ಈ ದಿನಾಂಕದಂದು ಜಾರಿಯಾಗಲಿದೆ ಪಿಎಂ ಕಿಸಾನ್ ಯೋಜನೆಯ 10ನೇ ಕಂತು
ಡಿಸೆಂಬರ್ 15 ಮತ್ತು 25ರ ನಡುವೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.
ನವದೆಹಲಿ : PM Kisan Samman Nidhi Yojana 10th Installment : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಯೋಜನೆ (Pm Kisan yojana) ಕೇಂದ್ರ ಸರ್ಕಾರವು ಪ್ರಾರಂಭಿಸಿದ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆ ಅಡಿಯಲ್ಲಿ ರೈತರು ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುತ್ತಿದೆ. ಈ ಯೋಜನೆಯಡಿ, 2000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಅಂದರೆ ವಾರ್ಷಿಕವಾಗಿ 6000 ರೂ. ಗಳನ್ನು ರೈತರಿಗೆ ನೀಡಲಾಗುತ್ತದೆ.
ಡಿಸೆಂಬರ್ 15 ಮತ್ತು 25ರ ನಡುವೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pm kisna samman nidhi) 10 ನೇ ಕಂತನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ 10 ನೇ ಕಂತನ್ನು ಪಡೆಯಲು ನೀವು ಕೂಡಾ ಬಯಸಿದರೆ ಅಧಿಕೃತ PM ಕಿಸಾನ್ ವೆಬ್‌ಸೈಟ್‌ನಲ್ಲಿ (PM Kisan website) ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವುದು ಅಗತ್ಯವಾಗಿರುತ್ತದೆ.
ಇದನ್ನೂ ಓದಿ : Ottobike: ಒಂದು ಬಾರಿ ಫುಲ್ ಚಾರ್ಜ್ನಲ್ಲಿ 230 ಕಿಮೀ ಚಲಿಸುತ್ತೆ ಈ ಎಲೆಕ್ಟ್ರಿಕ್ ಬೈಕ್
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ:
ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವ ಹಂತ-ಹಂತದ ಪ್ರಕ್ರಿಯೆ :
1. pmkisan.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
2. ಮುಖಪುಟದಿಂದ 'farmers corner' ಗೆ ಹೋಗಿ
3. 'ಫಾರ್ಮರ್ ಕಾರ್ನರ್' ನಲ್ಲಿ, 'beneficiary status' ಮೇಲೆ ಕ್ಲಿಕ್ ಮಾಡಿ
4. ಆಧಾರ್ ಸಂಖ್ಯೆ (Aadhaar), PM ಕಿಸಾನ್ ಖಾತೆ ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಇದರಲ್ಲಿ ಯಾವುದಾದರೂ ಒಂದನ್ನು ನಮೂದಿಸಿ
5.ಈಗ 'Get Data' ಆಯ್ಕೆಯನ್ನು ಕ್ಲಿಕ್ ಮಾಡಿದರೆ ಫಲಾನುಭವಿಗಳ ಪಟ್ಟಿಯನ್ನು ನೋಡಲು ಸಾಧ್ಯವಾಗುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಫಲಾನುಭವಿ ಹೆಸರನ್ನು ಪರಿಶೀಲಿಸುವ ಕ್ರಮಗಳು
1.https://pmkisan.gov.in/. PM ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡಿ -
2.'beneficiary list' ಮೇಲೆ ಕ್ಲಿಕ್ ಮಾಡಿ.
3. ಈಗ, ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್, ಗ್ರಾಮ ಆಯ್ಕೆಮಾಡಿ ಮತ್ತು get report ಕ್ಲಿಕ್ ಮಾಡಿ.
4. ಈಗ ಪಟ್ಟಿ ಕಾಣಿಸುತ್ತದೆ.
ಇದನ್ನೂ ಓದಿ : ಫ್ಲೈಟ್ ಬುಕ್ಕಿಂಗ್ ಮೇಲೆ ಭಾರೀ ರಿಯಾಯಿತಿ, ಅಗ್ಗದ ದರದಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ ತಿಳಿಯಿರಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ದೇಶದ ಎಲ್ಲಾ ಭೂಮಾಲೀಕ ರೈತರ ಕುಟುಂಬಗಳ (Farmer family) ಆದಾಯವನ್ನು ಬೆಂಬಲಿಸುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಸರ್ಕಾರದ ವತಿಯಿಂದ ರೈತರಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ