ನವದೆಹಲಿ: ಸರ್ಕಾರಿ ತೈಲ ಕಂಪನಿಗಳು ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡಿದೆ. ಬೆಳಗ್ಗೆ 6 ಗಂಟೆಗೆ ಬಿಡುಗಡೆಯಾದ ದರಗಳ ಪ್ರಕಾರ ಇಂದಿಗೂ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೇಶದ ಎಲ್ಲಾ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸ್ಥಿರವಾಗಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 105.41 ರೂ. ಮತ್ತು ಡೀಸೆಲ್ ಲೀಟರ್‌ಗೆ 96.67 ರೂ. ಆಗಿದೆ.


COMMERCIAL BREAK
SCROLL TO CONTINUE READING

ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 120.51 ರೂ. ಮತ್ತು ಲೀಟರ್ ಡೀಸೆಲ್ ಬೆಲೆ 104.77 ರೂ. ಇದೆ. ಇಂದು ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 115.12 ರೂ. ಇದ್ದರೆ, ಡೀಸೆಲ್ ದರ ಲೀಟರ್‌ಗೆ 99.83 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 110.95 ಮತ್ತು 100.94 ರೂ.ಗಳಲ್ಲಿ ಮಾರಾಟವಾಗುತ್ತಿದೆ.


ಇದನ್ನೂ ಓದಿ: 28-04-2022 Today Gold Price: ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ


ನಗರ ಪೆಟ್ರೋಲ್ ದರ
ಕೋಲ್ಕತ್ತಾ ₹115.12 
ಮುಂಬೈ ₹120.51 
ಚೆನ್ನೈ ₹110.85
ನವದೆಹಲಿ ₹105.41
ನೋಯ್ಡಾ ₹105.60
ಬೆಂಗಳೂರು ₹111.09 

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 111.09 ರೂ., ಡೀಸೆಲ್ ಲೀಟರ್ ಗೆ 94.79 ರೂ. & ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 112.50 ರೂ., ಡೀಸೆಲ್ ಲೀಟರ್ ದರ 102.24 ರೂ. ಹಾಗೂ ಹೈದರಾಬಾದ್‌ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 119.49 ರೂ ಆಗಿದ್ದರೆ, ಲೀಟರ್ ಡೀಸೆಲ್ ಬೆಲೆ 105.49 ರೂ. ಆಗಿದೆ.


ಕಚ್ಚಾ ತೈಲ ಬೆಲೆಗಳು ಶುಕ್ರವಾರ 08.20 AM ವರೆಗೆ, ಪ್ರತಿ ಬ್ಯಾರೆಲ್‌ಗೆ $103.80 ಆಗಿದೆ. 


ನಗರ ಡೀಸೆಲ್ ಬೆಲೆ
ಕೋಲ್ಕತ್ತಾ  ₹99.83 
ಮುಂಬೈ  ₹104.77
ಚೆನ್ನೈ  ₹101.94
ನವದೆಹಲಿ  ₹96.67
ನೋಯ್ಡಾ ₹97.15
ಬೆಂಗಳೂರು ₹94.79 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯನ್ನು ಆಧರಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನ ನವೀಕರಿಸಲಾಗುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿದ ನಂತರ ಬೆಲೆ ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ತೈಲ ಕಂಪನಿಗಳು ಪ್ರತಿದಿನ ಬೆಳಿಗ್ಗೆ ವಿವಿಧ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮಾಹಿತಿಯನ್ನು ನವೀಕರಿಸುತ್ತವೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.