ನವದೆಹಲಿ : ಸರ್ಕಾರಿ ತೈಲ ಕಂಪನಿಗಳು ಭಾನುವಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ದೇಶದ ರಾಜಧಾನಿ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ ತೈಲ ಬೆಲೆ ಸ್ಥಿರವಾಗಿದೆ. ಆದ್ರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ, ಕಚ್ಚಾ ತೈಲ ಬೆಲೆಗಳು ಈ ವಾರ ಸ್ಥಿರವಾಗಿ ಉಳಿದಿದೆ. ದೇಶೀಯ ಮಾರುಕಟ್ಟೆಯಲ್ಲಿ, ಕಳೆದ 8 ದಿನಗಳಿಂದ ತೈಲ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಜಧಾನಿ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 101.84 ರೂ ಮತ್ತು ಡೀಸೆಲ್ 89.87 ರೂ. ಇದೆ.


COMMERCIAL BREAK
SCROLL TO CONTINUE READING

ಮೇ ತಿಂಗಳಿನಿಂದ ಪೆಟ್ರೋಲ್(Petrol price) ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್ 42 ದಿನಗಳಲ್ಲಿ ಸುಮಾರು 11.52 ರೂ. ಏರಿಕೆ ಆಗಿದೆ. ಮೇ ನಿಂದ ಜುಲೈ ವರೆಗೆ ಇಂಧನ ಬೆಲೆಯಲ್ಲಿ ಮಧ್ಯಂತರ ಹೆಚ್ಚಳ ಕಂಡು ಬಂದಿದೆ.


ಇದನ್ನೂ ಓದಿ : Missed Call ಮತ್ತು WhatsApp Message ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಸುಲಭ ವಿಧಾನ ತಿಳಿಯಿರಿ


ಬೆಂಗಳೂರಿನಲ್ಲಿ ಪೆಟ್ರೋಲ್  ಪ್ರತಿ ಲೀಟರ್‌ಗೆ 105.25 ರೂ. ಮತ್ತು ಡೀಸೆಲ್(Diesel price) ಪ್ರತಿ ಲೀಟರ್‌ಗೆ 95.26 ರೂ. ಇದೆ. ಮುಂಬೈಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 107.83 ರೂ ಮತ್ತು ಡೀಸೆಲ್ ಒಂದು ಲೀಟರ್ ಗೆ 97.45 ರೂ.


ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 102.49 ರೂ. ಮತ್ತು ಡೀಸೆಲ್ ನಗರದಲ್ಲಿ ಪ್ರತಿ ಲೀಟರ್ 94.39 ರೂ. ಕೋಲ್ಕತ್ತಾದ ಪೆಟ್ರೋಲ್‌(Petrol) ಪ್ರತಿ ಲೀಟರ್‌ಗೆ 102.08 ರೂ., ಡೀಸೆಲ್ ಬೆಲೆ 93.02 ರೂ. ಭೋಪಾಲ್‌ನಲ್ಲಿ ಪೆಟ್ರೋಲ್ 110.20 ರೂ. ಮತ್ತು ಡೀಸೆಲ್ ಒಂದು ಲೀಟರ್‌ಗೆ 98.67 ರೂ.


ಇದನ್ನೂ ಓದಿ : ಈ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದ್ದರೆ ಸಿಗಲಿದೆ ಈ ಲಾಭ


ದೇಶದ ಪ್ರಮುಖ ನಗರಗಳಲ್ಲಿ ಡೀಸೆಲ್-ಪೆಟ್ರೋಲ್ ಬೆಲೆ:


1. ಮುಂಬೈ


ಪೆಟ್ರೋಲ್ - ಪ್ರತಿ ಲೀಟರ್‌ಗೆ 107.83 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 97.45 ರೂ.


2. ದೆಹಲಿ


ಪೆಟ್ರೋಲ್ - ಪ್ರತಿ ಲೀಟರ್‌ಗೆ 101.84 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 89.87 ರೂ.


3. ಚೆನ್ನೈ


ಪೆಟ್ರೋಲ್ - ಪ್ರತಿ ಲೀಟರ್‌ಗೆ 102.49 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 94.39 ರೂ.


4. ಕೋಲ್ಕತಾ


ಪೆಟ್ರೋಲ್ - ಪ್ರತಿ ಲೀಟರ್‌ಗೆ 102.08 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 93.02 ರೂ.


5. ಭೋಪಾಲ್


ಪೆಟ್ರೋಲ್ - ಪ್ರತಿ ಲೀಟರ್‌ಗೆ 110.20 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 98.67 ರೂ.


6. ಹೈದರಾಬಾದ್


ಪೆಟ್ರೋಲ್ - ಪ್ರತಿ ಲೀಟರ್‌ಗೆ 105. 83 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 97.96 ರೂ.


7. ಬೆಂಗಳೂರು


ಪೆಟ್ರೋಲ್ - ಪ್ರತಿ ಲೀಟರ್‌ಗೆ 105.25 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 95.26 ರೂ.


8. ಗುವಾಹಟಿ


ಪೆಟ್ರೋಲ್ - ಪ್ರತಿ ಲೀಟರ್‌ಗೆ 97.64 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 89.22 ರೂ.


9. ಲಕ್ನೋ


ಪೆಟ್ರೋಲ್ - ಪ್ರತಿ ಲೀಟರ್‌ಗೆ 98.92 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 90.26 ರೂ.


10. ಗಾಂಧಿನಗರ


ಪೆಟ್ರೋಲ್ - ಪ್ರತಿ ಲೀಟರ್‌ಗೆ 98.79 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 96.95 ರೂ.


11. ತಿರುವನಂತಪುರಂ


ಪೆಟ್ರೋಲ್ - ಪ್ರತಿ ಲೀಟರ್‌ಗೆ 103.82 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 96.47 ರೂ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ