Pradhan Mantri Kisan Samman Nidhi: ದೇಶದ ರೈತರಿಗೆ ಬಂಪರ್ ಸುದ್ದಿಯೊಂದು ಸಿಕ್ಕಿದ್ದು, PM ಕಿಸಾನ್ ಯೋಜನೆಯಡಿ ಈ ಬಾರಿ 13,500 ರೂ. ಹಣ ಬರುತ್ತಂತೆ. ಆರ್ಥಿಕವಾಗಿ ದುರ್ಬಲವಾಗಿರುವ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರವು ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯನ್ನು ಜಾರಿಗೊಳಿಸಿದೆ


COMMERCIAL BREAK
SCROLL TO CONTINUE READING

ಈ ಪ್ರತಿಷ್ಠಿತ ಯೋಜನೆಯಡಿ ದೇಶದ ಬಡ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರತಿವರ್ಷ 6,000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತಿದೆ. ಈ 6 ಸಾವಿರ ರೂ. ಆರ್ಥಿಕ ಸಹಾಯವನ್ನು ಪ್ರತಿವರ್ಷ 3 ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಪ್ರತಿ ಕಂತಿನಡಿ 2 ಸಾವಿರ ರೂ.ವನ್ನು DBT ಮೂಲಕ ರೈತರ ಖಾತೆಗಳಿಗೆ ನೇರವಾಗಿ ಕಳುಹಿಸಲಾಗುವುದು. 


ಇದನ್ನೂ ಓದಿ: Gruha Lakshmi Yojana: ಈ ಜಿಲ್ಲೆಗಳ ಯಜಮಾನಿಯರ ಖಾತೆಗೆ ಒಟ್ಟಿಗೆ 2 ತಿಂಗಳ ₹4,000 ಜಮಾ!


ಪ್ರತಿ ಕಂತನ್ನು 4 ತಿಂಗಳ ಅವಧಿಯಲ್ಲಿ ಕಳುಹಿಸಲಾಗುತ್ತದೆ. ಇಲ್ಲಿಯವರೆಗೆ ʼಪಿಎಂ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ ಒಟ್ಟು 17 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಕಳೆದ ತಿಂಗಳು ಜೂನ್ 18ರಂದು ವಾರಣಾಸಿಯಲ್ಲಿ ನಡೆದ ʼಕಿಸಾನ್ ಸಮ್ಮಾನ್ ಸಮ್ಮೇಳನʼದಲ್ಲಿ ಪ್ರಧಾನಿ ಮೋದಿಯವರು ಯೋಜನೆಯ 17ನೇ ಕಂತಿಗೆ ಚಾಲನೆ ನೀಡಿದರು.


17ನೇ ಕಂತು ಬಿಡುಗಡೆಯಾಗಿ 1 ತಿಂಗಳು ಕಳೆದಿದೆ. ಇದೀಗ ದೇಶದಾದ್ಯಂತ ಕೋಟ್ಯಂತರ ರೈತರು 18ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಮುಂದಿನ ಅಕ್ಟೋಬರ್‌ನಲ್ಲಿ ʼಪಿಎಂ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ 18ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ. ಈ ಬಗ್ಗೆ ಸರ್ಕಾರದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ ಪ್ರಯೋಜನವು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ.


ಇದನ್ನೂ ಓದಿ: ಎಡಕುಮೇರಿ,ಕಡಗರವಳ್ಳಿ ನಡುವೆ ಮತ್ತೆ ಗುಡ್ಡ ಕುಸಿತ :ಆಗಸ್ಟ್‌ 4 ರವರೆಗೆ ಈ ಎಲ್ಲಾ ರೈಲುಗಳು ರದ್ದು


ʼಪಿಎಂ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ ಪ್ರಯೋಜನ ಪಡೆಯಲು ಸರ್ಕಾರವು ಈ ಯೋಜನೆಯಡಿ ಇ-ಕೆವೈಸಿ ಮತ್ತು ಭೂ ದಾಖಲೆಗಳ ಪರಿಶೀಲನೆ ಕಡ್ಡಾಯಗೊಳಿಸಿದೆ. ನೀವು ಈ 2 ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸದಿದ್ದರೆ ಯೋಜನೆಯ ಲಾಭ ಸಿಗುವುದಿಲ್ಲ. ಇದೇ ವೇಳೆ ತೆಲಂಗಾಣ ಸರ್ಕಾರದ ರೈತ ಭರೋಸಾ ಯೋಜನೆಯ ಮೂಲಕ ರೈತರ ಖಾತೆಗೆ 15 ಸಾವಿರ ರೂ. ಸಿಗಲಿದೆ. ಇದು ಈ ಮುಂಗಾರು ಹಂಗಾಮಿನಿಂದಲೇ ಜಾರಿಗೆ ಬರಲಿದೆ. ಪ್ರತಿ ಎಕರೆಗೆ 7,500 ರೂ. ರೈತರ ಖಾತೆಗೆ ಜಮಾ ಮಾಡಲಾಗುವುದು.


ಇದರ ಜೊತೆಗೆ ಪಿಎಂ ಕಿಸಾನ್ ಹಣ 2 ಸಾವಿರ ರೂ. ಸಿಗಲಿದೆ. ವಿವಿಧ ಕಾರಣಗಳಿಂದ ಬಾಕಿಯಿರುವ ಹಣವು KYC ಪೂರ್ಣಗೊಳಿಸಿದರೆ ದೊರೆಯಲಿದೆ. ಕಳೆದ 2 ಕಂತುಗಳಲ್ಲಿ ಠೇವಣಿ ಇಡದವರಿಗೆ 6,000 ರೂ.ಗಳನ್ನು ರೈತ ಭರೋಸಾದಿಂದ 13,500 ರೂ. ಸಿಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.