PM Awas Yojana: ಪಿಎಂ ಆವಾಸ್ ಯೋಜನೆಯ ಕುರಿತು ಸರ್ಕಾರದ ಮಹತ್ವದ ಘೋಷಣೆ! ಎಲ್ಲರ ಮೇಲೆ ಪ್ರಭಾವ ಬೀರಲಿದೆ
PM Awas Yojana Update: ನೀವೂ ಕೂಡ ಒಂದು ವೇಳೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾಗಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಹೌದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಬಗ್ಗೆ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಈ ಘೋಷಣೆಯ ಬಳಿಕ ಲಕ್ಷಾಂತರ ಜನರಿಗೆ ಸಾಕಷ್ಟು ಪ್ರಯೋಜನವಾಗಲಿದೆ.
PM Awas Yojana: ನೀವೂ ಕೂಡ ಒಂದು ವೇಳೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾಗಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಹೌದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಬಗ್ಗೆ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಈ ಘೋಷಣೆಯ ಬಳಿಕ ಲಕ್ಷಾಂತರ ಜನರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ್ (PMAY-G ಯೋಜನೆ) ಅನ್ನು 2024 ರವರೆಗೆ ಮುಂದುವರಿಸಲು ಅನುಮೋದನೆಯನ್ನು ನೀಡಲಾಗಿದೆ. ಈ ಕುರಿತಾದ ಇತ್ತೀಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,
ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಮಹತ್ವದ ಘೋಷಣೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಅಡಿಯಲ್ಲಿ 2.95 ಕೋಟಿ ಪಕ್ಕಾ ಮನೆಗಳನ್ನು ಮಂಜೂರು ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಇದುವರೆಗೆ ಸರ್ಕಾರ ಈ ಯೋಜನೆಯ ಅಡಿ ಸುಮಾರು 2 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿದೆ. ಆದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣವನ್ನು 2024 ರವರೆಗೆ ಮುಂದುವರಿಸಲು ಇದೀಗ ಸರ್ಕಾರ ಅನುಮೋದನೆಯನ್ನು ನೀಡಿದೆ. ಹಲವು ಕುಟುಂಬಗಳು ಈ ಯೋಜನೆಯಿಂದ ವಂಚಿತರಾಗಿರುವುದೇ ಇದರ ಹಿಂದಿನ ಪ್ರಮುಖ ಕಾರಣ ಎನ್ನಲಾಗಿದ್ದು, ಇದರಿಂದ ಲಕ್ಷಾಂತರ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಸರ್ಕಾರ ನೀಡಿರುವ ಮಾಹಿತಿ ಏನು?
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಈ ಯೋಜನೆಯಡಿ ಕೇಂದ್ರ ಸರ್ಕಾರದ ಒಟ್ಟು ವೆಚ್ಚ 1,43,782 ಕೋಟಿ ಆಗಲಿದ್ದು, ಇದರಲ್ಲಿ ನಬಾರ್ಡ್ ಗೆ ಸಾಲದ ಬಡ್ಡಿ ಪಾವತಿ 18,676 ಕೋಟಿ ರೂ. ಶಾಮೀಲಾಗಿದೆ. ಸರ್ಕಾರವು ಈ ಯೋಜನೆಗಾಗಿ ಗುಡ್ಡಗಾಡು ರಾಜ್ಯಗಳಿಗೆ ಶೇ. 90ರಷ್ಟು ಮತ್ತು ಶೇ.10ರಷ್ಟು ಆಧಾರದ ಮೇಲೆ ಹಣ ಪಾವತಿಸುತ್ತದೆ. ಉಳಿದ ರಾಜ್ಯಗಳಲ್ಲಿ ಶೇ.60 ಮತ್ತು ಶೇ.40 ರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ, ಕೇಂದ್ರ ಸರ್ಕಾರವೇ ಶೇ. 100 ರಷ್ಟು ಹಣವನ್ನು ಖರ್ಚು ಮಾಡುತ್ತದೆ.
ಇದನ್ನೂ ಓದಿ-Plastic Ban: ಜುಲೈ 1 ರಿಂದ ದೇಶಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧ! ಮೋದಿ ಸರ್ಕಾರದ ಆಕ್ಷನ್ ಪ್ಲಾನ್ ಇಲ್ಲಿದೆ
ಶೌಚಾಲಯ ನಿರ್ಮಾಣಕ್ಕೆ ಹಣ ಪಡೆಯಿರಿ
ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ 12,000 ರೂ.ಗಳನ್ನು ನೀಡುತ್ತಿದ್ದು, ಕಟ್ಟಡ ನಿರ್ಮಾಣಕ್ಕೆ ಹೆಚ್ಚುವರಿ ಹಣ ನೀಡುತ್ತದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಪಕ್ಕಾ ಮನೆ, ನೀರು, ವಿದ್ಯುತ್, ಶೌಚಾಲಯ ಕಲ್ಪಿಸುವ ಸರಕಾರದ ಸಂಕಲ್ಪ ಪೂರ್ಣಗೊಳ್ಳುತ್ತಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.