ಹಣ ಹೂಡಿಕೆ ಮಾಡಬೇಕೆ? ಈ ಸಲಹೆಗಳನ್ನು ಅನುಸರಿಸಿ ಸಂಭಾವ್ಯ ಹಾನಿಯಿಂದ ಪಾರಾಗಿ!
Investment: ನಿಮ್ಮ ಗಳಿಕೆಯಲ್ಲಿ ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದು ಒಂದು ಉತ್ತಮ ಅಭ್ಯಾಸವಾಗಿದೆ. ಆದರೆ ನಿಮ್ಮ ಈ ಹೂಡಿಕೆಯು ನಿಯಮಿತವಾಗಿರಬೇಕು, ಆಗ ಮಾತ್ರ ಹೂಡಿಕೆಯ ಮೂಲಕ ಉತ್ತಮ ಲಾಭವನ್ನು ಗಳಿಸಬಹುದು. ನಿಯಮಿತ ಹೂಡಿಕೆಗಾಗಿ, ನೀವು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಚೆನ್ನಾಗಿ ಅಧ್ಯಯನ ನಡೆಸಿ.
Business News In Kannada: ಯಾವುದೇ ಕಡೆ ಹಣ ಹೂಡಿಕೆ ಮಾಡುವ ಮೊದಲು ನೀವು ಹೂಡಿಕೆಗೆ ಸಂಬಂಧಿಸಿದ ಕೆಲ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಈ ಅಭ್ಯಾಸಗಳಲ್ಲಿನ ಮೂರು ಪ್ರಮುಖ ಅಭ್ಯಾಸಗಳ ಕುರಿತು ನಾವು ಇಂದು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ತನ್ಮೂಲಕ ನೀವು ಅಧಿಕ ಲಾಭವನ್ನು ಪಡೆಯಬಹುದು.
1. ಹೂಡಿಕೆ ಮಾಡುವುದು ಒಳ್ಳೆಯ ಅಭ್ಯಾಸ. ಇದರಿಂದ ನೀವು ನಿಮ್ಮ ಉಳಿತಾಯದ ಮೇಲೆ ಉತ್ತಮ ಆದಾಯವನ್ನು ಗಳಿಕೆ ಮಾಡಬಹುದು. ಆದರೂ ಕೂಡ ಹೂಡಿಕೆ ಮಾಡುವ ಮುನ್ನ ಕೆಲವು ಅಭ್ಯಾಸಗಳನ್ನು ಹೊಂದಿರುವುದು ತುಂಬಾ ಮುಖ್ಯ. ಹೂಡಿಕೆ ಮಾಡುವಾಗ ಮೂರು ಹೂಡಿಕೆ ಅಭ್ಯಾಸಗಳನ್ನು ಅನುಸರಿಸಿದರೆ, ಕಾಲಕ್ರಮೇಣ ಉತ್ತಮ ಆದಾಯವನ್ನು ನೀವು ಪಡೆಯಬಹುದು.
2. ಹೂಡಿಕೆ ಮಾಡಲು, ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಇಂದು ಹೂಡಿಕೆಯ ಮುಖ್ಯ ಮೂರು ಅಭ್ಯಾಸಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ತನ್ಮೂಲಕ ನೀವು ಉತ್ತಮ ಆದಾಯವನ್ನು ಸಂಪಾದಿಸಬಹುದು.
3. ನಿಯಮಿತ ಹೂಡಿಕೆ- ನಿಮ್ಮ ಗಳಿಕೆಯಲ್ಲಿ ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದು ಒಂದು ಉತ್ತಮ ಅಭ್ಯಾಸವಾಗಿದೆ. ಆದರೆ ನಿಮ್ಮ ಈ ಹೂಡಿಕೆಯು ನಿಯಮಿತವಾಗಿರಬೇಕು, ಆಗ ಮಾತ್ರ ಹೂಡಿಕೆಯ ಮೂಲಕ ಉತ್ತಮ ಲಾಭವನ್ನು ಗಳಿಸಬಹುದು. ನಿಯಮಿತ ಹೂಡಿಕೆಗಾಗಿ, ನೀವು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಚೆನ್ನಾಗಿ ಅಧ್ಯಯನ ನಡೆಸಿ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ಗಡುವು ಮೀರುವ ಮುನ್ನ ಹೂಡಿಕೆ ಮಾಡಿ. ಹೂಡಿಕೆಗಾಗಿ ಸ್ವಯಂಚಾಲಿತವಾಗಿ ವರ್ಗಾಯಿಸಲು ನಿಮ್ಮ ಖಾತೆಯಿಂದ ಪೂರ್ವ-ನಿರ್ಧರಿತ ಮೊತ್ತವನ್ನು ಹೊಂದಿಸಿ. ಈ ರೀತಿ ನೀವು ನಿಯಮಿತ ಹೂಡಿಕೆಯನ್ನು ಮಾಡಬಹುದು.
ಇದನ್ನೂ ಓದಿ-ಹಣ ಹೂಡಿಕೆ ಮಾಡಬೇಕೆ? ಈ ಸಲಹೆಗಳನ್ನು ಅನುಸರಿಸಿ ಸಂಭಾವ್ಯ ಹಾನಿಯಿಂದ ಪಾರಾಗಿ!
4. ಹೂಡಿಕೆಯನ್ನು ವೈವಿಧ್ಯಗೊಳಿಸಿ- ಯಾವಾಗಲೂ ಹೂಡಿಕೆಗಾಗಿ ಪೋರ್ಟ್ಫೋಲಿಯೊ ಸಿದ್ಧಪಡಿಸಿ. ನಿಮ್ಮ ಪೋರ್ಟ್‌ಫೋಲಿಯೊವನ್ನು ನೀವು ಸಮರ್ಪಕವಾಗಿ ವೈವಿಧ್ಯಗೊಳಿಸಬೇಕು. ಹೂಡಿಕೆಯು ನಿಮ್ಮ ಹಣಕಾಸಿನ ಗುರಿಗಳಿಗೆ ಅನುಗುಣವಾಗಿರಬೇಕು. ದೀರ್ಘಾವಧಿಯ ಗುರಿಗಳಿಗಾಗಿ, ನೀವು ಈಕ್ವಿಟಿ ಫಂಡ್ ಗಳಲ್ಲಿ ಹೆಚ್ಚು ಹೂಡಿಕೆ ಮಾಡಬಹುದು. ಅಲ್ಪಾವಧಿಯ ಗುರಿಗಳಿಗಾಗಿ, ನಿಮ್ಮ ಬಂಡವಾಳವನ್ನು ಸುರಕ್ಷಿತಗೊಳಿಸುವ ಸ್ಥಿರ ಆದಾಯದ ಸ್ವತ್ತುಗಳಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಪ್ರೊಫೈಲ್‌ಗೆ ಸೂಕ್ತವಾದ ಪೋರ್ಟ್‌ಫೋಲಿಯೊವನ್ನು ರಚಿಸಲು ವೃತ್ತಿಪರರ ಸಹಾಯವನ್ನು ಸಹ ನೀವು ಪಡೆದುಕೊಳ್ಳಬಹುದು.
ಇದನ್ನೂ ಓದಿ-ರೇಲ್ವೆ ಯಾತ್ರಿಗಳಿಗೆ ಒಂದು ಭಾರಿ ಸಂತಸದ ಸುದ್ದಿ, ಊಟಕ್ಕೆ ಇನ್ಮುಂದೆ ಇಷ್ಟೇ ಹಣ ಪಾವತಿಸಿದರೆ ಸಾಕು!
5. ಭಾವನೆಗಳ ಮೇಲೆ ಹಿಡಿತವಿರಲಿ- ಮನುಷ್ಯ ಭಾವನಾತ್ಮಕ ಜೀವಿ ಮತ್ತು ಭಾವನೆಗಳ ಕಾರಣದಿಂದ ಆತ ಅನೇಕ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೇ. ಆದರೂ ಕೂಡ ಭಾವನೆಗಳು ನಮ್ಮನ್ನು ದೊಡ್ಡ ಹೂಡಿಕೆದಾರರನ್ನಾಗಿ ಸಿದ್ಧಪದಿಸುವುದಿಲ್ಲ. ಮಾರುಕಟ್ಟೆಯ ಏರಿಳಿತಗಳು ಭಯ ಮತ್ತು ದುರಾಶೆಯನ್ನು ಉಂಟುಮಾಡಬಹುದು, ಇಂತಹ ಪರಿಸ್ಥಿತಿಯಲ್ಲಿ ಜನರು ಮಾರುಕಟ್ಟೆಯ ಏರಿಳಿತವನ್ನು ನೋಡಿದ ನಂತರವೂ ಭಾವನೆಗಳಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ನಷ್ಟವನ್ನೂ ಅನುಭವಿಸುತ್ತಾರೆ. ಹೀಗಿರುವಾಗ ನೀವು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ‘ಕಡಿಮೆ ಖರೀದಿಸಿ, ಹೆಚ್ಚು ಮಾರಾಟ ಮಾಡಿ’ ಎಂಬ ತತ್ವದಡಿ ಕೆಲಸ ಮಾಡಬೇಕು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.