ನವದೆಹಲಿ : PM Awas Yojana 2021: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ನಗರ ಪ್ರದೇಶಗಳಲ್ಲಿ 3.61 ಲಕ್ಷ ಮನೆಗಳ ನಿರ್ಮಾಣದ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (Pm AwasYojana) ಕೇಂದ್ರ ಸರ್ಕಾರವು ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡುತ್ತದೆ. ಈ ಯೋಜನೆಯಲ್ಲಿ, ಸಾಲ ಮಾಡಿ ಮನೆ ಅಥವಾ ಫ್ಲಾಟ್ ಖರೀದಿಸುವ ಜನರಿಗೆ ಸಬ್ಸಿಡಿ ಸಿಗಲಿದೆ.  ಸರ್ಕಾರದ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿಯ 56 ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಸಭೆಯಲ್ಲಿ ನಿರ್ಧಾರ :
ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿಯ ಸಭೆಯಲ್ಲಿ, PMAY-U ನ ಅಫರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಪ್ (AHP), ಬೆನೆಫಿಶಿಯರಿ ಲೆಡ್ ಕನ್ಸ್ಟ್ರಕ್ಷನ್ (BLC), ಇನ್-ಸಿಟು ಸ್ಲಂ ರಿಡೆವಲಪ್‌ಮೆಂಟ್ (ISSR) ಅಡಿಯಲ್ಲಿ ಒಟ್ಟು 3.61 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು. 


ಇದನ್ನೂ ಓದಿ : Arecanut Price: ಕರ್ನಾಟಕದಲ್ಲಿ ಉತ್ತಮ ಸ್ಥಿತಿಯಲ್ಲಿರುವ ರಾಶಿ ಅಡಿಕೆ ಬೆಲೆ


PMAY ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
1. ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣದಲ್ಲಿ ಅರ್ಜಿ ಸಲ್ಲಿಸಲು, ನೀವು ನಿಮ್ಮ ಮೊಬೈಲ್‌ನಿಂದ ಸರ್ಕಾರಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಲಾಗಿನ್ ಐಡಿಯನ್ನು ರಚಿಸಬಹುದು.
2. ಈಗ ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ ಸಂಖ್ಯೆಗೆ OTP ಅನ್ನು ಕಳುಹಿಸುತ್ತದೆ.
3. ಇದರ ಸಹಾಯದಿಂದ ಲಾಗಿನ್ ಆದ ನಂತರ, ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ.
4. PMAY G ಅಡಿಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಸಿದ ನಂತರ, ಕೇಂದ್ರ ಸರ್ಕಾರವು ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ.
5. ಇದರ ನಂತರ ಫಲಾನುಭವಿಗಳ ಅಂತಿಮ ಪಟ್ಟಿಯನ್ನು PMAYG ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ.


ಯೋಜನೆಯ ಲಾಭ ಯಾರಿಗೆ ಸಿಗುತ್ತದೆ? :
ಈ ಹಿಂದೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ ಬಡ ವರ್ಗಕ್ಕೆ ಮಾತ್ರ ಲಭ್ಯವಿತ್ತು. ಆದರೆ, ಈಗ ಗೃಹ ಸಾಲದ ಮೊತ್ತವನ್ನು ಹೆಚ್ಚಿಸಿ ಅದರ ಲಾಭವನ್ನು ಮಧ್ಯಮ ವರ್ಗದವರಿಗೂ ನೀಡಲಾಗುತ್ತಿದೆ. ಈ ಹಿಂದೆ, PMAY ನಲ್ಲಿ ಗೃಹ ಸಾಲದ ಮೊತ್ತವು 3 ರಿಂದ 6 ಲಕ್ಷದವರೆಗೆ ಇದ್ದು, ಅದರ ಮೇಲೆ ಬಡ್ಡಿ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಈಗ ಅದನ್ನು 8 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.


ಇದನ್ನೂ ಓದಿ : Willful Defaluters: ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿಸದೆ ಹೋದರೆ ಎಚ್ಚರ! ಇಲ್ಲಿದೆ ಕೇಂದ್ರ ವಿತ್ತ ಸಚಿವೆ ನೀಡಿರುವ ಎಚ್ಚರಿಕೆ


ಈ ಯೋಜನೆಯ ವ್ಯಾಪ್ತಿ :  
EWS ಕುಟುಂಬದ ವಾರ್ಷಿಕ ಆದಾಯವನ್ನು ರೂ 3 ಲಕ್ಷಕ್ಕೆ ನಿಗದಿಪಡಿಸಲಾಗಿದೆ. LIG ಯ ವಾರ್ಷಿಕ ಆದಾಯವು 3 ಲಕ್ಷದಿಂದ 6 ಲಕ್ಷದ ನಡುವೆ ಇರಬೇಕು. ಈಗ ವಾರ್ಷಿಕ ಆದಾಯ (Annual income) ರೂ 12 ಮತ್ತು 18 ಲಕ್ಷದವರೆಗಿನ ಜನರು ಈ ಯೋಜನೆಯ ಲಾಭವನ್ನು ಪಡೆಯಬಹುದು. 


ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಿವಿಧ ಹಂತಗಳಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ.  ಇಲ್ಲಿಯವರೆಗೆ, ಈ ಮಿಷನ್ ಅಡಿಯಲ್ಲಿ ಅನುಮೋದನೆಗೊಂಡ ಒಟ್ಟು ಮನೆಗಳ ಸಂಖ್ಯೆ ಈಗ 1.14 ಕೋಟಿಯಾಗಿದೆ. ಇವುಗಳಲ್ಲಿ 89 ಲಕ್ಷಕ್ಕೂ ಹೆಚ್ಚು ಮನೆಗಳು ನಿರ್ಮಾಣ ಹಂತದಲ್ಲಿವೆ. ಸುಮಾರು 52.5 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು, ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಈ ಯೋಜನೆಯು ಒಟ್ಟು 7.52 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ 1.85 ಲಕ್ಷ ಕೋಟಿ ನೆರವು ನೀಡಿದ್ದು,  ಈವರೆಗೆ 1.13 ಲಕ್ಷ ಕೋಟಿ ಬಿಡುಗಡೆಯಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.