PM Kisan ನಿಯಮದಲ್ಲಿ ಬದಲಾವಣೆ! ಯಾವ ರೈತರಿಗೆ 13ನೇ ಕಂತು ಸಿಗಲ್ಲ ಹೇಳಿದ ಕೃಷಿ ಸಚಿವ
PM Kisan 13th Instalment: ಕೇಂದ್ರ ಸರ್ಕಾರದ ವತಿಯಿಂದ ಹೊಸ ನಿರ್ದೇಶನ ಜಾರಿಯಾಗಿದೆ. ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಅವರು ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳು ಮಾತು ಮುಖ್ಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕೃಷಿ ಉಪನಿರ್ದೆಷಕರಿಗೆ ಈ ಆದೇಶ ನೀಡಿದ್ದಾರೆ.
PM Kisan Samman Nidhi: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 13 ನೇ ಕಂತಿನ ಹಣಕ್ಕಾಗಿ ಅನ್ನದಾತ ಇನ್ನಷ್ಟು ಕಾಯಬೇಕಾಗುವ ಸಾಧ್ಯತೆ ಇದೆ. ವಾಸ್ತವದಲ್ಲಿ ಈ ಕುರಿತು ಕೇಂದ್ರದ ಮೋದಿ ಸರಕಾರ ಹೊಸ ಆದೇಶ ಹೊರಡಿಸಿದೆ. ಈ ಆದೇಶ ಜಾರಿಯಿಂದ ದೇಶದ ಕೋಟ್ಯಂತರ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಉತ್ತರ ಪ್ರದೇಶವೊಂದರಲ್ಲೇ 50 ಲಕ್ಷಕ್ಕೂ ಹೆಚ್ಚು ರೈತರಿಗೆ 13ನೇ ಕಂತು ಸಿಗುವ ನಿರೀಕ್ಷೆ ಇಲ್ಲ.
ಕೇಂದ್ರದಿಂದ ಹೊಸ ಸೂಚನೆಗಳು
ಇ-ಕೆವೈಸಿ, ಭೂ ದಾಖಲೆ ಮತ್ತು ಆಧಾರ್ ಸೀಡಿಂಗ್ ಮಾಡಿದ ರೈತರಿಗೆ ಮಾತ್ರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನವನ್ನು ನೀಡಲಾಗುವುದು ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಕಳೆದ ದಿನಗಳಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಸಂಸತ್ತಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಈ ನಿಟ್ಟಿನಲ್ಲಿ ಕೇಂದ್ರದಿಂದ ಹೊಸ ಅಧಿಸೂಚನೆ ಬಂದಿದೆ. ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಅವರು ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳು, ಮುಖ್ಯ ಅಭಿವೃದ್ಧಿ ಅಧಿಕಾರಿಗಳು ಮತ್ತು ಕೃಷಿ ಉಪ ನಿರ್ದೇಶಕರಿಗೆ ಆದೇಶ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ-Car ಖರೀದಿಯ ಮೇಲೆ ಈ ರೀತಿ ಶೇ.15ರಷ್ಟು ರಿಯಾಯಿತಿ ಪಡೆಯಿರಿ, ಟ್ರಿಕ್ ಹೇಳಿಕೊಟ್ಟ ಗಡ್ಕರಿ
ಕೇವಲ 65 ಲಕ್ಷ ರೈತರ ಭೂದಾಖಲೆ ಪರಿಶೀಲನೆ
ಜನವರಿ 31 ರೊಳಗೆ ಎಲ್ಲಾ ರೈತರು ಕಡ್ಡಾಯವಾಗಿ ಇ-ಕೆವೈಸಿ, ಬ್ಯಾಂಕ್ ಖಾತೆಯ ಆಧಾರ್ ಸೀಡಿಂಗ್ ಮತ್ತು ಭೂದಾಖಲೆ ಪರಿಶೀಲನೆಯನ್ನು ಮಾಡಬೇಕು ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ರಾಜ್ಯದ 2.13 ಕೋಟಿ ಭೂ ದಾಖಲೆ ಗುರುತು, 1.48 ಕೋಟಿ ರೈತರ ಇ-ಕೆವೈಸಿ, 65 ಲಕ್ಷ ಭೂ ದಾಖಲೆ ಪರಿಶೀಲನೆ ಮತ್ತು 1.64 ರೈತರ ಆಧಾರ್ ಸೀಡಿಂಗ್ ಪೂರ್ಣಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಜನವರಿ 16 ರಿಂದ, ಈ ಎಲ್ಲಾ ಮೂರು ಪ್ರಮುಖ ದಾಖಲೆಗಳ ಪಟ್ಟಿಯನ್ನು ಲಗತ್ತಿಸಲಾಗುತ್ತಿದೆ, ಅದರ ಕೆಲಸವು ಬಾಕಿ ಉಳಿದಿದೆ.
ಇದನ್ನೂ ಓದಿ-Indian Railways: ಜೋತಿರ್ಲಿಂಗ ದರ್ಶನಕ್ಕೆ ಅವಕಾಶ ನೀಡುತ್ತಿದೆ ಭಾರತೀಯ ರೇಲ್ವೆ, ಊಟ-ವಸತಿ ಉಚಿತ, ಇಲ್ಲಿದೆ ವಿವರ
ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂಪಾಯಿಗಳನ್ನು ಪಡೆಯಿರಿ
ಇದಲ್ಲದೇ ಗ್ರಾಮ ಪಂಚಾಯಿತಿಗಳ ಬಹಿರಂಗ ಸಭೆಗಳನ್ನು ಪಂಚಾಯಿತಿ ರಾಜ್ ಇಲಾಖೆಯ ನೆರವಿನಿಂದ ಆಯೋಜಿಸಲಾಗುವುದು. ಈ ಸಮಯದಲ್ಲಿ, ಇ-ಕೆವೈಸಿ, ಆಧಾರ್ ಸೀಡಿಂಗ್ ಮತ್ತು ಭೂದಾಖಲೆ ಪರಿಶೀಲನೆಗಾಗಿ ರೈತರನ್ನು ಪ್ರೇರೇಪಿಸಲಾಗುವುದು. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಪ್ರತಿ ವರ್ಷ ಫಲಾನುಭವಿಗಳಿಗೆ 6000 ರೂಪಾಯಿಗಳನ್ನು ನೀಡಲು ಅವಕಾಶವಿದೆ.ಈ ಹಣವು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000-2000 ರೂ.ಗಳ ಮೂರು ಕಂತುಗಳಲ್ಲಿ ರೈತರ ಖಾತೆಗೆ ನೇರ ವರ್ಗಾವಣೆಯ ಮೂಲಕ ಪಾವತಿಸಲಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.