Petrol Diesel Price : ಏಪ್ರಿಲ್ 2022ರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.ಆದರೆ ಇದೀಗ ವಾಹನ ಸವಾರರ ನಿರೀಕ್ಷೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಶ್ರೀಸಾಮಾನ್ಯನಿಗೆ ಪೆಟ್ರೋಲ್ ಮತ್ತು ಡೀಸೆಲ್  ಬೆಲೆಯಲ್ಲಿ ಶೀಘ್ರದಲ್ಲೇ ಪರಿಹಾರ ಸಿಗಬಹುದು. ಪೆಟ್ರೋಲ್, ಡೀಸೆಲ್ ಬೆಲೆ 5ರಿಂದ 10 ರೂಪಾಯಿ ಇಳಿಕೆಯಾಹುವ ಎಲ್ಲಾ ಸಾಧ್ಯತೆಗಳಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 75 ಡಾಲರ್ ಗೆ ಇಳಿದಿದೆ. ಭಾರತದಲ್ಲಿ ತೈಲ ಬೆಲೆಯಲ್ಲಿ ಇದುವರೆಗೆ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಆದರೆ, ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗಲಿದೆ. 


COMMERCIAL BREAK
SCROLL TO CONTINUE READING

ತೈಲ ಕಂಪನಿಗಳಿಗೆ ಲಾಭ :
ವರದಿಯ ಪ್ರಕಾರ, ತೈಲ ಕಂಪನಿಗಳ ಲಾಭವು ಡಿಸೆಂಬರ್ 2023 ರ ತ್ರೈಮಾಸಿಕದ ವೇಳೆಗೆ 75000 ಕೋಟಿ ರೂ.ಆಗಿದೆ. ತೈಲ ಕಂಪನಿಗಳ ಹೆಚ್ಚುತ್ತಿರುವ ಲಾಭದ ದೃಷ್ಟಿಯಿಂದ, ಕಂಪನಿಗಳು ಸಾಮಾನ್ಯ ಜನರಿಗೆ ಪರಿಹಾರವನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಣನೀಯ ಇಳಿಕೆ ಮಾಡಬಹುದು ಎಂದು ಹೇಳಲಾಗಿದೆ. ವರದಿಯ ಪ್ರಕಾರ, ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಲೀಟರ್‌ಗೆ 10 ರೂ.ಗಳಷ್ಟು ಲಾಭಾಂಶವನ್ನು ಹೊಂದಿರಬಹುದು. ತೈಲ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ಕಂಪನಿಗಳು ಈ ಮಾರ್ಜಿನ್ ಅನ್ನು ಗ್ರಾಹಕರಿಗೆ ರವಾನಿಸಬಹುದು ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ :   ದಾವೋಸ್: 22 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳಿಗೆ ರಾಜ್ಯದ ಅಂಕಿತ


ಕಚ್ಚಾ ತೈಲ ಬೆಲೆ : 
ಕಚ್ಚಾ ತೈಲ ಬೆಲೆ ಕುಸಿತದಿಂದಾಗಿ ತೈಲ ಕಂಪನಿಗಳ ಲಾಭ ಹೆಚ್ಚಾಗಿದೆ. ಹೆಚ್ಚಿನ ಮಾರ್ಜಿನ್‌ಗಳಿಂದಾಗಿ, ತೈಲ ಕಂಪನಿಗಳು ಭಾರಿ ಲಾಭ ಗಳಿಸಿವೆ ಮತ್ತು ಅವುಗಳ ನಷ್ಟವನ್ನು ಸಹ ಸರಿದೂಗಿಸಲಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ 2023-24ನೇ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 5826.96 ಕೋಟಿ ರೂಪಾಯಿ ಲಾಭ ಗಳಿಸಿದ್ದರೆ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಸೆಪ್ಟೆಂಬರ್ 2023 ತ್ರೈಮಾಸಿಕದಲ್ಲಿ 8244 ಕೋಟಿ ರೂ.ಲಾಭ ಗಳಿಸಿದೆ. ದೇಶದ ಮೂರು ದೊಡ್ಡ ತೈಲ ಕಂಪನಿಗಳಲ್ಲಿ ಸರ್ಕಾರವು ಮುಖ್ಯ ಪ್ರವರ್ತಕ ಮತ್ತು ಬಹುಪಾಲು ಷೇರುದಾರ. 2023-24ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಮೂರು ತೈಲ ಕಂಪನಿಗಳ ಒಟ್ಟು ನಿವ್ವಳ ಲಾಭವು  57,091.87 ಕೋಟಿಗಳಾಗಿದ್ದು, ಇದು 2022-23ರ ಹಣಕಾಸು ವರ್ಷಕ್ಕಿಂತ 4,917% ದಷ್ಟು ಹೆಚ್ಚಾಗಿದೆ. 


ಇದನ್ನೂ ಓದಿ : Pension Rules : ಮಹಿಳೆಯರಿಗೆ ರಾಜ್ಯ ಸರ್ಕಾರದ ಬಹು ದೊಡ್ಡ ಕೊಡುಗೆ : ಇನ್ನು 60 ಅಲ್ಲ 50 ವರ್ಷದಿಂದಲೇ ಸಿಗುವುದು ಪಿಂಚಣಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ