ನವದೆಹಲಿ: ಪಿಎಂ ಕಿಸಾನ್ ಯೋಜನೆಯ 11ನೇ ಕಂತಿಗಾಗಿ(PM Kisan 11th Installment)ಈಗ ರೈತರು ಕಾಯುತ್ತಿದ್ದಾರೆ. ಇದುವರೆಗೆ ಈ ಯೋಜನೆಯ 10 ಕಂತುಗಳು ರೈತರ ಖಾತೆಗೆ ಜಮಾ ಆಗಿದೆ. ‘ಪ್ರಧಾನ ಮಂತ್ರಿ ಕಿಸಾನ್ ಯೋಜನೆ 2021’ರಲ್ಲಿ ಕೇಂದ್ರ ಸರ್ಕಾರವು ದೊಡ್ಡ ಬದಲಾವಣೆಯನ್ನು ಮಾಡಿದೆ. ಅಂದರೆ ಈಗ 11ನೇ ಕಂತಿಗೆ ರೈತರು ಹಲವು ಹೊಸ ನಿಯಮಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಇ-ಕೆವೈಸಿ(E-KYC) ಪೂರ್ಣಗೊಳಿಸಿದಾಗ ಮಾತ್ರ ‘ಪಿಎಂ ಕಿಸಾನ್ ಯೋಜನೆ’(PM Kisan Samman Nidhi)ಯ ಫಲಾನುಭವಿಗಳು ಮುಂದಿನ ಕಂತು ಅಂದರೆ 11ನೇ ಕಂತಿನ ಹಣವನ್ನು ಪಡೆಯುತ್ತಾರೆ. ಇ-ಕೆವೈಸಿ ಮಾಡಿಸಿಲ್ಲದಿದ್ದರೆ ನಿಮ್ಮ ಹಣ ಬರುವುದಿಲ್ಲ. ಹೀಗಾಗಿ ನೀವು ಈಗಲೇ ಈ ಬಗ್ಗೆ ಪರಿಶೀಲಿಸಿ ಇ-ಕೆವೈಸಿ ಮಾಡಿಸಬೇಕು. ಶೀಘ್ರವೇ ‘ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ಯ 11ನೇ ಕಂತು(PM Kisan 11th Installment)ಬಿಡುಗಡೆಯಾಗಲಿದೆ. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ ರೈತರು ಕಿಸಾನ್ ಕಾರ್ನರ್‌ನಲ್ಲಿ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ ಎಂದು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ತಿಳಿಸಲಾಗಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಬೇಕು. ನಿಮ್ಮ ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಿಂದಲೂ ನೀವು ಮನೆಯಲ್ಲಿ ಕುಳಿತು ಈ ಕೆಲಸವನ್ನು ಸುಲಭವಾಗಿ ಮಾಡಬಹುದು.


ಇದನ್ನೂ ಓದಿ: Cryptocurrency: ಕ್ರಿಪ್ಟೋ ಕರೆನ್ಸಿಗಳಲ್ಲಿಯೂ ಕೂಡ SIP ಮಾಡಬಹುದು, ಹಲವರು ಲಾಭ ಗಳಿಸಿದ್ದಾರೆ


ಇ-ಕೆವೈಸಿ ಪ್ರಕ್ರಿಯೆಯನ್ನು ತಿಳಿಯಿರಿ


1. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ ಕಿಸಾನ್ ಕಾರ್ನರ್‌ನಲ್ಲಿ ‘EKYC’ ಆಯ್ಕೆಯನ್ನು ಕ್ಲಿಕ್ ಮಾಡಿ.


2. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಿ.


3. ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸಹಾಯದಿಂದ ನೀವು ಇದನ್ನು ಮನೆಯಲ್ಲಿಯೇ ಕುಳಿತು ಪೂರ್ಣಗೊಳಿಸಬಹುದು.


4. ಇದಕ್ಕಾಗಿ ನೀವು ಮೊದಲು https://pmkisan.gov.in/ ಪೋರ್ಟಲ್‌ಗೆ ಹೋಗಿ.


5. ಬಲಭಾಗದಲ್ಲಿ ನಿಮಗೆ ಕೆಲವು ಟ್ಯಾಬ್ ಗಳು ಕಾಣಿಸುತ್ತವೆ. ಮೇಲ್ಭಾಗದಲ್ಲಿ ನೀವು ಇ-ಕೆವೈಸಿ ಬರೆದಿರುವುದನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.


ಇದರ ಹೊರತಾಗಿ ನಿಮ್ಮ ಕಂತಿನ ಸ್ಥಿತಿ ಏನಾಗಿದೆ ಅಂತಾ ನೀವು ಸುಲಭವಾಗಿ ಪರಿಶೀಲಿಸಬಹುದು. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ.


ಈ ರೀತಿ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿ


1. ಇದಕ್ಕಾಗಿ ಮೊದಲು ನೀವು ‘ಪ್ರಧಾನ ಮಂತ್ರಿ ಕಿಸಾನ್ ಯೋಜನೆ’(PM Kisan Samman Nidhi Yojana)ಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಹೋಗಿ .


2. ಈಗ ಅದರ ಮುಖಪುಟದಲ್ಲಿ ನೀವು Farmers Corner ಆಯ್ಕೆಯನ್ನು ನೋಡುತ್ತೀರಿ.


3. Farmers Corner ವಿಭಾಗದಲ್ಲಿ ಫಲಾನುಭವಿಗಳ ಪಟ್ಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.


4. ಈಗ ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.


5. ಇದರ ನಂತರ ನೀವು ‘Get Report’ ಮೇಲೆ ಕ್ಲಿಕ್ ಮಾಡಿ.


6. ಇದರ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.


ಇದನ್ನೂ ಓದಿ: NBFC ಗಳೂ ಕೂಡ ಇನ್ಮುಂದೆ ಗ್ರಾಹಕರಿಗೆ Credit Card ನೀಡಬಹುದು, ಅನುಮತಿ ನೀಡಲು RBI ಚಿಂತನೆ


ನಿಮ್ಮ ಕಂತಿನ ಸ್ಥಿತಿಯನ್ನು ಪರಿಶೀಲಿಸಿ


1. ನಿಮ್ಮ ಕಂತಿನ ಸ್ಥಿತಿಯನ್ನು ನೋಡಲು ನೀವು ಮೊದಲು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ.


2. ಈಗ ಬಲಭಾಗದಲ್ಲಿರುವ Farmers Corner ಮೇಲೆ ಕ್ಲಿಕ್ ಮಾಡಿ.


3. ಇದರ ನಂತರ ನೀವು Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ.


4. ಈಗ ಹೊಸ ಪುಟ ತೆರೆದುಕೊಳ್ಳುತ್ತದೆ.


5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.


6. ಇದರ ನಂತರ ನೀವು ನಿಮ್ಮ ಕಂತಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.