ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಇತ್ತೀಚೆಗೆ ಪಿಎಫ್ ಖಾತೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇಲ್ಲಿಯವರೆಗೆ, ಪಿಎಫ್ ಖಾತೆದಾರರು ಮನೆಯಲ್ಲಿಯೇ ಕುಳಿತು ಆನ್‌ಲೈನ್ ಪೋರ್ಟಲ್ ಮೂಲಕ ತಮ್ಮ ವೈಯಕ್ತಿಕ ಮಾಹಿತಿಯನ್ನು ಬದಲಾಯಿಸಬಹುದಾಗಿತ್ತು. ಹೊಸ ಮಾರ್ಗಸೂಚಿಗಳ ಬಿಡುಗಡೆಯ ನಂತರ, ಈಗ ಈ ಬದಲಾವಣೆಗಳು ಸಾಧ್ಯವಾಗುವುದಿಲ್ಲ.


COMMERCIAL BREAK
SCROLL TO CONTINUE READING

ಖಾತೆದಾರರಿಗೆ ತೊಂದರೆಗಳು ಹೆಚ್ಚಾಗಬಹುದು :
ನೀವು ಪಿಎಫ್ ಖಾತೆದಾರರಾಗಿದ್ದರೆ ಮತ್ತು ನಿಮ್ಮ ಪಿಎಫ್ ಖಾತೆಯ ಪ್ರೊಫೈಲ್‌ನಲ್ಲಿ ಕೆಲವು ತಪ್ಪುಗಳು ಸಂಭವಿಸಿದ್ದರೆ, ಮೊದಲು ನೀವು ಇಪಿಎಫ್‌ಒನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅದನ್ನು ಸರಿಪಡಿಸಬಹುದು. ಇದಕ್ಕಾಗಿ, ನೀವು ಕಚೇರಿಗೆ ಪದೇ ಪದೇ  ಸುತ್ತುವ ಅವಶ್ಯಕತೆ ಇರಲಿಲ್ಲ. ಈಗ ಹೊಸ ಮಾರ್ಗಸೂಚಿಗಳ ನಂತರ ಖಾತೆದಾರರ ಸಮಸ್ಯೆ ಹೆಚ್ಚಾಗಬಹುದು. ಈಗ ನೀವು ನಿಮ್ಮ ಪ್ರೊಫೈಲ್‌ನಲ್ಲಿ ಕೆಲವು ಆಯ್ದ ಬದಲಾವಣೆಗಳನ್ನು ಮಾತ್ರವೇ ಮಾಡಬಹುದು.


ಇದನ್ನೂ ಓದಿ - EPFO ಖಾತೆಗೆ ಸಂಬಂಧಿಸಿದಂತೆ ಪ್ರಮುಖ ಸುದ್ದಿ, ನೀವೂ ಸಹ ಈ ತಪ್ಪು ಮಾಡಿದ್ದರೆ ಇಂದೇ ಸರಿಪಡಿಸಿ


ಈ ಬದಲಾವಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ :
ನಮ್ಮ ಪಾಲುದಾರ ವೆಬ್‌ಸೈಟ್ ಜೀ ನ್ಯೂಸ್ ಪ್ರಕಾರ, ನಿಮ್ಮ ಪಿಎಫ್ (PF) ಖಾತೆಯ ಪ್ರೊಫೈಲ್‌ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಅನೇಕ ಬಾರಿ ಜನರು ತಮ್ಮ ಹೆಸರಿನಲ್ಲಿ ಏನಾದರು ತಪ್ಪಾಗಿ ಭರ್ತಿ ಮಾಡಿರಬಹುದು. ಈ ಕಾರಣದಿಂದಾಗಿ ಪಿಎಫ್ ಖಾತೆಯಲ್ಲಿ ಸಮಸ್ಯೆ ಎದುರಾಗುತ್ತದೆ. ಆದರೆ ಈಗ ಈ ಸಮಸ್ಯೆಯನ್ನು ಆನ್‌ಲೈನ್ ಪೋರ್ಟಲ್ ಮೂಲಕ ಪರಿಹರಿಸಲಾಗುವುದಿಲ್ಲ. 


ಹೌದು, ಇದಕ್ಕಾಗಿ ನೀವು ಅಗತ್ಯ ದಾಖಲೆಗಳೊಂದಿಗೆ ಇಪಿಎಫ್‌ಒ ಕಚೇರಿಗೆ ಹೋಗಬೇಕಾಗುತ್ತದೆ. ಇದಲ್ಲದೆ, ನಿಮ್ಮ ಪ್ರೊಫೈಲ್‌ನಲ್ಲಿ ನಿಮ್ಮ ಹುಟ್ಟಿದ ದಿನಾಂಕ, ತಂದೆಯ ಹೆಸರು, ನಾಮಿನಿಯ ಹೆಸರು ಮತ್ತು ನಿಮ್ಮ ಉದ್ಯೋಗದಾತರ ಹೆಸರನ್ನು (Employer's name) ಬದಲಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಬದಲಾವಣೆಗಳಿಗಾಗಿ, ನೀವು ಕೆಲವು ಪ್ರಮುಖ ದಾಖಲೆಗಳೊಂದಿಗೆ ಇಪಿಎಫ್‌ಒ ಕಚೇರಿಗೆ ಹೋಗಬೇಕಾಗುತ್ತದೆ.


ಇದನ್ನೂ ಓದಿ - ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಏಪ್ರಿಲ್ 1 ರಿಂದ DA, HRA ಬದಲಾವಣೆ..!


ಆದರೆ ಈ ಬದಲಾವಣೆಗಳು ಇನ್ನೂ ಸಾಧ್ಯ (But these changes are still possible) :
ಇಪಿಎಫ್‌ಒನ (EPFO) ಹೊಸ ಮಾರ್ಗಸೂಚಿಗಳ ಪ್ರಕಾರ, ಈಗ ನೀವು ನಿಮ್ಮ ಹೆಸರಿನ ಉಪನಾಮವನ್ನು ಬದಲಾಯಿಸಬಹುದು. ಇಪಿಎಫ್‌ಒ ಸಹ ಈ ಸೌಲಭ್ಯವನ್ನು ಒದಗಿಸುತ್ತದೆ. ಏಕೆಂದರೆ ಅನೇಕ ಮಹಿಳೆಯರು ಮದುವೆಯ ನಂತರ ತಮ್ಮ ಉಪನಾಮವನ್ನು ಬದಲಾಯಿಸುತ್ತಾರೆ. ಆದಾಗ್ಯೂ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೀವು ಈಗಾಗಲೇ ಹೆಸರನ್ನು ನವೀಕರಿಸಿದ್ದರೆ ಮಾತ್ರ ಈ ಬದಲಾವಣೆ ಸಾಧ್ಯ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.