PF Withdrawal: ನೀವು ಇಪಿ‌ಎಫ್‌ಓ ಸದಸ್ಯರಾಗಿದ್ದು ನಿಮ್ಮ ಪಿ‌ಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಯೋಚಿಸುತ್ತಿದ್ದೀರಾ? ಇದಕ್ಕಾಗಿ ಪಿ‌ಎಫ್ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಬದಲಿಗೆ ಸರ್ಕಾರದ 
ಉಮಾಂಗ್ ಅಪ್ಲಿಕೇಶನ್ ಮೂಲಕವೇ ನಿಮ್ಮ ಪಿ‌ಎಫ್ ವಿತ್ ಡ್ರಾ ಮಾಡಬಹುದು. 


COMMERCIAL BREAK
SCROLL TO CONTINUE READING

ಹೌದು, ಕೇಂದ್ರ ಸರ್ಕಾರವು ಪಿ‌ಎಫ್ ಖಾತೆದಾರರ ಅನುಕೂಲತೆಗಾಗಿ ಬಳಕೆದಾರ ಸ್ನೇಹಿ ಉಮಾಂಗ್ ಅಪ್ಲಿಕೇಶನ್ ಅನ್ನು ಜಾರಿಗೆ ತಂದಿದೆ. ಇದರ ಸದುಪಯೋಗ ಪಡೆಯುವ ಮೂಲಕ ಇಪಿ‌ಎಫ್‌ಓ ಖಾತೆದಾರರು ಪಿ‌ಎಫ್ ವಿತ್ ಡ್ರಾ, ಪಿ‌ಎಫ್ ಅಡ್ವಾನ್ಸ್, ಪಿಂಚಣಿ ಹಕ್ಕುಗಳನ್ನು ಆನ್‌ಲೈನ್‌ನಲ್ಲಿಯೇ ನಿರ್ವಹಿಸಬಹುದು. 


ಇದನ್ನೂ ಓದಿ- ಪಿಎಂ ಕಿಸಾನ್ ಮುಂದಿನ ಕಂತು ಖಾತೆ ಸೇರಲು ರೈತರು ಈ ಕೆಲಸ ಮಾಡಲೇಬೇಕು!


ಇಪಿ‌ಎಫ್‌ಓ ಸದಸ್ಯರು ತಮ್ಮ ಮೊಬೈಲ್ ನಲ್ಲಿ ಉಮಾಂಗ್ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡುವ ಮೂಲಕ ಪಿ‌ಎಫ್ ಸಂಬಂಧಿತ ಹಲವು ಕೆಲಸಗಳನ್ನು ಕುಳಿತಲ್ಲಿಯೇ ಪೂರ್ಣಗೊಳಿಸಬಹುದು. 


ಇದನ್ನೂ ಓದಿ- ಗೃಹಲಕ್ಷ್ಮಿ ಹಣಕ್ಕೆ ಕಾಯುತ್ತಿರುವ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ; 2 ದಿನದ ಅಂತರದಲ್ಲಿ ನಾಲ್ಕು ಸಾವಿರ ರೂ. ಹಣ ಜಮಾ!


ಉಮಾಂಗ್ ಅಪ್ಲಿಕೇಶನ್‌ನಲ್ಲಿ ಪಿ‌ಎಫ್ ವಿತ್ ಡ್ರಾ ಮಾಡುವ ಹಂತ-ಹಂತದ ಪ್ರಕ್ರಿಯೆ: 
>> Google Play Store ಅಥವಾ Apple App Store ನಿಂದ Umang ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
>> ಅಪ್ಲಿಕೇಶನ್ ತೆರೆದು, ನಿಮ್ಮ ಆಧಾರ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಸೈನ್ ಇನ್ ಮಾಡಿ.
>> ಲಾಗಿನ್ ಆದ ನಂತರ, ಪಟ್ಟಿಯಿಂದ "EPFO" ಸೇವೆಯನ್ನು ಆಯ್ಕೆಮಾಡಿ.
>> "ರೈಸ್ ಕ್ಲೈಮ್" ಆಯ್ಕೆಯನ್ನು ಆರಿಸಿ.
>> ನಿಮ್ಮ UAN ಸಂಖ್ಯೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಅನ್ನು ನಮೂದಿಸಿ.
>> ನೀವು ಮಾಡಲು ಬಯಸುವ ವಾಪಸಾತಿ ಪ್ರಕಾರವನ್ನು ಆರಿಸಿ.
>> ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ವಿನಂತಿಯನ್ನು ಸಲ್ಲಿಸಿ.
>> ನಿಮ್ಮ ವಿನಂತಿಗಾಗಿ ನೀವು ಸ್ವೀಕೃತಿ ಸಂಖ್ಯೆಯನ್ನು ಸ್ವೀಕರಿಸುತ್ತೀರಿ.
>> ಈ ಸಂಖ್ಯೆ ಸಹಾಯದಿಂದ ನಿಮ್ಮ ಕ್ಲೈಮ್ ಸ್ಟೇಟಸ್ ಅನ್ನು ಪರಿಶೀಲಿಸಬಹುದು. 


ಈ ರೀತಿ ಸುಲಭವಾಗಿ ನಿಮ್ಮ ಪಿ‌ಎಫ್ ಹಣವನ್ನು ಕುಳಿತಿರುವಲ್ಲಿಯೇ ಹಿಂಪಡೆಯಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.