Petrol-Diesel Price Today: ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡಿದೆ. ಮಾರ್ಚ್ 15 ಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಪ್ರತಿದಿನ ಪೆಟ್ರೋಲ್-ಡೀಸೆಲ್‌ನ ಹೊಸ ಬೆಲೆಯನ್ನು ಸರ್ಕಾರಿ ತೈಲ ಕಂಪನಿಗಳು ರಿಲೀಸ್‌ ಮಾಡುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಯ ಆಧಾರದ ಮೇಲೆ ಇಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಗದಿ ಪಡಿಸಲಾಗುತ್ತದೆ. ಇಂದು ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. WTI ಕಚ್ಚಾ ತೈಲದಲ್ಲಿ ಶೇಕಡಾ 0.86 ರಷ್ಟು ಹೆಚ್ಚಳವಾಗಿದೆ. ಪ್ರತಿ ಬ್ಯಾರೆಲ್‌ಗೆ 71.94 ಡಾಲರ್​ನಂತೆ ವಹಿವಾಟು ನಡೆಸುತ್ತಿದೆ.


COMMERCIAL BREAK
SCROLL TO CONTINUE READING

ಅಲ್ಲದೇ, ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಇಂದು ಶೇಕಡಾ 0.68 ರಷ್ಟು ಏರಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 77.98 ಡಾಲರ್​ಗೆ ವಹಿವಾಟು ನಡೆಸುತ್ತಿದೆ. ಭಾರತದ ಅನೇಕ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಈ ಕಚ್ಚಾ ತೈಲ ಬೆಲೆ ಏರಿಕೆ ಪರಿಣಾಮ ಬೀರಿದೆ. 


ಇದನ್ನೂ ಓದಿ : Today Vegetable Price: ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ


ಭಾರತದ ನಾಲ್ಕು ಮಹಾನಗರಗಳ ಪೈಕಿ ಚೆನ್ನೈನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಾಗಿದೆ. ಚೆನ್ನೈನಲ್ಲಿ ಇಂದು ಪೆಟ್ರೋಲ್ ಲೀಟರ್‌ಗೆ 102.74 ಮತ್ತು 94.33 ರೂ.ಗೆ 11 ಪೈಸೆ ಮತ್ತು ಡೀಸೆಲ್ ಲೀಟರ್‌ಗೆ 9 ಪೈಸೆಯಷ್ಟು ಇದೆ.  ಇನ್ನೂ ಮುಂಬೈನಲ್ಲಿ ಪೆಟ್ರೋಲ್‌ 106.31 ರೂ. ಮತ್ತು ಡೀಸೆಲ್‌ 94.27 ರೂ. ಗೆ ಮಾರಾಟವಾಗುತ್ತಿದೆ. ದೆಹಲಿ ಪೆಟ್ರೋಲ್‌ 96.72 ರೂ. ಮತ್ತು ಡೀಸೆಲ್‌ 89.62 ರೂ. ಆಗಿದೆ. 


ಕೋಲ್ಕತ್ತಾದಲ್ಲಿ ಪೆಟ್ರೋಲ್‌ 106.03 ರೂ. ಮತ್ತು ಡೀಸೆಲ್‌  92.76 ರೂ. ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ 101.94 ರೂ. ಮತ್ತು ಡೀಸೆಲ್‌ 87.89 ರೂ. ಗೆ ಮಾರಟವಾಗುತ್ತಿದೆ.


ಇದನ್ನೂ ಓದಿ : Indian Railways Big Update: ಹಿರಿಯ ನಾಗರಿಗರಿಗೊಂದು ಬಂಬಾಟ್ ಸುದ್ದಿ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.