ಬೆಂಗಳೂರು : ಪೆಟ್ರೋಲ್ ಮತ್ತು ಡೀಸೆಲ್ ದರ ದಾಖಲೆ ಏರಿಕೆ ದಾಖಲಿಸುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಸೆಂಚುರಿ ದಾಖಲಿಸಿದೆ. ರಾಜ್ಯದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಸೆಂಚುರಿ ದಾಖಲಿಸುವ ದಿನಗಳು ಬಹು ದೂರ ಇಲ್ಲ.  ರಾಜ್ಯದಲ್ಲಿ ಪೆಟ್ರೋಲ್ ದರ ಶತಕಕ್ಕೆ ತೀರಾ ಸನಿಹದಲ್ಲಿದ್ದು, ಯಾವುದೇ ಹೊತ್ತು ನೂರರ ಗಡಿ ದಾಟಲಿದೆ.  ರಾಜ್ಯದ 21 ಜಿಲ್ಲೆಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 99.99 ರೂಪಾಯಿ ದಾಖಲಾಗಿದೆ. ನಿನ್ನೆ 15 ಜಿಲ್ಲೆಗಳಲ್ಲಿ  ಪೆಟ್ರೋಲ್ ಬೆಲೆ 99.99 ರೂಪಾಯಿ ಆಗಿತ್ತು. ಇವತ್ತು ಈ ಪಟ್ಟಿಗೆ ಮತ್ತೆ ಆರು ಜಿಲ್ಲೆಗಳು ಸೇರ್ಪಡೆಯಾಗಿವೆ. 


COMMERCIAL BREAK
SCROLL TO CONTINUE READING

ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ಧಾರಣೆ ಎಷ್ಟು.?
ಸತತ ಬೆಲೆ ಏರಿಕೆಯಿಂದ ವಾಹನ ಸವಾರರು ಕಂಗಾಲಾಗಿ ಹೋಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ (Petrol price) 99.89 ರೂಪಾಯಿ ಇಂದು ದಾಖಲಾಗಿದೆ. ಅದೇ ರೀತಿ ಡೀಸೆಲ್ ಬೆಲೆ 92.66 ರೂಪಾಯಿ ದಾಖಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರಿಗೆ 99.45 ರೂಪಾಯಿ (petrol price in Mysore) ದಾಖಲಾಗಿದೆ. ನಿನ್ನೆ 99.47 ರೂಪಾಯಿ ಇತ್ತು. ಡೀಸೆಲ್ ದರ 92. 26 ರೂಪಾಯಿ ಪ್ರತಿ ಲೀಟರ್ ಆಗಿದೆ. 


ಇದನ್ನೂ ಓದಿ : Income Tax Alert! ಹೊಸ ಪೋರ್ಟಲ್ ನಲ್ಲಿ ತಾಂತ್ರಿಕ ಅಡಚಣೆ, 15CA ಹಾಗೂ 15CB ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ


ರಾಜ್ಯದ ಪ್ರಮುಖ ನಗರಗಳ ಧಾರಣೆ ಹೀಗಿದೆ.
ಬೆಳಗಾವಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ (petrol price in beglavi) 99.81 ಮತ್ತು ಡೀಸೆಲ್ 92.62 ರೂಪಾಯಿ ನಿಗದಿಯಾಗಿದೆ. ಮಂಗಳೂರಿನಲ್ಲಿ ಪೆಟ್ರೋಲ್ 99.74 ರೂಪಾಯಿ,   ಡೀಸೆಲ್ 91.78ಯಲ್ಲಿ ಮಾರಾಟವಾಗುತ್ತಿದೆ. ಶಿವಮೊಗ್ಗದಲ್ಲಿ ಪೆಟ್ರೋಲ್ 99.99 ಡೀಸೆಲ್ 93.83 ರೂಪಾಯಿ. ಉಡುಪಿಯಲ್ಲಿ ಪೆಟ್ರೋಲ್ 99.37 ಮತ್ತು  ಡೀಸೆಲ್ 92 .15 ರೂಪಾಯಿ. ಹುಬ್ಬಳ್ಳಿ ಧಾರವಾಡ ಪೆಟ್ರೋಲ್ 99.68 ರೂಪಾಯಿ ಮತ್ತು  ಡೀಸೆಲ್ 92 .50 ರೂಪಾಯಿ ಪ್ರತಿ ಲೀಟರ್ ಮಾರಾಟವಾಗುತ್ತಿದೆ. ಗುಲ್ಬರ್ಗಾದಲ್ಲಿ  ಪೆಟ್ರೋಲ್ 99. 99 ಮತ್ತು ಡೀಸೆಲ್ 93.10 ರೂಪಾಯಿ/ಲೀಟರ್ ಆಗಿದೆ. ದಾವಣಗೆರೆ ಪ್ರತಿ ಲೀಟರ್ ಪೆಟ್ರೋಲ್ 99.99 ರೂಪಾಯಿ ಮತ್ತು  ಡೀಸೆಲ್ 94.35 ರೂಪಾಯಿ. 


21 ಜಿಲ್ಲೆಗಳಲ್ಲಿ ಪ್ರತಿಲೀಟರ್ ಪೆಟ್ರೋಲ್ ಬೆಲೆ 99.99 :
ಕೋಲಾರ, ಉಡುಪಿ(Ududpi) , ರಾಮನಗರ, ರಾಯಚೂರು, ಮಂಡ್ಯ, ಗುಲ್ಬರ್ಗಾ,ತುಮಕೂರು, ಉತ್ತರ ಕನ್ನಡ, ಶಿವಮೊಗ್ಗ(Shimoga), ಕೊಪ್ಪಳ, ಬಾಗಲಕೋಟೆ, ಬೆಳಗಾವಿ,  ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರ ದುರ್ಗ,  ದಾವಣಗೆರೆ, ಗದಗ್, ಹಾವೇರಿ, ಕೊಡಗು, ಯಾದಗಿರಿ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 99.99 ರೂಪಾಯಿಯ ಅಂಚಿನಲ್ಲಿ ನಿಂತಿದೆ. ಅಂದರೆ ನೀವು ಬಹುತೇಕ ನೂರು ರೂಪಾಯಿ ಕೊಟ್ಟು ಒಂದು ಲೀಟರ್ ಪೆಟ್ರೋಲ್ ಹಾಕಿಸಿಕೊಳ್ಳಬೇಕು.


ಇದನ್ನೂ ಓದಿ : PAN-Aadhaar Link: ಜೂನ್ 30ರೊಳಗೆ ಕೆಲಸ ಈ ಮಾಡದಿದ್ದಲ್ಲಿ ತೆರಬೇಕಾಗುತ್ತದೆ ಭಾರೀ ದಂಡ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.