ಬೆಂಗಳೂರು : ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮತ್ತು ದೇಶ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮತ್ತವರ ಕುಟುಂಬ ಸದಾ ಸುದ್ದಿಯಲ್ಲಿರುತ್ತದೆ. ಅವರು ಏನೂ ಮಾಡಿದರೂ ಸುದ್ದಿಯಾಗುತ್ತದೆ.ಇತ್ತೀಚಿಗಷ್ಟೇ ಪುತ್ರನ ಮದುವೆಯ ಕಾರಣದಿಂದ ಸುದ್ದಿಯಾಗಿದ್ದ ಕುಟುಂಬ ಈಗ ಅವರು ಬಳಸುವ ಫೋನ್ ವಿಚಾರವಾಗಿ ಚರ್ಚೆಯಲ್ಲಿದ್ದಾರೆ.ಅಂದ ಹಾಗೆ ಅಂಬಾನಿ ಮನೆ, ಅವರ ಕಾರುಗಳು, ಅವರ ಮನೆಯ ನೌಕರರು ಹೀಗೆ ಪ್ರತಿ ವಿಚಾರವನ್ನು ತಿಳಿದುಕೊಳ್ಳುವಲ್ಲಿ  ಜನರು ಹೆಚ್ಚಿನ ಆಸಕ್ತಿ ತೋರುತ್ತಾರೆ. ಇದೀಗ ಅಂಬಾನಿ ದಂಪತಿ ಬಳಸುವ ಫೋನ್ ಯಾವುದು ಎನ್ನುವ ಕುತೂಹಲ ಜನರದ್ದು. 


COMMERCIAL BREAK
SCROLL TO CONTINUE READING

ಮುಖೇಶ್ ಅಂಬಾನಿ ಕೈಯಲ್ಲಿ  ಈ ಫೋನ್  :
ಮುಖೇಶ್ ಅಂಬಾನಿ ಅವರು ತಮ್ಮ ಪತ್ನಿ ನೀತಾ ಅಂಬಾನಿಯೊಂದಿಗೆ ಭವ್ಯವಾದ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.ಇಲ್ಲಿ ಜನರ ಜನರ ಕಣ್ಣಿಗೆ ಬಿದ್ದದ್ದು ಮುಖೇಶ್ ಅಂಬಾನಿ ಕೈಯಲ್ಲಿ ಹಿಡಿದಿದ್ದ ಫೋನ್.  ಹಾಗಿದ್ದರೆ ಮುಖೇಶ್ ಅಂಬಾನಿ ಕೈಯ್ಯಲ್ಲಿ ಇದ್ದ ಫೋನ್ ಯಾವುದು ಎನ್ನುವುದು ಪ್ರಶ್ನೆ. 


ಇದನ್ನೂ ಓದಿ : ನಿವೃತ್ತಿ ಘೋಷಿಸಲು ಮುಂದಾದ ಗೌತಮ್ ಅದಾನಿ !ಕೋಟಿಗಳ ಸಾಮ್ರಾಜ್ಯದ ಸಾರಥ್ಯ ಯಾರ ಹೆಗಲಿಗೆ ? ರೇಸ್ ನಲ್ಲಿದೆ ನಾಲ್ಕು ಹೆಸರು !


ಮುಖೇಶ್ ಅಂಬಾನಿ ಕೈಯಲ್ಲಿ ಆಪಲ್‌ನ ಇತ್ತೀಚಿನ ಐಫೋನ್ ಕಾಣಿಸಿಕೊಂಡಿದೆ. ಇದು ಸಾಮಾನ್ಯ ಫೋನ್ ಅಲ್ಲ, ಹೊಸ ಮತ್ತು ಅತ್ಯಂತ ದುಬಾರಿ iPhone 15 Pro Max. ಇದು ಐಫೋನ್ 15 ಸರಣಿಯ ಅತ್ಯಂತ ದುಬಾರಿ ಮಾದರಿಯಾಗಿದೆ.ಈ ಫೋನ್ ನ 256 GB ಮಾದರಿಯ ಬೆಲೆ 1 ಲಕ್ಷದ 50 ಸಾವಿರ ಮತ್ತು 1 TB ಸ್ಟೋರೇಜ್ ರೂಪಾಂತರದ ಬೆಲೆ ಸುಮಾರು 2 ಲಕ್ಷ ರೂ. 


ನೀತಾ ಅಂಬಾನಿ ಬಳಿ ಯಾವ ಫೋನ್ ಇದೆ? :
ಇಂಟರೆಸ್ಟಿಂಗ್ ವಿಷಯ ಏನೆಂದರೆ ಮುಕೇಶ್ ಅಂಬಾನಿ ಮಾತ್ರವಲ್ಲ ಅವರ ಪತ್ನಿ ನೀತಾ ಅಂಬಾನಿ ಬಳಿ ಕೂಡಾ ಇದೇ ಫೋನ್ ಇದೆ.ದೇಶದ ಇತರ ಅನೇಕ ಪ್ರಸಿದ್ಧ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ಸಹ ಈ ಫೋನ್ ಅನ್ನು ಬಳಸುತ್ತಾರೆ.ಐಫೋನ್ 15 ಪ್ರೊ ಮ್ಯಾಕ್ಸ್ ಫೋನ್ ಉತ್ತಮ ಕ್ಯಾಮೆರಾಗಳನ್ನು ಹೊಂದಿದೆ.ಇದಲ್ಲದೆ, ವಿನ್ಯಾಸದಿಂದ ವೈಶಿಷ್ಟ್ಯಗಳವರೆಗೆ,ಈ ಫೋನ್‌ನಲ್ಲಿ ಎಲ್ಲವೂ ಅತ್ಯಬ್ಧುತವಾಗಿದೆ. ಇದರ ಲುಕ್ ಕೂಡಾ ಸಾಕಷ್ಟು ಪ್ರೀಮಿಯಂ ಆಗಿದ್ದು, ಕಾರ್ಯಕ್ಷಮತೆ ಕೂಡ ಅದ್ಭುತವಾಗಿದೆ. ಪ್ರತಿಯೊಂದು ವಿಷಯದಲ್ಲೂ ಈ ಫೋನ್ ಇತರ ಫೋನ್‌ಗಳಿಗಿಂತ ಅಡ್ವಾನ್ಸ್ ಆಗಿದೆ. 


ಇದನ್ನೂ ಓದಿ : ಬಂಗಾರ ಖರೀದಿಸಲು ಬಯಸುವವರಿಗೆ ಇದು ಬೆಸ್ಟ್‌ ಟೈಮ್‌..ಮೊದಲ ಶ್ರಾವಣ ಸೋಮವಾರದಂದು ಚಿನ್ನದ ಬೆಲೆ ಇಷ್ಟೆ ನೋಡಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ