Affordable Electric Cars: ವಿಶ್ವಾದ್ಯಂತ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ, ಭಾರತದಲ್ಲಿಯೂ ಎಲೆಕ್ಟ್ರಿಕ್ ಕಾರುಗಳು ಸಾಕಷ್ಟು ಜನಪ್ರೇಯತೆಯನ್ನು ಪಡೆದುಕೊಳ್ಳುತ್ತಿವೆ. ಆದಾಗ್ಯೂ, ಭಾರತದಲ್ಲಿ ಇವಿ ಉದ್ಯಮವು ಇನ್ನೂ ಆರಂಭಿಕ ಹಂತದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬೆಲೆಯೂ ಹೆಚ್ಚಾಗಿದೆ. ಆದರೆ ಭಾರತದಲ್ಲಿ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರುಗಳಿಲ್ಲ ಎಂಬುದು ಇದರ ಅರ್ಥವಲ್ಲ. ದೇಶದಲ್ಲಿ ಮಾರಾಟವಾಗುವ ಅಗ್ಗದ 5 ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಮಹೀಂದ್ರ XUV400
ಮಹೀಂದ್ರ XUV400 ಬೆಲೆ 15.99 ಲಕ್ಷದಿಂದ 18.99 ರೂ.ಗಳವರೆಗೆ ಇದೆ. ಇದು 456 ಕಿಮೀ ರೇಂಜ್ ನೀಡುತ್ತದೆ. ಇದು ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯೊಂದಿಗೆ ಬರುತ್ತದೆ - 34.5kWh ಮತ್ತು 39.4kWh. ಚಿಕ್ಕ ಬ್ಯಾಟರಿ ಪ್ಯಾಕ್ 375 ಕಿಮೀ ರೆಂಜ್ ಹೊಂದಿದ್ದರೆ, ದೊಡ್ಡ ಬ್ಯಾಟರಿ ಪ್ಯಾಕ್ 456 ಕಿಮೀ ರೆಂಜ್ ನೀಡುತ್ತದೆ.

ಟಾಟಾ ನೆಕ್ಸಾನ್ ಇವಿ
ಟಾಟಾ ನೆಕ್ಸಾನ್ ಇವಿ ಬೆಲೆ 14.49 ಲಕ್ಷದಿಂದ 19.54 ಲಕ್ಷ ರೂ.ಗಳವರೆಗೆ ಇದೆ. ಇದು ನೆಕ್ಸಾನ್ ಇವಿ ಪ್ರೈಮ್ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ಎಂಬ ಎರಡು ಆವೃತ್ತಿಗಳಲ್ಲಿ ಬರುತ್ತದೆ. ನೆಕ್ಸಾನ್ ಇವಿ ಮ್ಯಾಕ್ಸ್ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ ಮತ್ತು ಪೂರ್ಣ ಚಾರ್ಜ್‌ನಲ್ಲಿ 453 ಕಿಮೀ ಪ್ರಮಾಣೀಕೃತ ರೆಂಜ್ ನೀಡುತ್ತದೆ. ಇದು 40.5 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ.


ಟಾಟಾ ಟಿಗೋರ್ ಇವಿ
ಟಾಟಾ ಟಿಗೋರ್ ಇವಿ ಬೆಲೆ 12.49 ಲಕ್ಷದಿಂದ 13.75  ರೂ.ಗಳವರೆಗೆ ಇದೆ. ಇದು 315 ಕಿಮೀ ರೆಂಜ್ ನೀಡುತ್ತದೆ. ಇದು ನೆಕ್ಸಾನ್ ಎಲೆಕ್ಟ್ರಿಕ್‌ನಿಂದ ಜಿಪ್ಟ್ರಾನ್ ಇವಿ ತಂತ್ರಜ್ಞಾನವನ್ನು ಪಡೆಯುತ್ತದೆ. Tigor 26kWh ಬ್ಯಾಟರಿ ಪ್ಯಾಕ್ ಹೊಂದಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 75PS ಪವರ್ ಮತ್ತು 170Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.


ಇದನ್ನೂ ಓದಿ-Akshaya Tritiya 2023: ಅಕ್ಷಯ ತೃತೀಯಾ ದಿನ ಖರೀದಿಸಿದ ಚಿನ್ನದಿಂದ ನೀವು ಹೇಗೆ ಲಾಭ ಪಡೆಯಬಹುದು ಗೊತ್ತಾ?


ಸಿಟ್ರೊಯೆನ್ ಇಸಿ3
ಸಿಟ್ರೊಯೆನ್ ಇಸಿ3 ಬೆಲೆ ರೂ 11.50 ಲಕ್ಷದಿಂದ ರೂ 12.76 ಲಕ್ಷ ರೂ.ಗಳವರೆಗೆ ಇದೆ. ಇದು 320 ಕಿಮೀ ರೆಂಜ್ ನೀಡುತ್ತದೆ. ಇದು 29.2kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದರ ಮೋಟಾರ್ 57PS ಪವರ್ ಮತ್ತು 143Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.


ಇದನ್ನೂ ಓದಿ-Bank Update: ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅವಶ್ಯಕತೆ ಇಲ್ಲ!


ಟಾಟಾ ಟಿಯಾಗೊ ಇವಿ
ಟಾಟಾ ಟಿಯಾಗೊ ಇವಿ ಬೆಲೆ 8.69 ಲಕ್ಷದಿಂದ 11.99 ಲಕ್ಷ ರೂ.ಗಳವರೆಗೆ ಇದೆ. ಇದು 310 ಕಿಮೀ ವರೆಗೆ ರೆಂಜ್ ನೀಡುತ್ತದೆ. ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ - 19.2 kWh ಮತ್ತು 24 kWh. 19.2 kWh ಬ್ಯಾಟರಿ ಪ್ಯಾಕ್ 250 ಕಿಮೀ ರೆಂಜ್ ನೀಡಿದರೆ, 24 kWh ಬ್ಯಾಟರಿ ಪ್ಯಾಕ್ 315 ಕಿಮೀ ರೆಂಜ್ ನೀಡುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.