ನವದೆಹಲಿ: Petrol-Diesel Price Latest News - ಹಣದುಬ್ಬರ ಏರಿಕೆಯಿಂದಾಗಿ ಸಗಟು ಗ್ರಾಹಕರು ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಸಗಟು ಗ್ರಾಹಕರಿಗೆ ಡೀಸೆಲ್ ಬೆಲೆ ಲೀಟರ್‌ಗೆ 25 ರೂ. ಹೆಚ್ಚಿಸಲಾಗಿದೆ. ಸಗಟು ಗ್ರಾಹಕರಿಗೆ ಮಾರಾಟ ಮಾಡುವ ಡೀಸೆಲ್ (Petrol-Disel Price) ಪ್ರತಿ ಲೀಟರ್‌ಗೆ 25 ರೂ.ಗಳಷ್ಟು ದುಬಾರಿಯಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಏರಿಕೆಯಾದ ಹಿನ್ನೆಲೆ, ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Ration Card : ಪಡಿತರ ಚೀಟಿಯಲ್ಲಿ ಮನೆಯ ಹೊಸ ಸದಸ್ಯರ ಹೆಸರನ್ನು ಹೀಗೆ ಸೇರಿಸಿ!

ಪ್ರತಿ ಲೀಟರ್ ಡಿಸೇಲ್ ಬೆಲೆಯಲ್ಲಿ ರೂ.25 ಹೆಚ್ಚಳ (Petrol-Diesel Price Update)
ಆದಾಗ್ಯೂ, ಪೆಟ್ರೋಲ್ ಪಂಪ್‌ಗಳ ಮೂಲಕ ಮಾರಾಟವಾಗುವ ಡೀಸೆಲ್‌ನ ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ. ಈ ತಿಂಗಳು ಪೆಟ್ರೋಲ್ ಪಂಪ್‌ಗಳ ಮೂಲಕ ನಡೆಸಲಾಗುವ ಮಾರಾಟದಲ್ಲಿ ಶೇಕಡಾ 20 ರಷ್ಟು ಏರಿಕೆಯಾಗಿದೆ. ಬಸ್ ಫ್ಲೀಟ್ ನಿರ್ವಾಹಕರು ಮತ್ತು ಮಾಲ್‌ಗಳಂತಹ ಬೃಹತ್ ಗ್ರಾಹಕರು ಪೆಟ್ರೋಲ್ ಪಂಪ್‌ಗಳಿಂದ ಇಂಧನವನ್ನು ಖರೀದಿಸಿದ್ದಾರೆ. ಸಾಮಾನ್ಯವಾಗಿ ಅವರು ನೇರವಾಗಿ ಪೆಟ್ರೋಲಿಯಂ ಕಂಪನಿಗಳಿಂದ ಇಂಧನವನ್ನು ಖರೀದಿಸುತ್ತಾರೆ. ಇದರಿಂದಾಗಿ  ಚಿಲ್ಲರೆ ಇಂಧನ ಮಾರಾಟ ಕಂಪನಿಗಳ ನಷ್ಟ ಹೆಚ್ಚಾಗಿದೆ. ನೈರಾ ಎನರ್ಜಿ, ಜಿಯೋ-ಬಿಪಿ ಮತ್ತು ಶೆಲ್‌ನಂತಹ ಕಂಪನಿಗಳು ಇದರಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗಿವೆ.


ಇದನ್ನೂ ಓದಿ-Hero Splendorಗೆ ಭಾರಿ ಪೈಪೋಟಿ ನೀಡಲು ಮಾರುಕಟ್ಟೆಗಿಳಿಯಲಿದೆ Honda

ಸಾರ್ವಜನಿಕ ವಲಯದ ಪೆಟ್ರೋಲಿಯಂ ಕಂಪನಿಗಳು ನವೆಂಬರ್ 4, 2021 ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿಲ್ಲ. ಆದಾಗ್ಯೂ, ಈ ಅವಧಿಯಲ್ಲಿ ಜಾಗತಿಕವಾಗಿ ಇಂಧನ ಬೆಲೆಯಲ್ಲಿ ಜಿಗಿತ ಕಂಡುಬಂದಿದೆ. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಧನ ಬೆಲೆಯನ್ನು ಹೆಚ್ಚಿಸಲಾಗಿಲ್ಲ ಎಂದು ನಂಬಲಾಗಿದೆ. ಮಾರ್ಚ್ 10 ರಂದು ವಿಧಾನಸಭೆಗಳ ಫಲಿತಾಂಶ ಪ್ರಕಟವಾಗಿದ್ದು, ಅದರ ನಂತರವೂ ಸಂಸತ್ತಿನ ಎರಡನೇ ಹಂತದ ಬಜೆಟ್ ಅಧಿವೇಶನದಿಂದಾಗಿ ಬೆಲೆಗಳು ಸದ್ಯಕ್ಕೆ ಏರಿಕೆಯಾಗಿಲ್ಲ ಎನ್ನಲಾಗಿದೆ.


ಇದನ್ನೂ ಓದಿ-18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮಾಡಿಸಬಹುದು PAN Card : ಹೇಗೆ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.