ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲೂ (Petrol Diesel Price) ಇಳಿಮುಖವಾಗಿದೆ.  ಹೋಲಿಯ ಮಾರನೆಯ ದಿನ ಅಂದರೆ ಮಾರ್ಚ್ 30ರ ತೈಲ ಬೆಲೆಯಲ್ಲಿ ಸ್ವಲ್ಪ ಮಟ್ಟದ ಇಳಿಕೆಯಾಗಿದೆ.  ದೆಹಲಿಯಲ್ಲಿ ಪೆಟ್ರೋಲ್ ಬೆಲೆ 22 ಪೈಸೆ ಮತ್ತು ಡೀಸೆಲ್ ಮೇಲೆ 23 ಪೈಸೆಯಷ್ಟು ಕಡಿಮೆಯಾಗಿದೆ. ದರ ಇಳಿಕೆ ನಂತರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ  ಲೀಟರ್‌ಗೆ 90.56 ರೂ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 80.87 ರೂ.  ಆಗಿದೆ. 


COMMERCIAL BREAK
SCROLL TO CONTINUE READING

4 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಿರಲಿಲ್ಲ :   
ನಾಲ್ಕು ದಿನಗಳ ನಂತರ ಪೆಟ್ರೋಲ್ (Petrol) ಮತ್ತು ಡೀಸೆಲ್ ದರದಲ್ಲಿ ಬದಲಾವಣೆ ಕಂಡು ಬಂದಿದೆ. ಮಾರ್ಚ್ ತಿಂಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ (Diesel) ಬೆಲೆ ಕಡಿಮೆಯಾಗಿದೆ. ಇದಕ್ಕೂ ಮೊದಲು ಮಾರ್ಚ್ 24 ಮತ್ತು 25 ರಂದು ಪೆಟ್ರೋಲ್ ದರದಲ್ಲಿ ಸ್ಫಲ್ಪ ಮಟ್ಟಿನ ಇಳಿಕೆ ಕಂಡು ಬಂದಿತ್ತು. ಈ ಎರಡು ದಿನಗಳಲ್ಲಿ ದೆಹಲಿಯಲ್ಲಿ ಪೆಟ್ರೋಲ್ ದರ 39 ಪೈಸೆ ಮತ್ತು ಡೀಸೆಲ್ ದರ  37 ಪೈಸೆಯಷ್ಟು  ಕಡಿಮೆಯಾಗಿತ್ತು. 


ಇದನ್ನೂ ಓದಿ : PAN-Aadhaar Link: ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲಾಗಿದೆಯೇ?


ಮೆಟ್ರೋ ನಗರಗಳಲ್ಲಿ ತೈಲ ಬೆಲೆ ಎಷ್ಟಿದೆ ? 
ನಗರ                            ಪೆಟ್ರೋಲ್ ಬೆಲೆ (ಪ್ರತಿ ಲೀಟರ್‌ಗೆ)              ಡೀಸೆಲ್ (ಪ್ರತಿ ಲೀಟರ್‌ಗೆ ರೂ)
ದೆಹಲಿ                          90.56                                                        80.87
ಮುಂಬೈ                       96.98                                                        87.96
ಕೋಲ್ಕತಾ                    90.77                                                        83.75
ಚೆನ್ನೈ                          92.58                                                        85.88


ನಿಮ್ಮ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವುದನ್ನು ಹೀಗೆ ಚೆಕ್ ಮಾಡಿಕೊಳ್ಳಿ
ನಿಮ್ಮ ಮೊಬೈಲ್ನಲ್ಲಿ (Mobile) RSP ಮತ್ತು ನಿಮ್ಮ ನಗರದ ಕೋಡ್‌ ನಂಬರ್ ಬರೆದು, ಅದನ್ನು 9224992249 ಸಂಖ್ಯೆಗೆ ಎಸ್‌ಎಂಎಸ್ (SMS) ಮಾಡಿ. ನೀವು ಮೆಸೇಜ್ ಕಳುಹಿಸಿದ ತಕ್ಷಣ ನಿಮ್ಮ ಮೊಬೈಲ್ ಗೆ ನಿಮ್ಮ ನಗರದಲ್ಲಿ ಪೆಟ್ರೋಲ್ ಡೀಸೆಲ್ ದರ ಎಷ್ಟಿದೆ ಅನ್ನುವ ಸಂದೇಶ ಬರುತ್ತದೆ.   ಪ್ರತಿ ನಗರ ಕೋಡ್ ಬೇರೆ ಬೇರೆಯಾಗಿರುತ್ತದೆ.  ಐಒಸಿ ವೆಬ್‌ಸೈಟ್‌ನಲ್ಲಿ (Website) ಇದನ್ನು ಪಡೆದುಕೊಳ್ಳಬಹುದು. 


ಇದನ್ನೂ ಓದಿNew PPF Investment Rule - PPF ಸೇರಿದಂತೆ ಈ ಯೋಜನೆಗಳಿಂದ ಹಣ ಹಿಂಪಡೆದರೆ, TDS ನಿಂದ ಶೇ.5 ರಷ್ಟು ಕಡಿತವಾಗಲಿದೆ


ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತದೆ ದರ : 
ಪ್ರತಿದಿನ ಬೆಳಿಗ್ಗೆ ಆರು ಗಂಟೆಗೆ  ಪೆಟ್ರೋಲ್ ಮತ್ತು ಡೀಸೆಲ್ ನ (Petrol Diesel Price) ಹೊಸ ದರ ತಿಳಿಯುತ್ತದೆ.  ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್  ಮತ್ತು ಇತರ ಅನೇಕ ಸುಂಕಗಳನ್ನು (Tax) ಸೇರಿಸಿದ ನಂತರ ಅ ದಿನದ ನಿಜವಾದ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.