Petrol Diesel Price Hike: ಎರಡು ವಾರಗಳಲ್ಲಿ 13ನೇ ಬಾರಿಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ
Petrol Diesel Price Hike: ಏರುತ್ತಿರುವ ಹಣದುಬ್ಬರದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಇದೀಗ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬೆಂಬಿಡದೆ ಕಾಡುತ್ತಿದೆ. ಎರಡು ವಾರಗಳಲ್ಲಿ 13ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ.
Petrol Diesel Price Hike: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕಳೆದ 15 ದಿನಗಳಲ್ಲಿ 13ನೇ ಬಾರಿಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 9.20 ರೂ. ಏರಿಕೆಯಾಗಿದ್ದು ಹೊಸ ದರಗಳು ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಅನ್ವಯವಾಗಲಿದೆ.
ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ (Petrol-Diesel) ಎರಡಕ್ಕೂ ಲೀಟರ್‌ಗೆ 80 ಪೈಸೆ ಹೆಚ್ಚಳ ಘೋಷಿಸಿವೆ. ಇದು 15 ದಿನಗಳಲ್ಲಿ 13 ನೇ ಹೆಚ್ಚಳವಾಗಿದೆ. ಈ ಏರಿಕೆಯೊಂದಿಗೆ ಇಲ್ಲಿಯವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 9.20 ರೂ. ಈ ಹೆಚ್ಚಳವಾಗಿದೆ. ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 104.61 ರೂ., ಡೀಸೆಲ್ ಬೆಲೆ ಲೀಟರ್‌ಗೆ 95.87 ರೂ. ತಲುಪಿದೆ.
ಇದನ್ನೂ ಓದಿ- ಅಗ್ಗವಾಗಲಿದೆ ಪೆಟ್ರೋಲ್, ಡಿಸೇಲ್ ಬೆಲೆ, ಹಣಕಾಸು ಸಚಿವರು ಹೇಳಿದ್ದೇನು ?
ಸಿಎನ್‌ಜಿ ಬೆಲೆಯೂ ಏರಿಕೆಯಾಗಿದೆ:
ಈ ಹಿಂದೆ ಸಿಎನ್‌ಜಿ ದರವನ್ನು (CNG Rate) ಪ್ರತಿ ಕೆಜಿಗೆ 80 ಪೈಸೆ ಹೆಚ್ಚಿಸಲಾಗಿತ್ತು. ಈ ಹೆಚ್ಚಳದ ನಂತರ, ದೆಹಲಿಯಲ್ಲಿ ಸಿಎನ್‌ಜಿಯ ಹೊಸ ಬೆಲೆ ಕೆಜಿಗೆ 61.61 ರೂ.ಗೆ ಏರಿದೆ. ಸಿಎನ್‌ಜಿ ಬೆಲೆಯನ್ನು ವಾರದೊಳಗೆ ಮೂರು ಬಾರಿ ಹೆಚ್ಚಿಸಲಾಗಿದೆ. ಇದರೊಂದಿಗೆ ಸಿಎನ್‌ಜಿ ದರ ವಾರದಲ್ಲಿ ಕೆಜಿಗೆ 2.40 ರೂ.ಗಳಷ್ಟು ದುಬಾರಿಯಾಗಿದೆ.
ಇದನ್ನೂ ಓದಿ- Electricity Bill: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ, ಜನರ ಜೇಬಿಗೆ ಮತ್ತಷ್ಟು ಹೊರೆ
ನಿಮ್ಮ ನಗರದಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಈ ರೀತಿ ತಿಳಿಯಿರಿ:
ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಎಷ್ಟಿದೆ ಎಂಬ ಮಾಹಿತಿಯನ್ನು ನೀವು SMS ಮೂಲಕ ಪಡೆಯಬಹುದು. ಇದಕ್ಕಾಗಿ, ಇಂಡಿಯನ್ ಆಯಿಲ್ (ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ - IOCL) ಗ್ರಾಹಕರು RSP ಕೋಡ್ ಅನ್ನು 9224992249 ಸಂಖ್ಯೆಗೆ ಕಳುಹಿಸಬೇಕಾಗುತ್ತದೆ. ನೀವು ಇಂಡಿಯನ್ ಆಯಿಲ್ ವೆಬ್‌ಸೈಟ್‌ನಲ್ಲಿ ಈ ಕೋಡ್ ಅನ್ನು ಕಾಣಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.