ಬೆಂಗಳೂರು :  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕುಸಿಯುವ (Petrol diesel price) ಯಾವುದೇ ಲಕ್ಷಣವನ್ನು ತೋರುತ್ತಿಲ್ಲ. ರಾಜ್ಯದಲ್ಲಿ ನಿನ್ನೆ 21 ಜಿಲ್ಲೆಗಳಲ್ಲಿ ಪೆಟ್ರೋಲ್ 99.99 ರೂಪಾಯಿ ದಾರಣೆಯಲ್ಲಿ ಮಾರಾಟವಾಗುತ್ತಿತ್ತು. ಇವತ್ತು ಕೂಡಾ ಪೆಟ್ರೋಲ್ ಬೆಲೆಯಲ್ಲಿ ಏರುಗತಿ ಕಾಣಿಸಿಕೊಂಡಿದೆ.  ಇವತ್ತಿನ ಧಾರಣೆ ಗಮನಿಸಿದರೆ 19 ಜಿಲ್ಲೆಗಳಲ್ಲಿ ಪೆಟ್ರೋಲ್ ರೂಪಾಯಿ 99.99/ಲೀಟರ್ ರೇಟ್ ದಾಖಲಿಸಿದೆ. 


COMMERCIAL BREAK
SCROLL TO CONTINUE READING

ಅಂದರೆ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರ ದುರ್ಗ, ದಾವಣಗೆರೆ, ಗದಗ್,  ಹಾಸನ, ಹಾವೇರಿ,ಕೊಡಗು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಮತ್ತು ಯಾದಗಿರಿ – ಈ 19 ಜಿಲ್ಲೆಗಳಲ್ಲಿ ಪೆಟ್ರೊಲ್ ಬೆಲೆ(Petrol price)  ಬಹುತೇಕ ನೂರು ರೂಪಾಯಿ/ಪ್ರತಿ ಲೀಟರ್ ಆಗಿದೆ. 


ಇದನ್ನೂ ಓದಿ : Google Pay: SBI ಸೇರಿದಂತೆ ಈ ಬ್ಯಾಂಕುಗಳೊಂದಿಗೆ ಕಾರ್ಡ್ ಟೋಕನೈಸೇಶನ್ ಪ್ರಾರಂಭಿಸಿದ ಗೂಗಲ್ ಪೇ


ಬೆಂಗಳೂರಿನಲ್ಲಿ 99.89/ ಲೀಟರ್ (Bengaluru) , ಬೆಂಗಳೂರು ಗ್ರಾಮಾಂತರದಲ್ಲಿ 99.62/ಲೀಟರ್,  ಬಿಜಾಪುರದಲ್ಲಿ 99.70/ಲೀಟರ್, ಧಾರಾವಾಡದಲ್ಲಿ 99.81/ ಲೀಟರ್, ಗುಲ್ಬರ್ಗಾದಲ್ಲಿ 99.64/ಲೀಟರ್, ಕೋಲಾರ 99.60/ಲೀಟರ್,  ಮಂಡ್ಯ 99.89/ಲೀಟರ್, ಮೈಸೂರು 99.73/ಲೀಟರ್, ಉಡುಪಿ 99.55/ಲೀಟರ್, ದಕ್ಷಿಣ ಕನ್ನಡ 99.90/ಲೀಟರ್ ಬೆಲೆ ದಾಖಲಾಗಿದೆ. ಅಂದರೆ ಈ ಜಿಲ್ಲೆಗಳಲ್ಲೂ ನೀವು ಬಹುತೇಕ ಒಂದು ಲೀಟರ್ ಪೆಟ್ರೋಲಿಗೆ ನೂರು ರೂಪಾಯಿ ನೀಡಲೇಬೇಕು.


ಇನ್ನು ಡೀಸೆಲ್ ರೇಟ್ ಗಮನಿಸಿದರೆ, ಬೆಂಗಳೂರಿನಲ್ಲಿ 92.66/ಲೀಟರ್, ಬೆಂಗಳೂರು ಗ್ರಾಮಾಂತರ 92.42/ಲೀಟರ್,  ಬೆಳಗಾವಿ 92.92/ಲೀಟರ್, ಬಳ್ಳಾರಿ 93.59/ ಲೀಟರ್, ದಕ್ಷಿಣ ಕನ್ನಡ 92. 64 / ಲೀಟರ್, ದಾವಣಗೆರೆ 94.08/ಲೀಟರ್, ಮಂಡ್ಯ 92.66/ಲೀಟರ್, ಶಿವಮೊಗ್ಗ 94.41/ಲೀಟರ್ ದಾಖಲಾಗಿದೆ. 


ಇದನ್ನೂ ಓದಿ : 7th Pay Commission: ಜುಲೈ 1 ರಿಂದ ಸರ್ಕಾರಿ ನೌಕರರ ವೇತನದಲ್ಲಿ ರೂ.32,400 ಹೆಚ್ಚಳ! ಹೇಗೆ ಇಲ್ಲಿ ತಿಳಿಯಿರಿ


ಸತತ ಬೆಲೆ ಏರಿಕೆಯಿಂದ ವಾಹನ ಸವಾರರು ಕಂಗಾಲಾಗಿ ಹೋಗಿದ್ದಾರೆ.  ಪೆಟ್ರೋಲ್ ಮತ್ತು ಡೀಸೆಲ್ ಹೆಚ್ಚು (Petrol diesel praice) ಕಡಿಮೆ ಒಂದೇ ವೇಗದಲ್ಲಿ ಮೇಲಕ್ಕೇರುತ್ತಿದೆ.   ಪೆಟ್ರೋಲ್ ಡೀಸೆಲ್ ನಡುವಣ ದರ ವ್ಯತ್ಯಾಸ ಕೂಡಾ ತೀರಾ ಕಡಿಮೆ ಆಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.