Petrol Diesel Price may 18th : ಮೇ 18ರಂದು ಕೂಡ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು   ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮತ್ತೊಂದೆಡೆ, ಕಚ್ಚಾ ತೈಲ ದರವು ಏಳು ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ. WTI ಕಚ್ಚಾ ಪ್ರತಿ ಬ್ಯಾರೆಲ್‌ಗೆ 114.30 ಡಾಲರ್ ಏರಿಕೆ ಕಂಡಿತ್ತು. ಬ್ರೆಂಟ್ ಕಚ್ಚಾ ಪ್ರತಿ ಬ್ಯಾರೆಲ್‌ಗೆ 113.3 ಡಾಲರ್ ಮಟ್ಟವನ್ನು ತಲುಪಿತು.


COMMERCIAL BREAK
SCROLL TO CONTINUE READING

ಏಪ್ರಿಲ್ 6 ರಂದು ಕೊನೆಯ ಬಾರಿಗೆ ದರ ಏರಿಕೆ : 
ಮಾರ್ಚ್‌ನಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ತೈಲ ಕಂಪನಿಗಳು ಮಾರ್ಚ್ 22 ರಿಂದ ಬೆಲೆಯನ್ನು ಹೆಚ್ಚಿಸಲು ಪ್ರಾರಂಭಿಸಿದ್ದವು.  ಮಾರ್ಚ್ 22ರಿಂದ ಏಪ್ರಿಲ್ 6ರವರೆಗೆ ಪ್ರತಿ ಲೀಟರ್ ಗೆ 10 ರೂ. ಯಷ್ಟು ಹೆಚ್ಚಳ ಮಾಡಲಾಗಿತ್ತು. ಕೊನೆಯದಾಗಿ ಏಪ್ರಿಲ್ 6 ರಂದು ಲೀಟರ್‌ಗೆ 80 ಪೈಸೆ ಹೆಚ್ಚಳವಾಗಿತ್ತು.


ಇದನ್ನೂ ಓದಿ : PF ಖಾತೆದಾರರೆ ಗಮನಿಸಿ : ನಿಮ್ಮ PF ಖಾತೆ ಸಂಖ್ಯೆಯಲ್ಲಿ ಅಡಗಿದೆ ಅಪರೂಪದ ಮಾಹಿತಿ!


 ಪ್ರಮುಖ ನಗರದಲ್ಲಿ ತೈಲ ಬೆಲೆ : 
- ದೆಹಲಿ ಪೆಟ್ರೋಲ್ 105.41 ರೂ  ಮತ್ತು ಡೀಸೆಲ್  96.67 ರೂ ಪ್ರತಿ ಲೀಟರ್
- ಮುಂಬೈ ಪೆಟ್ರೋಲ್ 120.51 ರೂ ಮತ್ತು ಡೀಸೆಲ್  104.77 ರೂ
ಬೆಂಗಳೂರು   ಪೆಟ್ರೋಲ್ 111.09  ರೂ ಮತ್ತು ಡೀಸೆಲ್  94.79   ರೂ
-ಚೆನ್ನೈ  ಪೆಟ್ರೋಲ್  110.85 ರೂ ಮತ್ತು ಡೀಸೆಲ್ 100. 94 ರೂ 
- ಕೋಲ್ಕತ್ತಾ ಪೆಟ್ರೋಲ್  115.12 ರೂ. ಡೀಸೆಲ್ ಲೀಟರ್‌ಗೆ 99.83 ರೂ
- ಲಕ್ನೋದಲ್ಲಿ ಪೆಟ್ರೋಲ್  105.25 ರೂ ಮತ್ತು ಡೀಸೆಲ್ ಲೀಟರ್‌ಗೆ  96.83 ರೂ
- ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ 91.45 ರೂ  ಮತ್ತು ಡೀಸೆಲ್ ಲೀಟರ್‌ಗೆ  85.83 ರೂ
- ಪಾಟ್ನಾದಲ್ಲಿ ಪೆಟ್ರೋಲ್  116.23 ರೂ ಮತ್ತು ಡೀಸೆಲ್ ಲೀಟರ್‌ಗೆ 101 ರೂ.


ದೇಶದಲ್ಲೇ ಅತ್ಯಂತ ಕಡಿಮೆ ಬೆಲೆಯ ಪೆಟ್ರೋಲ್ ಮತ್ತು ಡೀಸೆಲ್ ಪೋರ್ಟ್ ಬ್ಲೇರ್‌ನಲ್ಲಿ ಲಭ್ಯವಿದೆ. ಇಲ್ಲಿ ಪೆಟ್ರೋಲ್ ಲೀಟರ್‌ಗೆ 91.45 ರೂ ಮತ್ತು ಡೀಸೆಲ್ ಲೀಟರ್‌ಗೆ 85.83 ರೂ. ಅದೇ ರೀತಿ  ಗಂಗಾನಗರದಲ್ಲಿ ಪೆಟ್ರೋಲ್ ದರ 122.93 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 105.34 ರೂ. ಐದು ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ, ನಾಲ್ಕೂವರೆ ತಿಂಗಳ ನಂತರ ಕಂಪನಿಗಳು ದರವನ್ನು ಬದಲಾಯಿಸಿದವು. ಈ ಹಿಂದೆ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ 95.41 ರೂ.ಗೆ ಮಾರಾಟವಾಗುತ್ತಿತ್ತು.


ಇದನ್ನೂ ಓದಿ  : SBI ATM Franchise: SBI ನೀಡುತ್ತಿದೆ ಅದ್ಭುತ ಅವಕಾಶ! ಕೇವಲ ಈ ದಾಖಲೆಗಳನ್ನು ನೀಡಿ ತಿಂಗಳಿಗೆ 60 ಸಾವಿರ ಸಂಪಾದಿಸಿ
    
SMS ಮೂಲಕ ಕೂಡಾ ದರ  ಪರಿಶೀಲಿಸಬಹುದು :
ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸಹ ತಿಳಿಯಬಹುದು ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಅನ್ನು 9223112222 ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಇದೆ ವೇಳೆ, HPCL ಗ್ರಾಹಕರು HPPrice ಅನ್ನು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.