Petrol-Diesel Price : ದೇಶದ 19 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ : ನಿಮ್ಮ ನಗರದ ಬೆಲೆ ಇಲ್ಲಿದೆ
ದೆಹಲಿಯಲ್ಲಿ ಪೆಟ್ರೋಲ್ 101.49 ರೂ. ಮತ್ತು ಡೀಸೆಲ್ 88.92 ರೂ. IOCL ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಬಿಡುಗಡೆ ಮಾಡುತ್ತದೆ. SMS ಕಳುಹಿಸುವ ಮೂಲಕ ನಿಮ್ಮ ನಗರದ ಬೆಲೆಯನ್ನು ನೀವು ಪರಿಶೀಲಿಸಬಹುದು.
ನವದೆಹಲಿ : ಸರ್ಕಾರಿ ತೈಲ ಕಂಪನಿಗಳು ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸ್ಥಿರತೆ ಕಾಯಿದುಕೊಂಡಿದೆ. ಮಂಗಳವಾರ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 15 ಪೈಸೆ ಇಳಿಸಲಾಗಿತ್ತು. ಅಲ್ಲದೆ ಡೀಸೆಲ್ ಬೆಲೆಯಲ್ಲಿ ಕೂಡ ಪ್ರತಿ ಲೀಟರ್‌ಗೆ 15 ಪೈಸೆ ಕಡಿಮೆ ಮಾಡಲಾಗಿತ್ತು. ದೆಹಲಿಯಲ್ಲಿ ಪೆಟ್ರೋಲ್ 101.49 ರೂ. ಮತ್ತು ಡೀಸೆಲ್ 88.92 ರೂ. IOCL ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಬಿಡುಗಡೆ ಮಾಡುತ್ತದೆ. SMS ಕಳುಹಿಸುವ ಮೂಲಕ ನಿಮ್ಮ ನಗರದ ಬೆಲೆಯನ್ನು ನೀವು ಪರಿಶೀಲಿಸಬಹುದು.
ಇನ್ನೂ, ಈ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ
ದೇಶಾದ್ಯಂತ ಸುಮಾರು 19 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ(Petrol Price) 100 ರ ಗಡಿ ದಾಟಿದೆ. ಮಧ್ಯಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಒಡಿಶಾ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಹೊರತಾಗಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನ ಮೆಟ್ರೋಗಳಲ್ಲಿ ಪೆಟ್ರೋಲ್ ಈಗಾಗಲೇ ಪ್ರತಿ ಲೀಟರ್‌ಗೆ 100 ರೂ.
ಮೇಲೆ ಬೆಲೆ ಇದೆ.
ಇದನ್ನೂ ಓದಿ : ಸ್ಮಾರ್ಟ್ ಪೋನ್ ಆಯ್ತು, ಇನ್ಮುಂದೆ ಬರಲಿದೆ Apple Car! ಭವಿಷ್ಯ ನುಡಿದ ನೊಬೆಲ್ ಪ್ರಶಸ್ತಿ ವಿಜೇತ ಅಕಿರಾ ಯೋಶಿನೋ
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ
ದೆಹಲಿ ಪೆಟ್ರೋಲ್ 101.49 ರೂ. ಮತ್ತು ಡೀಸೆಲ್ 88.92 ರೂ. ಪ್ರತಿ ಲೀಟರ್‌ಗೆ
ಮುಂಬೈ ಪೆಟ್ರೋಲ್ 107.52 ರೂ. ಮತ್ತು ಡೀಸೆಲ್ 96.48 ರೂ. ಪ್ರತಿ ಲೀಟರ್‌ಗೆ
ಚೆನ್ನೈ ಪೆಟ್ರೋಲ್ 99.20 ರೂ. ಮತ್ತು ಡೀಸೆಲ್(Diesel Price) 93.52 ರೂ. ಪ್ರತಿ ಲೀಟರ್‌ಗೆ
ಕೋಲ್ಕತಾ ಪೆಟ್ರೋಲ್ 101.82 ರೂ. ಮತ್ತು ಡೀಸೆಲ್ 91.98 ರೂ. ಪ್ರತಿ ಲೀಟರ್‌ಗೆ
ನೋಯ್ಡಾ ಪೆಟ್ರೋಲ್ 98.79 ರೂ. ಮತ್ತು ಡೀಸೆಲ್ 89.49 ರೂ. ಪ್ರತಿ ಲೀಟರ್‌ಗೆ
ಜೈಪುರ ಪೆಟ್ರೋಲ್ 108.42 ರೂ. ಮತ್ತು ಡೀಸೆಲ್ 98.06 ರೂ. ಪ್ರತಿ ಲೀಟರ್‌ಗೆ
ಭೋಪಾಲ್ ಪೆಟ್ರೋಲ್ 109.91 ರೂ. ಮತ್ತು ಡೀಸೆಲ್ 97.72 ರೂ. ಪ್ರತಿ ಲೀಟರ್‌ಗೆ
ಇದನ್ನೂ ಓದಿ : ಸೆಪ್ಟೆಂಬರ್ 30 ರ ನಂತರ ಕೊನೆಗೊಳ್ಳಲಿದೆ SBI, HDFC, ICICI ಬ್ಯಾಂಕಿನ ಈ ಸ್ಕೀಮ್, ತಕ್ಷಣವೇ ಲಾಭ ಪಡೆದುಕೊಳ್ಳಿ
ನಿಮ್ಮ ನಗರದ ಬೆಲೆಯನ್ನು ಈ ರೀತಿ ಪರಿಶೀಲಿಸಿ
ದೇಶದ ಮೂರು ತೈಲ ಮಾರುಕಟ್ಟೆ ಕಂಪನಿಗಳಾದ ಎಚ್‌ಪಿಸಿಎಲ್, ಬಿಪಿಸಿಎಲ್ ಮತ್ತು ಐಒಸಿ ಬೆಳಿಗ್ಗೆ 6 ಗಂಟೆಯ ನಂತರ ಹೊಸ ಪೆಟ್ರೋಲ್ ಮತ್ತು ಡೀಸೆಲ್ ದರ(Petrol-Diesel Price)ಗಳನ್ನು ನೀಡುತ್ತವೆ. ಹೊಸ ದರಗಳಿಗಾಗಿ, ನೀವು ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಅದೇ ಸಮಯದಲ್ಲಿ, ನೀವು ಮೊಬೈಲ್ ಫೋನ್‌ಗಳಲ್ಲಿ SMS ಮೂಲಕ ದರವನ್ನು ಪರಿಶೀಲಿಸಬಹುದು.
92249 92249 ನಂಬೆರ್ ಗೆ SMS ಕಳುಹಿಸುವ ಮೂಲಕ ನೀವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಬಗ್ಗೆಯೂ ತಿಳಿದುಕೊಳ್ಳಬಹುದು. ನೀವು ಆರ್‌ಎಸ್‌ಪಿ <ಸ್ಪೇಸ್> ಪೆಟ್ರೋಲ್ ಪಂಪ್ ಡೀಲರ್ ಕೋಡ್ ಅನ್ನು 92249 92249 ಗೆ ಕಳುಹಿಸಬೇಕು. ನೀವು ದೆಹಲಿಯಲ್ಲಿದ್ದರೆ ಮತ್ತು ಸಂದೇಶದ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಿಳಿಯಲು ಬಯಸಿದರೆ, ನೀವು RSP 102072 ಗೆ 92249 92249 ಗೆ ಕಳುಹಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.