ನವದೆಹಲಿ: ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’(pm kisan samman nidhi)ಯ 13ನೇ ಕಂತಿನ ಹಣ ಬಿಡುಗಡೆಯಾಗಿ 19 ದಿನಗಳೇ ಕಳೆದಿವೆ. ಅರ್ಹ ರೈತರ ಬ್ಯಾಂಕ್ ಖಾತೆಗೆ ಸುಮಾರು 16 ಸಾವಿರ ಕೋಟಿ ರೂ. ಜಮಾ ಆಗಬೇಕಿದೆ. ಆದರೆ ಈ ಸಮ್ಮಾನ್ ನಿಧಿ ಮೊತ್ತವು ಅನೇಕ ರೈತರ ಖಾತೆಗೆ ಇನ್ನೂ ಜಮಾ ಆಗಿಲ್ಲ. ಇಂತಹ ಅನೇಕ ರೈತರ ಖಾತೆಗೆ ಇನ್ನೂ 2,000 ರೂ. ಬಂದಿರುವುದಿಲ್ಲ. ಹೀಗಾಗಿ ನೀವು ಮೊದಲು ನಿಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿರಿ. ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮಾ ಆಗಿರದಿದ್ದರೆ ನಾವು ಈ ಕೆಳಗೆ ಹೇಳಿದಂತೆ ಮಾಡಿ.


COMMERCIAL BREAK
SCROLL TO CONTINUE READING

ಖಾತೆಗೆ ಹಣ ಬರದಿದ್ದರೆ ರೈತರು ಏನು ಮಾಡಬೇಕು?


ಪಿಎಂ ಕಿಸಾನ್‌ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯ ಸರಿಯಾದ ವಿವರ ನೀಡದಿದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ. ಹೀಗಾಗಿ ನೀವು ನೀಡಿದ ವಿವರಗಳು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು pmkisan.gov.inಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು. ಏನಾದರೂ ತಪ್ಪಾಗಿದ್ದರೆ ಅದನ್ನು ಕೂಡಲೇ ಸರಿಪಡಿಸಬೇಕು. ಹೀಗೆ ಮಾಡಿದ್ರೆ ಮುಂದಿನ ಕಂತಿನಲ್ಲಿ ರೈತರು ಈ ಮೊತ್ತವನ್ನು ಪಡೆಯಬಹುದು. ಈ ಮಾಹಿತಿಯನ್ನು ಹೇಗೆ ಸರಿಪಡಿಸಬಹುದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. ನೀವು ಮೊದಲು ನಿಮ್ಮ ಬ್ಯಾಂಕ್ ಖಾತೆಯ ಇ-ಕೆವೈಸಿ ಪ್ರಕ್ರಿಯೆಯನ್ನು ಸರಿಯಾಗಿ ಪೂರ್ಣಗೊಳಿಸಬೇಕು.


ಇದನ್ನೂ ಓದಿ: LIC ಈ ಯೋಜನೆಯಲ್ಲಿ ಸಿಗಲಿದೆ 1,00,000 ರೂ. ಪಿಂಚಣಿ!


ಇ-ಕೆವೈಸಿ ಮಾಡಲು ಈ ರೀತಿ ಮಾಡಿ


  • ಮೊದಲು pmkisan.gov.in ವೆಬ್‌ಸೈಟ್‌ಗೆ ಹೋಗಿ.

  • ಬಲಭಾಗದಲ್ಲಿ Farmer's Corner ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.

  • ಇದರ ನಂತರ Beneficiary Status ಬಟನ್ ಒತ್ತಿರಿ.

  • ಇದರ ನಂತರ ನೀವು ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಫೋನ್ ಸಂಖ್ಯೆಯ ಆಯ್ಕೆಯನ್ನು ನೋಡುತ್ತೀರಿ.

  • ಆಧಾರ್ ಸಂಖ್ಯೆ ನಮೂದಿಸಿ ಮತ್ತು Get Data ಬಟನ್ ಮೇಲೆ ಒತ್ತಿರಿ

  • ಈ ಪ್ರಕ್ರಿಯೆಯ ನಂತರ ಎಲ್ಲಾ ಮಾಹಿತಿಯು ಪರದೆಯ ಮೇಲೆ ಕಾಣಿಸುತ್ತದೆ.

  • ಖಾತೆ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ತಪ್ಪಾಗಿದ್ದರೆ ಅದನ್ನು ಸರಿಪಡಿಸಬಹುದು.


ಯಾರನ್ನು ಸಂಪರ್ಕಿಸಬೇಕು?


ನೀವು ಫಲಾನುಭವಿಗಳ ಪಟ್ಟಿಯಲ್ಲಿದ್ದರೆ ಮತ್ತು ಇನ್ನೂ 13ನೇ ಕಂತು ನಿಮ್ಮ ಖಾತೆಗೆ ಬರದಿದ್ದರೆ pmkisan-ict@gov.inಅನ್ನು ಸಂಪರ್ಕಿಸಬಹುದು . ಇದಲ್ಲದೆ ಸಹಾಯವಾಣಿ ಸಂಖ್ಯೆ 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಂಪರ್ಕಿಸಬಹುದು. ಇಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತದೆ.


ಇದನ್ನೂ ಓದಿ: PM Kisan ಯೋಜನೆಯ 14ನೇ ಕಂತಿನ ಹಣ ಮುಂದಿನ ತಿಂಗಳು ಬಿಡುಗಡೆ!?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.