Petrol Price 02 July 2021 Update: ಪೆಟ್ರೋಲ್ ಬೆಲೆಯಲ್ಲಿ ದಿನೇ ದಿನೇ ಏರಿಕೆ ಕಂಡು ಬರುತ್ತಿದೆ. ದೇಶದ 332 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ೧೦೦ ರ ಗಡಿ ದಾಟಿದೆ. ರಾಜಸ್ಥಾನದ ಶ್ರೀ ಗಂಗನಗರದಲ್ಲಿ ಪೆಟ್ರೋಲ್ ದರ 110 ರೂಗಳನ್ನು ದಾಟಿದ್ದರೆ, ಡೀಸೆಲ್ ಲೀಟರ್‌ಗೆ 102 ರೂ.ಗಿಂತ ಅಹಿಕ್ ಬೆಲೆಗೆ ಮಾರಾಟವಾಗುತ್ತಿದೆ.


COMMERCIAL BREAK
SCROLL TO CONTINUE READING

76 ಡಾಲರ್ ದಾಟಿದ ಕಚ್ಚಾ ತೈಲ ಬೆಲೆ : 
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರೆಲ್‌ಗೆ 76 ಡಾಲರ್ ದಾಟಿದೆ. ಇದರಿಂದಾಗಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ (petrol diesel price) ಗಣನೀಯ ಏರಿಕೆ ಕಂಡು ಬಂದಿದೆ.  ಈ ವರ್ಷ ಪೆಟ್ರೋಲ್ ಬೆಲೆ ಇಲ್ಲಿಯವರೆಗೆ 15% ದಷ್ಟು ಹೆಚ್ಚಾಗಿದೆ. 


ಇದನ್ನೂ ಓದಿ : Bank Holidays July 2021 : ಜುಲೈ ತಿಂಗಳಲ್ಲಿ 15 ದಿನ ಬ್ಯಾಂಕ್ ರಜೆ : ಇಲ್ಲಿದೆ ಪುಲ್ ಲಿಸ್ಟ್!


ಇಂದು ಕೂಡಾ ಪೆಟ್ರೋಲ್ ಬೆಲೆ (petro rate) 35 ಪೈಸೆಯಷ್ಟು ಹೆಚ್ಚಾಗಿದೆ. ಆದರೆ ಸತತ ಮೂರನೇ ದಿನವೂ ಡೀಸೆಲ್ (diesel rate) ಬೆಲೆಯಲ್ಲಿಯವುದೇ ಬದಲಾವಣೆಯಾಗಿಲ್ಲ.  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇ 4 ರ ನಂತರವೇ ಹೆಚ್ಚಾಗತೊಡಗಿದ್ದು, ಅಂದಿನಿಂದ 33 ಬಾರಿ ದರಗಳನ್ನು ಹೆಚ್ಚಿಸಲಾಗಿದೆ.


ಪ್ರಮುಖ ನಗರಗಳ ಪೆಟ್ರೋಲ್ ಬೆಲೆ
ದೆಹಲಿ -  99.16
ಮುಂಬೈ - 105.24
ಕೋಲ್ಕತಾ - 99.04
 ಬೆಂಗಳೂರು - 102.11
ಚೆನ್ನೈ - 100.13


ಪೆಟ್ರೋಲ್ ನಂತರ, ಈಗ ಡೀಸೆಲ್ ಬೆಲೆಗಳನ್ನು ನೋಡೋಣ. 
ದೆಹಲಿ - 89.18
ಮುಂಬೈ - 96.72
ಕೋಲ್ಕತಾ - 92.03
 ಬೆಂಗಳೂರು -  94.54
ಚೆನ್ನೈ - 93.72


ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನೀವೇ ನೋಡಿ: 
ಎಸ್‌ಎಂಎಸ್ (SMS) ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನೂ ನೀವು ತಿಳಿದುಕೊಳ್ಳಬಹುದು. RSP ಎಂದು ಬರೆದು ನಿಮ್ಮ ನಗರದ ಕೋಡ್ ಹಾಕಿ ಅದನ್ನು 9224992249 ಸಂಖ್ಯೆಗೆ ಕಳುಹಿಸಿದರೆ ನಿಮ್ಮ ನಗರದ ಪೆಟ್ರೊಲ್, ಡೀಸೆಲ್  ರೇಟ್ ಎಷ್ಟು ಎನ್ನುವುದು ತಿಳಿಯುತ್ತದೆ. ಪ್ರತಿ ನಗರದ ಕೋಡ್ ಬೇರೆ ಬೇರೆಯಾಗಿದ್ದು, ಇದರ ಮಾಹಿತಿ ಕೂಡಾ ಐಒಸಿ (IOC)  ವೆಬ್‌ಸೈಟ್‌ನಲ್ಲಿ ಸಿಗಲಿದೆ.


ಇದನ್ನೂ ಓದಿ : Gold-Silver Rate : ಈಗ ಚಿನ್ನ ಖರೀದಿಸಲು ಒಳ್ಳೆ ಸಮಯ : 10 ಗ್ರಾಂ ಚಿನ್ನದ ಬೆಲೆಯಲ್ಲಿ ₹2670 ಇಳಿಕೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.