ನವದೆಹಲಿ : PM Kisan Samman Nidhi : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 10 ನೇ ಕಂತು ಆರ್ಥಿಕ ಪ್ರಯೋಜನಗಳನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಾಳೆ ಅಂದರೆ ಜನವರಿ 1, 2022 ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆ ಮಾಡಲಿದ್ದಾರೆ. ಇದರಡಿ 10 ಕೋಟಿಗೂ ಹೆಚ್ಚು ಫಲಾನುಭವಿ ರೈತರ ಖಾತೆಗೆ  20 ಸಾವಿರ ಕೋಟಿ ರೂ. ವರ್ಗಾಯಿಸಲಾಗುವುದು.  ಆದರೆ ಈ ಮಧ್ಯೆ, ಎರಡು ಕೋಟಿ ರೈತರ ಪಾಲಿಗೆ ಕೆಟ್ಟ ಸುದ್ದಿ ಎದುರಾಗಬಹುದು. ಮಾಧ್ಯಮ ವರದಿಗಳ ಪ್ರಕಾರ, 2 ಕೋಟಿಗೂ ಹೆಚ್ಚು ರೈತರು ಹೊಸ ವರ್ಷದಲ್ಲಿ 2 ಸಾವಿರ ರೂಪಾಯಿ ಕಂತು ಪಡೆಯುವಲ್ಲಿ ವಿಳಂಬವಾಗಬಹುದು. 


COMMERCIAL BREAK
SCROLL TO CONTINUE READING

2 ಕೋಟಿ ರೈತರ ಖಾತೆಗೆ ಬಿದ್ದಿಲ್ಲ ಹಣ : 
ಸರ್ಕಾರವು 10 ಕೋಟಿ ರೈತರ ಖಾತೆಗಳಿಗೆ ಹಣ ವರ್ಗಾಯಿಸುತ್ತದೆ. ವಾಸ್ತವವಾಗಿ 12 ಕೋಟಿ ರೈತರು ಪಿಎಂ ಕಿಸಾನ್ (PM Kisan) ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪ್ರಧಾನಿ ಕಾರ್ಯಾಲಯದ ಮಾಹಿತಿ ಪ್ರಕಾರ, 10 ಕೋಟಿ ರೈತರಿಗೆ ಹಣ ವರ್ಗಾವಣೆಯಾಗಬೇಕಿದೆ. ಅಂದರೆ, ಎರಡು ಕೋಟಿಗೂ ಹೆಚ್ಚು ರೈತರು 10ನೇ ಕಂತಿಗೆ ಹಣಕ್ಕೆ ಇನ್ನೂ ಕೆಲ ಕಾಲ  ಕಾಯಬೇಕಾಗುತ್ತದೆ. 


ಇದನ್ನೂ ಓದಿ : Indian Railway : ರೈಲ್ವೆ ಪ್ರಯಾಣಿಕರ ಗಮನಕ್ಕೆ : ಈ ಮಹತ್ವದ ನಿಯಮ ಬದಲಿಸಲಿದೆ ರೈಲ್ವೆ ಇಲಾಖೆ


ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ :
ಕಾರ್ಯಕ್ರಮದಲ್ಲಿ, ಪ್ರಧಾನಿಯವರು (PM Narendra Modi) ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ 14 ಕೋಟಿ ರೂ.ಗೂ ಹೆಚ್ಚು ಇಕ್ವಿಟಿ ಅನುದಾನವನ್ನು ಬಿಡುಗಡೆ ಮಾಡುತ್ತಾರೆ. ಇದು 1.24 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಕಾರ್ಯಕ್ರಮದ ಸಮಯದಲ್ಲಿ, ಪ್ರಧಾನ ಮಂತ್ರಿಗಳು ಎಫ್‌ಪಿಒಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 


ಕಂತು ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ :
ಪ್ರಧಾನಮಂತ್ರಿ ಕಿಸಾನ್ ಯೋಜನೆ (PM Kisan Yojana) ಅಡಿಯಲ್ಲಿ ನೋಂದಾಯಿಸಲಾದ ರೈತರು 10 ನೇ ಕಂತಿನ ಸ್ಟೇಟಸ್ ಪರಿಶೀಲಿಸಲು ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಬೇಕು .
ಇದರ ನಂತರ, ರೈತರು 'Farmers Corner' ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಇದರ ನಂತರ ನೀವು ವೆಬ್‌ಸೈಟ್‌ನಲ್ಲಿ ಲಭ್ಯವಿರುವ 'Beneficiaries List' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
 ನಂತರ ವೆಬ್‌ಸೈಟ್‌ನಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು.
ಇದರ ನಂತರ ನೀವು 'Get Report'' ಆಯ್ಕೆಯನ್ನು ಕ್ಲಿಕ್ ಮಾಡಬೇಕು.


ಇದನ್ನೂ ಓದಿ: PMJDY:ಜನ್ ಧನ್ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿ, ರೂ.1.3 ಲಕ್ಷದವರೆಗೆ ಪ್ರಯೋಜನ ಪಡೆಯಿರಿ


ಪ್ರತಿಯೊಬ್ಬ ರೈತರ ಖಾತೆಗೆ 2 ಸಾವಿರ ರೂ
ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ(PM Kisan Scheme), ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ 6000 ರೂಪಾಯಿಗಳ ಆರ್ಥಿಕ ಸಹಾಯ ನೀಡಲಾಗುತ್ತದೆ. ಇದನ್ನು 4 ತಿಂಗಳ ಮಧ್ಯಂತರದಲ್ಲಿ ತಲಾ 2000 ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.