ಬೆಂಗಳೂರು : Petrol-Diesel Price on 2nd May : ತೈಲ ಕಂಪನಿಗಳು ಇಂದು ಅಂದರೆ ಮೇ 2 ರಂದು ಪೆಟ್ರೋಲ್-ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡಿದೆ. ಮೂರು ವಾರಗಳಿಗೂ ಹೆಚ್ಚು ಸಮಯದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಂದೇ ಮಟ್ಟದಲ್ಲಿದೆ. ಸತತ 26ನೇ ದಿನವಾದ ಇಂದು ಕೂಡಾ ತೈಲ ಬೆಲೆ ಸ್ಥಿರವಾಗಿದೆ. ಕಳೆದ ಬಾರಿ ಏಪ್ರಿಲ್ 6 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 80 ಪೈಸೆ ಏರಿಕೆಯಾಗಿತ್ತು.  


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ  ಪೆಟ್ರೋಲ್ ಬೆಲೆ ಲೀಟರ್​​ಗೆ 111.09 ರೂಪಾಯಿ ಇದ್ದರೆ,  ಡೀಸೆಲ್ ಬೆಲೆ ಒಂದು ಲೀಟರ್​ಗೆ 94.79 ರೂಪಾಯಿ ಇದೆ.  ಇನ್ನು ರಾಜ್ಯದ ಇತರ ಜಿಲ್ಲೆಗಳ ಪೆಟ್ರೋಲ್ ಬೆಲೆಯನ್ನು ನೋಡುವುದಾದರೆ,  ಮೈಸೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 110.61 ರೂಪಾಯಿ, ಡೀಸೆಲ್‌ ದರ ಒಂದು ಲೀಟರ್‌ಗೆ 94.35 ರೂಪಾಯಿ ಇದೆ. ಮಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 110.99 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್​ಗೆ 94.03 ರೂಪಾಯಿಯಿದೆ. ರಾಜ್ಯದಲ್ಲಿಯೂ ಸಹ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದನ್ನು ಗಮನಿಸಬಹುದು. 


ಇದನ್ನೂ ಓದಿ : Maruti Alto: ಗ್ರಾಹಕರ ನೆಚ್ಚಿನ ಮಾರುತಿ ಆಲ್ಟೊ ಇದೀಗ ಹೊಸ ಶೈಲಿಯಲ್ಲಿ ಬಿಡುಗಡೆ


 ಶಿವಮೊಗ್ಗದಲ್ಲಿ ಇಂದಿನ ತೈಲ ದರ ಪೆಟ್ರೋಲ್ ಲೀಟರ್​ಗೆ 112.57  ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.19 ರೂಪಾಯಿ ಇದೆ. ದಾವಣಗೆರೆಯಲ್ಲಿ ಪೆಟ್ರೋಲ್ ಲೀಟರ್​ಗೆ 113.09 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 96.46 ರೂಪಾಯಿ ಇದೆ. 
 
 ಇನ್ನು ದೇಶದ ಪ್ರಮುಖ ನಗರಗಳಲ್ಲಿ ತೈಲ  ಬೆಲೆ ಎಷ್ಟಿದೆ ? 
 
ನಗರ                                           ಪೆಟ್ರೋಲ್                                 ಡಿಸೇಲ್ 
 
ದೆಹಲಿ                                         105.41                                          96.67 
ಮುಂಬಯಿ                                  120.51                                          104.77
ಲಕ್ನೋ                                         105.25                                          96.83


 ವ್ಯಾಟ್ ಕಡಿಮೆ ಮಾಡುವಂತೆ ಪ್ರಧಾನಿ ಮೋದಿ ರಾಜ್ಯಗಳಿಗೆ ಮನವಿ :
ತೈಲ ಕಂಪನಿಗಳು ಕೊನೆಯದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏಪ್ರಿಲ್ 6 ರಂದು ಹೆಚ್ಚಿಸಿವೆ. ಅಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೊರೊನಾ ಕುರಿತು ರಾಜ್ಯಗಳ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ಮೋದಿ, ತೈಲದ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುವಂತೆ ರಾಜ್ಯಗಳಿಗೆ ಮನವಿ ಮಾಡಿದ್ದಾರೆ. ದೇಶದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಗಳು ತೈಲದ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುವ ಮೂಲಕ ಸಾರ್ವಜನಿಕರಿಗೆ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.      


ಇದನ್ನೂ ಓದಿ : LPG price hike: ಎಲ್‌ಪಿಜಿ ಗ್ರಾಹಕರೇ ಗಮನಿಸಿ: ಮತ್ತೆ ಹೆಚ್ಚಳವಾಯ್ತು ಸಿಲಿಂಡರ್‌ ಬೆಲೆ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.