ನವದೆಹಲಿ: ದೇಶಾದ್ಯಂತ ಇಂಧನ ದರಗಳನ್ನು ಹೆಚ್ಚಿಸಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol-Diesel Price Today)ಗಳು ಇಂದು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಅಂತಾರಾಷ್ಟ್ರೀಯ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 83 ಡಾಲರ್ ದಾಟಿದ್ದರಿಂದ ತೈಲ ಮಾರುಕಟ್ಟೆ ಕಂಪನಿಗಳು ಬೆಲೆಗಳನ್ನು ಹೆಚ್ಚಿಸಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 35 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್‌ಗೆ 105.14 ರೂ. ತಲುಪಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ಕೂಡ 35 ಪೈಸೆಯಷ್ಟು ಏರಿಕೆ ಕಂಡಿದ್ದು,  93.87 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 34 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 111.09 ರೂ. ಆಗಿದೆ. ಅದೇ ರೀತಿ ಡೀಸೆಲ್ ದರ ಲೀಟರ್‌ಗೆ 38 ಪೈಸೆ ಹೆಚ್ಚಳಗೊಂಡಿದ್ದು, 101.78 ರೂ. ತಲುಪಿದೆ.


COMMERCIAL BREAK
SCROLL TO CONTINUE READING

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ(Petrol Price) 36 ಪೈಸೆ ಹೆಚ್ಚಳವಾಗಿದ್ದು, 108.80 ರೂ. ತಲುಪಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರವು 37 ಪೈಸೆಯಷ್ಟು ಹೆಚ್ಚಳವಾಗಿದ್ದು, 99.63 ರೂ. ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 40 ಪೈಸೆಯಷ್ಟು ಹೆಚ್ಚಳವಾಗಿದ್ದು, 102.50 ರೂ. ತಲುಪಿದ್ದರೆ, ಡೀಸೆಲ್ ದರ 43 ಪೈಸೆ ಹೆಚ್ಚಳವಾಗಿ 98.36 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 33 ಪೈಸೆ ಹಚ್ಚಳವಾಗಿ 105.76 ರೂ. ತಲುಪಿದೆ, ಅದೇ ರೀತಿ ಡೀಸೆಲ್ ಪ್ರತಿ ಲೀಟರ್‌ಗೆ 35 ಪೈಸೆಯಷ್ಟು ಹೆಚ್ಚಳವಾಗಿದ್ದು, 96.98 ರೂ. ಆಗಿದೆ.  


ಇದನ್ನೂ ಓದಿ: ಮಾರುಕಟ್ಟೆಗೆ ಹೊಚ್ಚ ಹೊಸ ಹೀರೋ Xtreme 160R Stealth ಬೈಕ್ ಬಿಡುಗಡೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ


ಪೆಟ್ರೋಲ್ ಮತ್ತು ಡೀಸೆಲ್ ದರ(Diesel Price)ಗಳನ್ನು ಸತತ 2 ದಿನಗಳವರೆಗೆ ಅಂದರೆ ಮಂಗಳವಾರ ಮತ್ತು ಬುಧವಾರ ಪರಿಷ್ಕರಿಸಲಾಗಿರಲಿಲ್ಲ. ಇಂಧನ ದರ ನಿರಂತರವಾಗಿ ಏರಿಕೆ ಕಾಣುತ್ತಿರುವ ಹಿನ್ನೆಲೆ ಗ್ರಾಹಕರಿಗೆ ಜೇಬು ಖಾಲಿಯಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ.


ತೈಲ ಕಂಪನಿಗಳು ಅಳವಡಿಸಿಕೊಂಡ ಬೆಲೆ ಸೂತ್ರದ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್( BPCL ), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ( HPCL)ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಯನ್ನು ಪ್ರತಿದಿನ ಪರಿಷ್ಕರಿಸುತ್ತವೆ. ಪ್ರಸ್ತುತ ದೇಶದ 4 ಮೆಟ್ರೋ ನಗರಗಳಲ್ಲಿ ಇಂಧನ ದರ ಅತ್ಯಧಿಕವಾಗಿದೆ.


ಇದನ್ನೂ ಓದಿ: Arecanut Price: ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ ನೋಡಿ


ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol-Diesel Price)ಗಳು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಬದಲಾಗುತ್ತವೆ. ಸಂಜೆ 6 ರಿಂದ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ಅಬಕಾರಿ ತೆರಿಗೆ, ಡೀಲರ್ ಕಮಿಷನ್ ಮತ್ತು ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ. ವಿದೇಶಿ ವಿನಿಮಯ ದರಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆ ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ.


ಈ ರೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol Diesel Price)ಯನ್ನು ಪರಿಶೀಲಿಸಿ ನೀವು ಪೆಟ್ರೋಲ್ ಡೀಸೆಲ್ ಬೆಲೆಯನ್ನು SMS ಮೂಲಕ ತಿಳಿದುಕೊಳ್ಳಬಹುದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನ ಸಂಜೆ 6 ಗಂಟೆಗೆ ನವೀಕರಿಸಲಾಗುತ್ತದೆ. ಇಂಡಿಯನ್ ಆಯಿಲ್ ಗ್ರಾಹಕರ ಬೆಲೆಯನ್ನು ತಿಳಿಯಲು, ನೀವು ನಿಮ್ಮ ನಗರ ಕೋಡ್ ಅನ್ನು RSP ಯೊಂದಿಗೆ ಟೈಪ್ ಮಾಡಬೇಕು ಮತ್ತು 9224992249 ಗೆ SMS ಕಳುಹಿಸಬೇಕು. ಪ್ರತಿ ನಗರ ಕೋಡ್ ವಿಭಿನ್ನವಾಗಿರುತ್ತದೆ. ಈ ವಿವರಗಳನ್ನು ಐಒಸಿಎಲ್ ವೆಬ್‌ಸೈಟ್‌ನಲ್ಲಿ ಕಾಣಬಹುದು. ಬಿಪಿಸಿಎಲ್ ಗ್ರಾಹಕರು ಆರ್‌ಎಸ್‌ಪಿ 9223112222 ಮತ್ತು ಎಚ್‌ಪಿಸಿಎಲ್ ಗ್ರಾಹಕ ಎಚ್‌ಪಿ ಬೆಲೆ 9222201122 ಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ತಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಂಡುಹಿಡಿಯಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ