PM Kisan New Rule:  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಸರ್ಕಾರವು ರೈತರ ಖಾತೆಗೆ ವಾರ್ಷಿಕವಾಗಿ ರೂ 6,000 ಅಂದರೆ, ರೂ 2,000 ರ ಮೂರು ಕಂತುಗಳನ್ನು ಪಾವತಿಸುತ್ತದೆ. ಇದುವರೆಗೆ ಈ ಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ, ಯೋಜನೆಯಿಂದ ಯೋಜನೆಗೆ, ಕೆಲವೊಮ್ಮೆ ಅರ್ಜಿಗೆ ಸಂಬಂಧಿಸಿದಂತೆ ಮತ್ತು ಕೆಲವೊಮ್ಮೆ, ಅರ್ಹತೆಗೆ ಸಂಬಂಧಿಸಿದಂತೆ ಅನೇಕ ಹೊಸ ನಿಯಮಗಳನ್ನು ಮಾಡಲಾಗಿದೆ. ಈಗ ಈ ಯೋಜನೆಯಲ್ಲಿ, ಪತಿ ಮತ್ತು ಹೆಂಡತಿ ಇಬ್ಬರಿಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯುವ ಬಗ್ಗೆ ಹಲವು ಬಾರಿ ಪ್ರಶ್ನಿಸಲಾಗುತ್ತಿದೆ. ಈ ಕುರಿತಾದ ನಿಯಮ ಏನು ಹೇಳುತ್ತದೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಇದರ ಲಾಭ ಯಾರಿಗೆ ಸಿಗುತ್ತದೆ ಗೊತ್ತಾ?
ಪಿಎಂ ಕಿಸಾನ್ ಯೋಜನೆಯ ನಿಯಮಗಳ ಪ್ರಕಾರ, ಪತಿ ಮತ್ತು ಪತ್ನಿ ಇಬ್ಬರೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಯಾರಾದರೂ ಹೀಗೆ ಮಾಡಿದರೆ ಸರ್ಕಾರದ ಪ್ರಕಾರ ಅದು ವಂಚನೆಯಾಗಲಿದೆ. ಇದಲ್ಲದೇ ಅಂತಹ ರೈತರನ್ನು ಅನರ್ಹರನ್ನಾಗಿಸುವ ಹಲವು ನಿಬಂಧನೆಗಳಿವೆ. ಅನರ್ಹ ರೈತರು ಈ ಯೋಜನೆಯ ಲಾಭ ಪಡೆದರೆ, ಅವರು ಸಂಪೂರ್ಣ ಕಂತನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು. ಇದಲ್ಲದೆ, ಈ ಯೋಜನೆಯ ನಿಯಮಗಳ ಅಡಿಯಲ್ಲಿ, ರೈತರ ಕುಟುಂಬದಲ್ಲಿ ಯಾರಾದರು ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದರೆ, ಅಂತಹ ರೈತರಿಗೆ ಯೋಜನೆಯ ಪ್ರಯೋಜನವು ಸಿಗುವುದಿಲ್ಲ. ಅಂದರೆ, ಕಳೆದ ಆರ್ಥಿಕ ವರ್ಷದಲ್ಲಿ ಪತಿ-ಪತ್ನಿಯರಲ್ಲಿ ಯಾರಾದರೂ ಆದಾಯ ತೆರಿಗೆ ಪಾವತಿಸಿದ್ದರೆ, ಅಂತಹ ರೈತರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.


ಇದನ್ನೂ ಓದಿ-ಇನ್ಮುಂದೆ UPI ಆಧರಿತ ವಹಿವಾಟಿಗೆ ಬೀಳಲಿದೆಯಾ ಶುಲ್ಕ! ಎಷ್ಟಾಗಬಹುದು ಚಾರ್ಜ್‌?


ಯಾರು ಅನರ್ಹರು?
ನಿಯಮದ ಪ್ರಕಾರ, ಒಬ್ಬ ರೈತ ತನ್ನ ಕೃಷಿ ಭೂಮಿಯನ್ನು ಕೃಷಿ ಕೆಲಸಕ್ಕೆ ಬಳಸದೆ, ಬೇರೆ ಕೆಲಸಗಳಿಗೆ ಬಳಸುತ್ತಿದ್ದರೆ ಅಥವಾ ಇತರರ ಹೊಲಗಳಲ್ಲಿ ಕೃಷಿ ಕೆಲಸ ಮಾಡುತ್ತಿದ್ದರೆ ಮತ್ತು ಕೃಷಿ ಭೂಮಿ ಆತನದ್ದಾಗಿರರಿದ್ದರೆ, ಅಂತಹ ರೈತರು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಅನರ್ಹರಾಗಿರುತ್ತಾರೆ. ಇದಲ್ಲದೆ ಯಾವುದೇ ಒಬ್ಬ ರೈತ ಬೇಸಾಯ ಮಾಡುತ್ತಿದ್ದರೂ ಕೂಡ ಹೊಲ ಆತನ ಹೆಸರಿನಲ್ಲಿರದೆ ಅವನ ತಂದೆ ಅಥವಾ ಅಜ್ಜನ ಹೆಸರಿನಲ್ಲಿದ್ದರೆ, ಅವರಿಗೂ ಈ ಯೋಜನೆಯ ಲಾಭ ಸಿಗುವುದಿಲ್ಲ.


ಇದನ್ನೂ ಓದಿ-Union Cabinet : ಕೇಂದ್ರದಿಂದ ರೈತರಿಗೆ ಸಿಹಿ ಸುದ್ದಿ : ಅಲ್ಪಾವಧಿಯ ಕೃಷಿ ಸಾಲಗಳಿಗೆ 1.5% ಬಡ್ಡಿ ಸಬ್ಸಿಡಿ 


ಈ ಜನರಿಗೂ ಸಹ ಪ್ರಯೋಜನ ಸಿಗುವುದಿಲ್ಲ
ಯಾವುದೇ ಓರ್ವ ವ್ಯಕ್ತಿ ಕೃಷಿ ಭೂಮಿಯ ಮಾಲೀಕನಾಗಿದ್ದು, ಸರ್ಕಾರಿ ನೌಕರನಾಗಿದ್ದರೆ ಅಥವಾ ಸೇವಾ ನಿವೃತ್ತಿಯನ್ನು ಹೊಂದಿದ್ದರೆ, ಹಾಲಿ ಅಥಾವಾ ಮಾಜಿ ಸಂಸದ, ಶಾಸಕ, ಮಂತ್ರಿಯಾಗಿದ್ದರೆ, ಅವರೂ ಕೂಡ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯಲು ಅನರ್ಹರಾಗಿರುತ್ತಾರೆ. ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ಅವರ ಕುಟುಂಬದ ಸದಸ್ಯರು ಸಹ ಅನರ್ಹರ ಪಟ್ಟಿಗೆ ಸೇರುತ್ತಾರೆ. ಆದಾಯ ತೆರಿಗೆ ಪಾವತಿಸುವ ಕುಟುಂಬಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.