrol-Diesel) ಎರಡಕ್ಕೂ ಲೀಟರ್‌ಗೆ 40 ಪೈಸೆ ಹೆಚ್ಚಳ ಘೋಷಿಸಿವೆ. ಎರಡು ವಾರಗಳಲ್ಲಿ ಇದು 12ನೇ ಹೆಚ್ಚಳವಾಗಿದೆ. ಈ ಹೆಚ್ಚಳದೊಂದಿಗೆ ಇಲ್ಲಿಯವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 8.40 ರೂ. ಈ ಏರಿಕೆಯೊಂದಿಗೆ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.81 ರೂ., ಡೀಸೆಲ್ ಬೆಲೆ ಲೀಟರ್‌ಗೆ 95.07 ರೂ. ತಲುಪಿದೆ.
ಇದನ್ನೂ ಓದಿ- Good News: ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ ಶ್ರೀಸಾಮಾನ್ಯರಿಗೊಂದು ನೆಮ್ಮದಿಯ ಸುದ್ದಿ, ಈ ವರದಿ ಓದಿ
ಸಿಎನ್‌ಜಿ ಬೆಲೆಯೂ ಏರಿಕೆ:
ಸಿಎನ್‌ಜಿ ದರವೂ (CNG Rate) ಕೆಜಿಗೆ 80 ಪೈಸೆ ಏರಿಕೆಯಾಗಿದೆ. ಈ ಹೆಚ್ಚಳದ ನಂತರ, ದೆಹಲಿಯಲ್ಲಿ ಸಿಎನ್‌ಜಿಯ ಹೊಸ ಬೆಲೆ ಕೆಜಿಗೆ 61.61 ರೂ. ಸಿಎನ್‌ಜಿ ಬೆಲೆಯನ್ನು ವಾರದೊಳಗೆ ಮೂರು ಬಾರಿ ಹೆಚ್ಚಿಸಲಾಗಿದೆ. ವಾರದಲ್ಲಿ ಸಿಎನ್‌ಜಿ ದರವು ಕೆಜಿಗೆ 2.40 ರೂ.ಗಳಷ್ಟು ದುಬಾರಿಯಾಗಿದೆ.
ಇದನ್ನೂ ಓದಿ- Honda: 1 ಕೋಟಿಗೂ ಅಧಿಕ ಭಾರತೀಯರ ಈ ಅಚ್ಚುಮೆಚ್ಚಿನ ಬೈಕ್ ಅನ್ನು ಕೇವಲ 5999 ಪಾವತಿಸಿ ಮನೆಗೆ ಕೊಂಡೊಯ್ಯಿರಿ!
ನಿಮ್ಮ ನಗರದಲ್ಲಿ ಇತ್ತೀಚಿನ ಬೆಲೆಯನ್ನು ಈ ರೀತಿ ತಿಳಿದುಕೊಳ್ಳಬಹುದು:
ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಎಷ್ಟಿದೆ ಎಂಬ ಮಾಹಿತಿಯನ್ನು ನೀವು SMS ಮೂಲಕ ಪಡೆಯಬಹುದು. ಇದಕ್ಕಾಗಿ, ಇಂಡಿಯನ್ ಆಯಿಲ್ (ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ - IOCL) ಗ್ರಾಹಕರು RSP ಕೋಡ್ ಅನ್ನು 9224992249 ಸಂಖ್ಯೆಗೆ ಕಳುಹಿಸಬೇಕಾಗುತ್ತದೆ. ನೀವು ಇಂಡಿಯನ್ ಆಯಿಲ್ ವೆಬ್‌ಸೈಟ್‌ನಲ್ಲಿ RSP ಕೋಡ್ ಅನ್ನು ಕಾಣಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.