ಬೆಂಗಳೂರು: ಕಳೆದ ಕೆಲ ದಿನಗಳಿಂದ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂತೆಯೇ ಇಂದು ಸಹ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಮೇ 21 ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಇದಾದ ಬಳಿಕ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದೆ. ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರದ ನಂತರ, ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿದೆ.


COMMERCIAL BREAK
SCROLL TO CONTINUE READING

ಸಾರ್ವಜನಿಕರಿಗೆ ಕೊಂಚ ರಿಲೀಫ್ :
ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಮೇ 21 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿದೆ. ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 8 ರೂಪಾಯಿ ಮತ್ತು ಡೀಸೆಲ್‌ ಮೇಲಿನ ಸುಂಕವನ್ನು 6 ರೂಪಾಯಿ ಇಳಿಸುವ ಮೂಲಕ ಜನತೆಗೆ ದೊಡ್ಡ ರಿಲೀಫ್‌ ನೀಡಿತ್ತು. ಇದಾದ ನಂತರ ದೇಶದಲ್ಲಿ ಡೀಸೆಲ್ ಲೀಟರ್‌ಗೆ 9.50 ಮತ್ತು ಪೆಟ್ರೋಲ್ 7 ರೂ.ಗಳಷ್ಟು ಅಗ್ಗವಾಗಿದೆ.


ಇದನ್ನು ಓದಿ: Gold-Sliver Price: ಗ್ರಾಹಕರಿಗೆ ತಿಂಗಳ ಆರಂಭದಲ್ಲಿ ಸಿಹಿ ಸುದ್ದಿ: ಹಳದಿಲೋಹದ ಬೆಲೆ ಹೀಗಿದೆ


ಇಂದಿನ ಬೆಲೆ ಎಷ್ಟು?


ನಗರ ಪೆಟ್ರೋಲ್‌ ಬೆಲೆ ಡೀಸೆಲ್‌ ಬೆಲೆ 
ದೆಹಲಿ 96.72 89.62
ಮುಂಬೈ  111.35 97.28
ಚೆನ್ನೈ 102.63  94.24
ಕೊಲ್ಕತ್ತಾ   106.03 92.76
ನೋಯ್ಡಾ 96.57 89.76
ಲಕ್ನೋ 96.57 89.76
ಜೈಪುರ 108.48 93.72
ತಿರುವನಂತಪುರಂ 107.71 96.79
ಪಾಟ್ನಾ 107.24 94.32
ಗುರುಗಾಂವ್‌ 97.18 90.05
ಬೆಂಗಳೂರು     101.94 87.89
ಭುವನೇಶ್ವರ 103.19 95.03
ಚಂಡೀಗಢ 96.20 84.26
ಹೈದರಾಬಾದ್‌ 109.66 97.82

ಈ ವರ್ಷ ಬೆಲೆಯಲ್ಲಿ ಎಷ್ಟು ಬದಲಾವಣೆಯಾಗಿದೆ?
2022 ರ ಆರಂಭದಲ್ಲಿ ಅಂದರೆ ಜನವರಿ 1, 2022 ರಂದು ಪೆಟ್ರೋಲ್ ಬೆಲೆ ಲೀಟರ್‌ಗೆ 95.41 ರೂ ಆಗಿದ್ದರೆ, ಡೀಸೆಲ್ ಲೀಟರ್‌ಗೆ 86.67 ರೂ.ಗೆ ಮಾರಾಟವಾಗುತ್ತಿತ್ತು. ಇದಾದ ಬಳಿಕ ಹಲವು ಬಾರಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ನಂತರ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿತು. ಏಪ್ರಿಲ್ 6 ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸುಮಾರು 10 ರೂ.ಯಷ್ಟು ಏರಿಕೆಯಾಗಿತ್ತು.  ಆದರೆ ಮೇ 21 ರಂದು ಕೇಂದ್ರ ಸರ್ಕಾರದ ಕ್ರಮದ ನಂತರ ಜನರಿಗೆ ಮತ್ತೊಮ್ಮೆರಿ ಲೀಫ್ ಸಿಕ್ಕಿದೆ.


ಇದನ್ನು ಓದಿ: ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್! ಫ್ರೀ ಆಗಿ ಸಿಗಲಿದೆ 1ಜಿಬಿ ಡೇಟಾ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.