Crude Oil Price Today: ದಿನದಿಂದ ದಿನಕ್ಕೆ ಹೆಚ್ಚಗುತ್ತಿರುವ ಪೆಟ್ರೋಲ್ ಡೀಸೆಲ್ ಹಣದುಬ್ಬರದಿಂದ ಶ್ರೀಸಾಮಾನ್ಯರಿಗೆ ಶೀಘ್ರದಲ್ಲಿಯೇ ಪರಿಹಾರ ಸಿಗಲಿದೆ. ಪ್ರಸ್ತುತ ಜಾಗತಿಕವಾಗಿ ಇಂಧನ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಭಾರತದ ಪಾಲಿಗೆ ಒಳ್ಳೆಯ ಸುದ್ದಿ ಸಿಗುವ ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ. ಹೌದು, ಸಿಟಿಗ್ರೂಪ್ ಕಚ್ಚಾ ತೈಲ ಬೆಲೆಯಲ್ಲಿ ಮುಂಬರುವ ದಿನಗಳಲ್ಲಿ ಭಾರಿ ಕುಸಿತ ಉಂಟಾಗಬಹುದು ಎಂದು ಭವಿಷ್ಯ ನುಡಿದಿದೆ.


COMMERCIAL BREAK
SCROLL TO CONTINUE READING

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ!
2022 ರ ಅಂತ್ಯದ ವೇಳೆಗೆ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $ 65 ಕ್ಕೆ ಇಳಿಯಬಹುದು ಎಂದು ಸಿಟಿಗ್ರೂಪ್ ಹೇಳಿದೆ. ಇದು ಸಂಭವಿಸಿದಲ್ಲಿ, 2023 ರ ಅಂತ್ಯದ ವೇಳೆಗೆ, ಇಂಧನದ ಬೆಲೆ ಪ್ರತಿ ಬ್ಯಾರೆಲ್ಗೆ $ 45 ಕ್ಕೆ ಇಳಿಕೆಯಾಗಲಿದೆ. ಪ್ರಸ್ತುತ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $ 105 ಆಗಿದೆ, ಮುಂದಿನ ದಿನಗಳಲ್ಲಿ ಇದು ಶೇ. 58 ರಷ್ಟು ಕಡಿಮೆಯಾಗಬಹುದು ಎಂದು ನಿರೀಕ್ಸಿಸಲಾಗಿದೆ.


ಸಿಟಿಗ್ರೂಪ್ ನೀಡಿರುವ ಮಾಹಿತಿ ಪ್ರಕಾರ, 'ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಕಚ್ಚಾ ತೈಲದ ಬೇಡಿಕೆಯಲ್ಲಿ ಭಾರಿ ಇಳಿಕೆಯಾಗಬಹುದು ಎನ್ನಲಾಗಿದೆ. ಆದರೆ, ಇನ್ನೊಂದೆಡೆ ನಾವು ಕಚ್ಚಾ ತೈಲ ಬೆಲೆಯ ಇತಿಹಾಸವನ್ನು ಗಮನಿಸಿದರೆ, ಜಾಗತಿಕ ಆರ್ಥಿಕತೆಯ ಮೇಲೆ ಬಿಕ್ಕಟ್ಟು ಉಂಟಾದಾಗ, ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಕುಸಿತ ಉಂಟಾಗುವುದು ಸ್ಪಷ್ಟವಾಗುತ್ತದೆ.


ಇದನ್ನೂ ಓದಿ-Fuel Consumption Standards: ವಾಹನಗಳಿಗೆ ಸಂಬಂಧಿಸಿದ ಹೊಸ ನಿಯಮ ಜಾರಿಗೆ ತರಲು ಸರ್ಕಾರದ ಚಿಂತನೆ, ಜನರ ಜೇಬಿನ ಮೇಲೆ ನೇರ ಪ್ರಭಾವ


ಕಚ್ಚಾ ತೈಲ ಬೆಲೆ ಇಳಿಕೆಯಾಗಲಿದೆ
2008 ರಲ್ಲಿ ಆರ್ಥಿಕ ಹಿಂಜರಿತ ಉಂಟಾದಾಗ, ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ $ 149 ರಿಂದ ಪ್ರತಿ ಬ್ಯಾರೆಲ್‌ಗೆ $ 35 ಕ್ಕೆ ಇಳಿಕೆಯಾಗಿತ್ತು. ಇದರ ನಂತರ, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ವಿಶ್ವಾದ್ಯಂತ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $ 20 ಕ್ಕೆ ಇಳಿದಿತ್ತು. ಇದಕ್ಕೂ ಮೊದಲು ಮಂಗಳವಾರ ಆರ್ಥಿಕ ಬಿಕ್ಕಟ್ಟು ಮತ್ತು ಆರ್ಥಿಕ ಹಿಂಜರಿತದಿಂದಾಗಿ, ಅಮೆರಿಕದಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $ 100 ಕ್ಕೆ ಇಳಿದಿತ್ತು. ಅಂದರೆ, ಆರ್ಥಿಕ ಹಿಂಜರಿತ ಉಂಟಾದಾಗಲೆಲ್ಲ ಬೇಡಿಕೆ ಕಡಿಮೆಯಾಗುವುದರಿಂದ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗಲಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ-Free Ration Update : ಪಡಿತರದಾರರಿಗೆ ಬಿಗ್ ನ್ಯೂಸ್, ಉಚಿತ ಪಡಿತರ ಯೋಜನೆ ನಿಲ್ಲಿಸಲು ಹೊರಟ ಕೇಂದ್ರ ಸರ್ಕಾರ!


ಭಾರತಕ್ಕೆ ದೊಡ್ಡ ಲಾಭ!
ಎಲ್ಲವು ಅಂದುಕೊಂಡಂತೆ ನಡೆದರೆ ಮತ್ತು ಕಚ್ಚಾ ತೈಲ ಬೆಲೆ ಕಡಿಮೆಯಾದರೆ, ಭಾರತ ಪಾಲಿಗೆ ಇದೊಂದು ಉತ್ತಮ ಸುದ್ದಿಯಾಗಲಿದೆ. ಭಾರತವು ತನ್ನ ಕಚ್ಚಾ ತೈಲ ಬಳಕೆಯ ಶೇ. 80 ರಷ್ಟನ್ನು  ಆಮದು ಮಾಡಿಕೊಳ್ಳುತ್ತದೆ ಮತ್ತು ವಿದೇಶಿ ವಿನಿಮಯ ಸಂಗ್ರಹದ ಗರಿಷ್ಠ ವೆಚ್ಚವು ಕಚ್ಚಾ ತೈಲದ ಆಮದಿನ ಮೇಲೆಯೇ ಇರುತ್ತದೆ. ಒಂದು ವೇಳೆ, ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾದರೆ, ಸಾಮಾನ್ಯ ಜನರಿಗೆ ಇಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್ ಸಿಗಲಿದೆ, ಜೊತೆಗೆ ವಿದೇಶಿ ವಿನಿಮಯ ಸಂಗ್ರಹವೂ ಉಳಿತಾಯವಾಗಲಿದೆ, ಇದರಿಂದ ಕೇಂದ್ರ ಸರ್ಕಾರದ ಆರ್ಥಿಕ ಕೊರತೆ ಕೂಡ ಕಡಿಮೆಯಾಗಲಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.