PM Awas Yojana 2021 Update: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಿಗಲಿದೆ ಮತ್ತೊಂದು ದೊಡ್ಡ ಸೌಕರ್ಯ, ಫಟಾ-ಫಟ್ ಲಾಭ ಪಡೆದುಕೊಳ್ಳಿ
PM Awas Yojana 2021: ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪುನರಾರಂಭಿಸಬೇಕು ಮತ್ತು ಅದರಲ್ಲಿ ಜೀವ ವಿಮೆಯ ಸೌಲಭ್ಯವನ್ನು ಕಡ್ಡಾಯಗೊಳಿಸಬೇಕು ಎಂದು CII ಸರ್ಕಾರವನ್ನು ಒತ್ತಾಯಿಸಿದೆ.
PM Awas Yojana 2021 Update - ಪ್ರಧಾನಮಂತ್ರಿ ಆವಾಸ್ ಯೋಜನೆ 2021 ರ ಕುರಿತು ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ಕೈಗಾರಿಕಾ ಸಂಸ್ಥೆ CII, ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು (Pradhan Mantri Awas Yojana Scheme) ಪುನರಾರಂಭಿಸಬೇಕು ಮತ್ತು ಅದರ ಅಡಿ ಜೀವ ವಿಮೆಯ ಸೌಲಭ್ಯವನ್ನು ಕಡ್ಡಾಯಗೊಳಿಸಬೇಕು ಎಂದು ಸರ್ಕಾರವನ್ನು ಕೋರಿದೆ. ಇದರೊಂದಿಗೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana) ಸಾಲದ ಫಲಾನುಭವಿಗಳಿಗೆ ಕಡ್ಡಾಯವಾಗಿ ವಿಮಾ ಸೌಲಭ್ಯವನ್ನು ಒದಗಿಸಬೇಕೆಂಬ ಬೇಡಿಕೆಯನ್ನು ಮಾಡಲಾಗಿದೆ.
ಎಲ್ಲರಿಗೂ ಸೂರು ಕಲ್ಪಿಸುವ ಯೋಜನೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana Benefits) ಅಡಿಯಲ್ಲಿ ದೇಶದ ಎಲ್ಲ ಜನರಿಗೆ ಮನೆಗಳನ್ನು ನೀಡಲು ಸರ್ಕಾರ ಯೋಜಿಸಿದೆ. ಇದರ ಅಡಿಯಲ್ಲಿ, ಸಾಲಗಾರ ಸತ್ತರೆ ಅಥವಾ ಅಂಗವಿಕಲರಾದರೆ, ಆತನ ಮನೆಯ ಕನಸನ್ನು ನನಸಾಗಿಸಲು ಸಾಲದ ಜೊತೆಗೆ ಜೀವವಿಮೆಯ ಪ್ರಯೋಜನವನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಸರ್ಕಾರದ ಮಹತ್ವಾಕಾಂಕ್ಷಿಯೋಜನೆಗಳಲ್ಲಿ ಒಂದು (PM Awas Yojana Eligibility)
ಕೇಂದ್ರ ಸರ್ಕಾರದ ಹಲವು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಕೂಡ ಒಂದು. ಇದರ ಅಡಿಯಲ್ಲಿ, ಕೇಂದ್ರ ಸರ್ಕಾರವು 2022 ರ ವೇಳೆಗೆ ಅಂದರೆ ದೇಶದ ಸ್ವಾತಂತ್ರ್ಯದ 75 ವರ್ಷಗಳ ಪೂರ್ಣಗೊಳ್ಳುವವರೆಗೂ ಎಲ್ಲರಿಗೂ ವಸತಿ ಒದಗಿಸುವ ಗುರಿಯನ್ನು ಹೊಂದಿದೆ. ಈ ಗುರಿಯನ್ನು ಈಡೇರಿಸಲು, ಸಿಐಐ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಜೀವ ವಿಮೆಯ ರಕ್ಷಣೆಯನ್ನು ಒದಗಿಸಬೇಕು ಎಂದು ಸರ್ಕಾರವನ್ನು ಕೇಳಿಕೊಂಡಿದೆ.
CII ಬೇಡಿಕೆ ಏನು? (PM Awas Yojana Process)
CII ಮಾಡಿರುವ ಬೇಡಿಕೆಯನ್ನು ಸರ್ಕಾರ ಒಂದು ವೇಳೆ ಒಪ್ಪಿಕೊಂಡರೆ, PM ಅವಾಸ್ ಯೋಜನೆಯನ್ನು ಲೈಫ್ ಇನ್ಸೂರೆನ್ಸ್ ಸೇರಿದಂತೆ ಮತ್ತೊಮ್ಮೆ ಬಿಡುಗಡೆಯಾಗಲಿದೆ. ಸರ್ಕಾರದ ಈ ಒಪ್ಪಿಗೆಯಿಂದ ಫಲಾನುಭವಿಗಳಿವೆ ಭಾರಿ ಲಾಭ ಉಂಟಾಗಲಿದೆ. ಪ್ರಸ್ತುತ ಈ ಯೋಜನೆಯಲ್ಲಿ ಸಾಲ ಪಡೆಯುವ ವ್ಯಕ್ತಿಗೆ ಯಾವುದೇ ರೀತಿಯ ರಕ್ಷಣೆಯ ಸೌಲಭ್ಯವಿಲ್ಲ. ಸಾಲದೊಂದಿಗೆ ಅಂತರ್ನಿರ್ಮಿತ ವಿಮಾ ಯೋಜನೆಗೆ ಯಾವುದೇ ಅವಕಾಶವಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸಾಲದೊಂದಿಗೆ ನೀವು ವಿಮೆಯ ಲಾಭವನ್ನು ಪಡೆದರೆ, ಪ್ರತಿಕೂಲ ಸಂದರ್ಭಗಳಲ್ಲಿ ಮನೆಯ ವೆಚ್ಚವೂ ಮುಂದುವರಿಯುತ್ತದೆ ಮತ್ತು ಮನೆ ನಿರ್ಮಾಣದ ಕೆಲಸ ನಿಲ್ಲುವುದಿಲ್ಲ ಎಂದು ಸಿಐಐ ಹೇಳಿದೆ.
ಇದನ್ನೂ ಓದಿ-Government Scheme:ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ನಿತ್ಯ ಕೇವಲ 1 ರೂ. ವಿನಿಯೋಗಿಸಿ 15 ಲಕ್ಷ ಪಡೆಯಿರಿ
ಜೀವ ವಿಮೆ ಒದಗಿಸುವುದರಿಂದಾಗುವ ಲಾಭ
ಈ ಕುರಿತು ಹೇಳಿಕೆ ನೀಡಿರುವ CII ಡೈರೆಕ್ಟರ್ ಜನರಲ್ ಚಂದ್ರಜೀತ್ ಬ್ಯಾನರ್ಜಿ, "ಪಿಎಂಎವೈ ಯೋಜನೆಯನ್ನು ಮರುಪ್ರಾರಂಭಿಸುವ ಅವಶ್ಯಕತೆಯಿದೆ, ಇದರೊಂದಿಗೆ ಕ್ರೆಡಿಟ್ ಲಿಂಕ್ಡ್ ವಿಮೆ ಅಥವಾ ಮೂಲಭೂತವಾಗಿ ಜೀವ ವಿಮೆಯನ್ನು ಪ್ರತಿ ಸಾಲಗಾರರಿಗೂ ವಿಸ್ತರಿಸಬಹುದು. ಇದು 'ಎಲ್ಲರಿಗೂ ಮನೆ' ಗುರಿಗೆ ಯಾವುದೇ ತೊಡಕು ಉಂಟುಮಾಡುವುದಿಲ್ಲ. ಸಾಲಗಾರನ ಸಾವು ಅಥವಾ ಅಂಗವೈಕಲ್ಯದ ಮೇಲೆ ಮನೆಯ ನಿರ್ಮಾಣವು ಅವಲಂಭಿಸಿರುವುದಿಲ್ಲ. ಕುಟುಂಬಗಳು ಮನೆಗಳನ್ನು ಪಡೆಯಬೇಕು ಮತ್ತು ಸಾಲವನ್ನು ಪಡೆಯಬಾರದು ಎಂದು ಅಂತಹ ಕೆಲವು ವ್ಯವಸ್ಥೆ ಇರಬೇಕು. ಜೀವ ವಿಮೆ ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ದೇಶದಲ್ಲಿ ತ್ವರಿತ ಅಭಿವೃದ್ಧಿಗಾಗಿ, ಅಗ್ಗದ ಮನೆಗಳನ್ನು ಒದಗಿಸುವುದು ಮಹತ್ವದ ಅಗತ್ಯತೆ ಇದೆ. ಪ್ರಸ್ತುತ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ, ಸಾಲಗಾರನು ಮೃತಪಟ್ಟರೆ ಮನೆಯ ನಿರ್ಮಾಣವು ನಿಂತು ಹೋಗುತ್ತದೆ ಮತ್ತು ಇದರಿಂದ ಸಾಲದ ಮೇಲೆ ಪರಿಣಾಮ ಕೂಡ ವಿಭಿನ್ನವಾಗಿರಲಿದೆ ಮತ್ತು ಕುಟುಂಬಕ್ಕೂ ಸಹ ಇದರಿಂದ ತೊಂದರೆಯಾಗಲಿದೆ.
ಇದನ್ನೂ ಓದಿ-Government Scheme: ಕೇವಲ 7 ರೂ. ಉಳಿಸಿ ಮಾಸಿಕ 5,000 ರೂ. ಪಿಂಚಣಿ ಪಡೆಯಿರಿ
ಕೊರೊನಾ ಕಾಲದಲ್ಲಿ ವಿಮೆಯ ಹೆಚ್ಚು ಅವಶ್ಯಕತೆ
ಕರೋನಾ ಕಾಲ ಜನರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಎರಡನೇ ಅಲೆಯ ಸಂದರ್ಭದಲ್ಲಿ ಸಾವಿನ ದರದಲ್ಲಿ ತ್ವರಿತ ಏರಿಕೆಯನ್ನು ಗಮನಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಹಣಕಾಸಿನ ನೆರವು ಬಹಳ ಅಗತ್ಯವಾಗಿದೆ. PMAY ಯೋಜನೆಯೊಂದಿಗೆ ಜೀವ ವಿಮೆಯ ಲಾಭವನ್ನು ನೀಡುವ ಮೂಲಕ ಆರ್ಥಿಕವಾಗಿ ತೊಂದರೆಗೊಳಗಾದ ಜನರು ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು. ಯೋಜನೆಯಡಿಯಲ್ಲಿ, ಸರ್ಕಾರವು ಬಯಸಿದಲ್ಲಿ ಜೀವ ವಿಮೆಗೆ ಪ್ರಮಾಣಿತ ಪ್ರೀಮಿಯಂ ಅನ್ನು ನಿಗದಿಪಡಿಸಬಹುದು. ಈ ಮೂಲಕ, ವಿಮಾ ಕಂಪನಿಯು PM ಆವಾಸ್ ಯೋಜನೆಯ ಫಲಾನುಭವಿಗಳಿಗೆ ಕ್ರೆಡಿಟ್ ಕವರ್ ನೀಡಬಹುದು. ಸಾಲದ ಮೊತ್ತಕ್ಕೆ ಸಮನಾದ ಸಾಲವನ್ನು ತೆಗೆದುಕೊಳ್ಳುವ ಸಮಯದಲ್ಲಿ ವಿಮಾ ರಕ್ಷಣೆಯ ಪ್ರಯೋಜನವನ್ನು ನೀಡಬೇಕು ಎಂಬ ಸೌಲಭ್ಯವಿರಬೇಕು ಎನ್ನಲಾಗಿದೆ.
ಇದನ್ನೂ ಓದಿ-PMVVY:ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ ವಾರ್ಷಿಕ 1.11 ಲಕ್ಷ ರೂ.ಗಳ ಆದಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.