Petrol Price Today : ದೇಶದ ಅನೇಕ ನಗರಗಳಲ್ಲಿ ₹100ಕ್ಕಿಂತ ಕಡಿಮೆ ಬೆಲೆಯಲ್ಲಿ ಪೆಟ್ರೋಲ್!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್ ಲೀಟರ್‌ಗೆ 95.41 ರೂ. ಮತ್ತು ಡೀಸೆಲ್ ಲೀಟರ್‌ಗೆ 86.67 ರೂ.ಗೆ ಮಾರಾಟವಾಗುತ್ತಿದೆ. ಇತರ ನಗರಗಳ ದರಗಳನ್ನು ನೋಡೋಣ...
ನವದೆಹಲಿ : ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂ. ಮತ್ತು ಡೀಸೆಲ್‌ಗೆ ಲೀಟರ್‌ಗೆ 10 ರೂ. (Excise Duty Cut) ಇಳಿಸಿದ ನಂತರ, ಅನೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಗಿಂತ ಕಡಿಮೆಯಾಗಿದೆ. ಈ ಕಡಿತವನ್ನು ಸರ್ಕಾರವು 4 ನವೆಂಬರ್ 2021 ರಂದು ಮಾಡಿದೆ. ಅಂದಿನಿಂದ ಇಂದಿನವರೆಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್(Petrol Price) ಲೀಟರ್‌ಗೆ 95.41 ರೂ. ಮತ್ತು ಡೀಸೆಲ್ ಲೀಟರ್‌ಗೆ 86.67 ರೂ.ಗೆ ಮಾರಾಟವಾಗುತ್ತಿದೆ. ಇತರ ನಗರಗಳ ದರಗಳನ್ನು ನೋಡೋಣ...
ದೇಶದ 4 ಮಹಾನಗರಗಳು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ - ಡೀಸೆಲ್ ಬೆಲೆ
- ದೆಹಲಿ ಪೆಟ್ರೋಲ್ 95.41 ರೂ ಮತ್ತು ಡೀಸೆಲ್ ಲೀಟರ್‌ಗೆ 86.67 ರೂ.
- ಮುಂಬೈ ಪೆಟ್ರೋಲ್ 109.98 ರೂ ಮತ್ತು ಡೀಸೆಲ್ ಲೀಟರ್‌ಗೆ 94.14 ರೂ.
- ಚೆನ್ನೈ ಪೆಟ್ರೋಲ್ 101.40 ರೂ ಮತ್ತು ಡೀಸೆಲ್ ಲೀಟರ್‌ಗೆ 91.43 ರೂ.
- ಕೋಲ್ಕತ್ತಾ ಪೆಟ್ರೋಲ್ ಲೀಟರ್‌ಗೆ 104.67 ಮತ್ತು ಡೀಸೆಲ್(Diesel Price) 89.79 ರೂ.
- ಗಾಂಧಿನಗರ ಪೆಟ್ರೋಲ್ ಲೀಟರ್‌ಗೆ 95.35 ಮತ್ತು ಡೀಸೆಲ್ 89.33 ರೂ.
- ಲಕ್ನೋ ಪೆಟ್ರೋಲ್ ಲೀಟರ್‌ಗೆ 95.28 ಮತ್ತು ಡೀಸೆಲ್ 86.80 ರೂ.
- ಪೋರ್ಟ್ ಬ್ಲೇರ್ ಪೆಟ್ರೋಲ್ 82.96 ರೂ ಮತ್ತು ಡೀಸೆಲ್ ಲೀಟರ್‌ಗೆ 77.13 ರೂ.
ಪ್ರತಿ ದಿನ 6 ಗಂಟೆಗೆ ಬೆಲೆ ಬದಲಾಗುತ್ತದೆ
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol Diesel Price) ಬದಲಾಗುತ್ತದೆ. ಹೊಸ ದರಗಳು ಬೆಳಗ್ಗೆ 6 ಗಂಟೆಯಿಂದ ಅನ್ವಯವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ.
ಈ ಮೂಲಕ ನೀವು ಇಂದಿನ ಇತ್ತೀಚಿನ ಬೆಲೆ ತಿಳಿದುಕೊಳ್ಳಬಹುದು
ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಡೀಸೆಲ್‌ನ ದೈನಂದಿನ ದರವನ್ನು ಸಹ ತಿಳಿಯಬಹುದು (How to check diesel petrol price daily). ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಅನ್ನು 9223112222 ಸಂಖ್ಯೆಗೆ ಬರೆಯುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಅದೇ ಸಮಯದಲ್ಲಿ, HPCL ಗ್ರಾಹಕರು HPPrice ಅನ್ನು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.