ಪಿಎಂ ಕಿಸಾನ್ ಅಪ್‌ಡೇಟ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇದೆ.  ಕೇಂದ್ರ ಸರ್ಕಾರದ ಈ ಯೋಜನೆಯ 12ನೇ ಕಂತು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.  ದೇಶದ 10 ಕೋಟಿಗೂ ಹೆಚ್ಚು ರೈತರು ಅಕ್ಟೋಬರ್‌ನಲ್ಲಿ ಪಿಎಂ ಕಿಸಾನ್‌ನ ಮುಂದಿನ ಕಂತನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಇನ್ನೂ ಇ-ಕೆವೈಸಿ ಪೂರ್ಣಗೊಳಿಸದ ರೈತರಿಗೆ ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಪ್ರಯೋಜನ ಸಿಗುವುದಿಲ್ಲ. 


COMMERCIAL BREAK
SCROLL TO CONTINUE READING

ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ,  ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ನೊಂದಾಯಿತ ರೈತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಇ-ಕೆವೈಸಿ ಪೂರ್ಣಗೊಳಿಸುವುದು ಅತ್ಯಗತ್ಯವಾಗಿದೆ. ಅಂದರೆ, ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿತ ರೈತರು ಓಟಿಪಿ ಆಧಾರಿತ ಇ-ಕೆವೈಸಿ  ಅನ್ನು ಪೂರ್ಣಗೊಳಿಸಬೇಕಿದೆ. ಇದನ್ನು ಮಾಡಲು ನೀವು ಹತ್ತಿರದ ಸಾರ್ವಜನಿಕ ಉಪಯುಕ್ತತೆ ಕೇಂದ್ರಕ್ಕೆ ಭೇಟಿ ನೀಡಬಹುದು.


ಇದನ್ನೂ ಓದಿ- SBI ಅಥವಾ Post Office ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ? ಯಾವುದರಲ್ಲಿ ಬೇಗ ಹಣ ಡಬಲ್ ಆಗುತ್ತದೆ?


ವಾಸ್ತವವಾಗಿ, ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮೋದಿ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ . ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕ ಆರು ಸಾವಿರ ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಕಂತುಗಳಲ್ಲಿ ತಲಾ 2,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಇದಕ್ಕೂ ಮುನ್ನ ಮೇ 31ರಂದುಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ರೈತರ ಖಾತೆಗೆ ವರ್ಗಾಯಿಸಿದ್ದರು.


ಇದನ್ನೂ ಓದಿ- 7th Pay Commission : ಹಬ್ಬದ ದಿನವೆ ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ಡಿಎ ಹೆಚ್ಚಳಕ್ಕೆ ಅಧಿಸೂಚನೆ ಬಿಡುಗಡೆ


ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇ-ಕೆವೈಸಿ ಪೂರ್ಣಗೊಳಿಸುವುದು ಹೇಗೆ?
* ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇ-ಕೆವೈಸಿ ಪೂರ್ಣಗೊಳಿಸಾಲು ಮೊದಲು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಹೋಗಿ.
* ಇಲ್ಲಿ ಫಾರ್ಮರ್ ಕಾರ್ನರ್ ಗೆ ಹೋಗಿ ಇ-ಕೆವೈಸಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
* ಹೊಸ ವೆಬ್ ಪುಟದಲ್ಲಿ, ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಹುಡುಕಾಟ ಟ್ಯಾಬ್ ಅನ್ನು ಕ್ಲಿಕ್ ಮಾಡಿ. 
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
* ಒಟಿಪಿ ಸಲ್ಲಿಸಿದ ನಂತರ ಇಲ್ಲಿ ಕ್ಲಿಕ್ ಮಾಡಿ.
* ಆಧಾರ್ ನೋಂದಾಯಿತ ಮೊಬೈಲ್  ಒಟಿಪಿ ಅನ್ನು ನಮೂದಿಸಿ ಸಲ್ಲಿಸಿ. ಬಳಿಕ ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.