ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಕ್ಟೋಬರ್ 20 ರಂದು (ಬುಧವಾರ) ಮತ್ತೆ ಏರಿಕೆಯಾಗಿವೆ. ಪೆಟ್ರೋಲ್ ಬೆಲೆ 35 ಪೈಸೆಯಿಂದ 57 ಪೈಸೆ ಏರಿಕೆ ಕಂಡ ನಂತರ ಹೊಸ ಗರಿಷ್ಠ ಮಟ್ಟವನ್ನು ಕಂಡಿವೆ.


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ ಪೆಟ್ರೋಲ್ ಬೆಲೆ(Petrol Prices)ಯು 35 ಪೈಸೆ ಏರಿಕೆಯಾಗಿದ್ದು, 106.19 ರೂ.ಗೆ ತಲುಪಿದೆ, ಡೀಸೆಲ್ ಬೆಲೆಯು 35 ಪೈಸೆ ಏರಿಕೆಯಾಗಿದ್ದು, 94.92 ರೂ. ಆಗಿದೆ.


ಇದನ್ನೂ ಓದಿ : Online Shopping ನಲ್ಲಿ ಮೋಸ ಹೋದ್ರಾ? 10 ದಿನಗಳಲ್ಲಿ ವಾಪಸ್ ಬರಲಿದೆ ನಿಮ್ಮ ಹಣ, ಇಲ್ಲಿ ದೂರು ನೀಡಿ


ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸತತವಾಗಿ 34 ಪೈಸೆ ಮತ್ತು 37 ಪೈಸೆ ಹೆಚ್ಚಿಸಲಾಗಿದೆ. ಪೆಟ್ರೋಲ್ ಬೆಲೆ 112.11 ರೂ.ಗಳಲ್ಲಿದ್ದರೆ ಡೀಸೆಲ್ ಬೆಲೆ(Diesel Prices) 102.89 ರೂ. ನಗರವಾರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕೆಳಗೆ ಪರಿಶೀಲಿಸಿ.


ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ


ದೆಹಲಿ 106.19 ರೂ. 


ಮುಂಬೈ- ರೂ 112.11 ರೂ.


ಕೋಲ್ಕತಾ- ರೂ 106.78 ರೂ.


ಚೆನ್ನೈ- ರೂ 103.31 ರೂ.


ದೇಶದಾದ್ಯಂತದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ 100 ರ ಗಡಿ ದಾಟಿದೆ, ಹೆಚ್ಚಿನ ರಾಜ್ಯಗಳಲ್ಲಿ ಡೀಸೆಲ್ ಬೆಲೆ 100 ಕ್ಕಿಂತ ಕೆಳಗಿವೆ. ಡೀಸೆಲ್ ಬೆಲೆ 100 ರ ಗಡಿ ದಾಟಿದ ರಾಜ್ಯಗಳು 
 ಅಂದರೆ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ , ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಬಿಹಾರ, ಕೇರಳ, ಕರ್ನಾಟಕ(Karnataka) ಮತ್ತು ಲಡಾಖ್. 


ಇದನ್ನೂ ಓದಿ : Big News:ಬಂದೆ ಬಿಟ್ತು ನಿಮ್ಮ PF ಖಾತೆಗೆ ಬಡ್ಡಿ ಹಣ, ಈ ರೀತಿ ಪರಿಶೀಲಿಸಿ ಹಾಗೂ e-statement ಡೌನ್ಲೋಡ್ ಮಾಡಿ


ಇಂಧನ ದರಗಳನ್ನು ದೇಶಾದ್ಯಂತ ಪ್ರತಿದಿನ ಪರಿಷ್ಕರಿಸಲಾಗುತ್ತದೆ ಮತ್ತು ತೈಲ ಕಂಪನಿಗಳು ಬೆಳಿಗ್ಗೆ 6 ಗಂಟೆಗೆ ಪ್ರಕಟಿಸುತ್ತವೆ. ಕಚ್ಚಾ ತೈಲದ ಬೆಲೆ, ಸಂಸ್ಕರಣಾಗಾರಗಳ ಬಳಕೆ ಅನುಪಾತ ಮತ್ತು ಸರ್ಕಾರದಿಂದ ಇಂಧನ ಮೇಲೆ ವಿಧಿಸಲಾದ ವ್ಯಾಟ್ ಮತ್ತು ತೆರಿಗೆಗಳಿಂದಾಗಿ ಇಂಧನದ ಬೆಲೆಗಳು ಏರಿಳಿತಗೊಳ್ಳುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ