ಬೆಂಗಳೂರು : ದೇಶದ ಕೋಟಿಗಟ್ಟಲೆ ರೈತರಿಗೆ ಇದು ಪ್ರಮುಖ ಸುದ್ದಿ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 13 ನೇ ಕಂತಿನ ನಿರೀಕ್ಷೆಯಲ್ಲಿದ್ದರೆ, ನಿಮ್ಮ  ನಿರೀಕ್ಷೆ ಕೊನೆಗೊಳ್ಳಲಿದೆ. ಮಾರ್ಚ್ ಆರಂಭದಲ್ಲೇ ರೈತರ ಖಾತೆಗೆ ಈ ಕಂತಿನ ಹಣ ಬರಲಿದೆ. ಈ ಬಾರಿ 14 ಕೋಟಿ ರೈತರಿಗೆ ಹೋಳಿ ಹಬ್ಬದ ಉಡುಗೊರೆ ನೀಡಲು ಸರ್ಕಾರ ನಿರ್ಧರಿಸಿದೆ.  


COMMERCIAL BREAK
SCROLL TO CONTINUE READING

ಯಾವಾಗ ಖಾತೆ ಸೇರಲಿದೆ  ಯೋಜನೆಯ ಹಣ ?
ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತು ಮಾರ್ಚ್ 8 ರಂದು ಖಾತೆಗೆ ವರ್ಗಾವಣೆಯಾಗುವ ನಿರೀಕ್ಷೆ ಇದೆ.  ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಹೋಳಿ ಹಬ್ಬಕ್ಕೆ ಸರ್ಕಾರ ರೈತರಿಗೆ ಉಡುಗೊರೆ ನೀಡಲಿದೆ ಎನ್ನಲಾಗಿದೆ.


ಇದನ್ನೂ ಓದಿ : Arecanut today price: ರಾಜ್ಯದ ಇಂದಿನ ಅಡಿಕೆ ಮಾರುಕಟ್ಟೆಯ ಧಾರಣೆ ಹೀಗಿದೆ ನೋಡಿ


ವಿಮಾ ಯೋಜನೆಯ ಅಧಿಕೃತ ಟ್ವೀಟ್‌ ಮೂಲಕ ಮಾಹಿತಿ : 
ಇನ್ನೊಂದೆಡೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಲಾಭವನ್ನು ಪಡೆಯುವ ರೈತರಿಗಾಗಿ ಹೊಸ ನೀತಿಯನ್ನು ಸರ್ಕಾರ ಜಾರಿಗೊಳಿಸಿದೆ. ಅಧಿಕೃತ ವೆಬ್‌ಸೈಟ್ ಪ್ರಕಾರ, ಇನ್ನು ಮುಂದೆ ರೈತರು ಭಾಷೆಯ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ರೈತರಿಗೆ ಬೆಳೆ ವಿಮೆಯಲ್ಲಿ ಯಾವುದೇ ಅಡೆತಡೆಗಳು ಉಂಟಾಗದಂತೆ ನೋಡಿಕೊಳ್ಳುವಂತೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ. ರೈತರು ಬೆಳೆ ವಿಮೆಗೆ ಸಂಬಂಧಿಸಿದ ಮಾಹಿತಿಯನ್ನು ಹಿಂದಿ, ಇಂಗ್ಲಿಷ್ ಸೇರಿದಂತೆ 12 ಪ್ರಾದೇಶಿಕ ಭಾಷೆಗಳಲ್ಲಿ CropInsurance ಅಪ್ಲಿಕೇಶನ್ ಮತ್ತು NCI ಪೋರ್ಟಲ್‌ನಲ್ಲಿ ಪಡೆಯಬಹುದಾಗಿದೆ. 


ಇಲ್ಲಿಯವರೆಗೆ ಪಿಎಂ ಕಿಸಾನ್ ಯೋಜನೆಯ 12 ಕಂತು ಬಿಡುಗಡೆ : 
ಇಲ್ಲಿಯವರೆಗೆ ಪಿಎಂ ಕಿಸಾನ್ ಯೋಜನೆಯ 12 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲಾ ರೈತರಿಗೆ 13ನೇ ಕಂತಿನ ಹಣ ಸಿಗಲಿದೆ. ಆದರೆ, ಇನ್ನು ಕೂಡಾ ಇಕೆವೈಸಿ ಮಾಡದಿರುವ ರೈತರು ತಕ್ಷಣ ಇಕೆವೈಸಿ  ಮಾಡಿಸಬೇಕು. ಇಲ್ಲದಿದ್ದರೆ 13 ನೇ ಕಂತಿನ ಹಣ ನಿಮ್ಮ ಖಾತೆ ಸೇರುವುದಿಲ್ಲ. 


ಇದನ್ನೂ ಓದಿ : ದೇಶದ ಕೋಟ್ಯಾಂತರ ರೈತರಿಗೊಂದು ಸತಸದ ಸುದ್ದಿ, ನಿತ್ಯ 50 ರೂ.ಹೂಡಿಕೆ ಮಾಡಿ 35 ಲಕ್ಷ ಲಾಭ ಪಡೆಯುವ ಸುವರ್ಣಾವಕಾಶ!


ನಿಮ್ಮ ಕಂತಿನ  ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಿ :
1.ಕಂತಿನ  ಸ್ಟೇಟಸ್ ನೋಡಲು, PM ಕಿಸಾನ್‌ನ ವೆಬ್‌ಸೈಟ್‌ಗೆ ಹೋಗಿ.
 2. ಈಗ  ಫಾರ್ಮರ್ ಕಾರ್ನರ್ ಮೇಲೆ  ಕ್ಲಿಕ್ ಮಾಡಿ.
3. ಈಗ Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ನಿಮ್ಮ ಎದುರು ಹೊಸ ಪುಟ ತೆರೆದುಕೊಳ್ಳುತ್ತದೆ.
5. ಇಲ್ಲಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ  ಸ್ಟೇಟಸ್ ಬಗ್ಗೆ ಸಂಪೂರ್ಣ  ನಿಮ್ಮ ಮುಂದೆ ಕಾಣಿಸುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.