PMK Update: ಫೆಬ್ರುವರಿ 10 ನೋಟ್ ಮಾಡಿಟ್ಟುಕೊಳ್ಳಿ, ಕಾರಣ ಇಲ್ಲಿದೆ!
PM Kisan Update: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ನೀವು ಸಹ ಈ ಯೋಜನೆಯ ಲಾಭಾರ್ಥಿಗಳಾಗಿದ್ದರೆ. ಫೆಬ್ರವರಿ 10 ನಿಮ್ಮ ಪಾಲಿಗೆ ಒಂದು ಪ್ರಮುಖ ದಿನಾಂಕವಾಗಿರಲಿದೆ ಎಂದು ಸರ್ಕಾರ ಹೇಳಿದೆ.
PM Kisan Samman Nidhi Update: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ನೀವು ಸಹ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ, ಫೆಬ್ರವರಿ 10 ನಿಮ್ಮ ಪಾಲಿಗೆ ಒಂದು ಪ್ರಮುಖ ದಿನಾಂಕವಾಗಿದೆ ಎಂದು ಸರ್ಕಾರ ಘೋಷಿಸಿದೆ. ಈ ಬಗ್ಗೆ ಸರಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸ್ತುತ ದೇಶದ ಕೋಟ್ಯಾಂತರ ರೈತರು ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಹೋಳಿ ಹಬ್ಬಕ್ಕೂ ಮುನ್ನವೇ ಸರ್ಕಾರವು ಈ ಕಂತಿನ 2000 ರೂ.ಗಳನ್ನು ರೈತರ ಖಾತೆಗಳಿಗೆ ವರ್ಗಾಯಿಸಲಿದೆ.
ಮುಂದಿನ ಕಂತಿಗಾಗಿ ಪರಿಶೀಲನೆ ನಡೆಸುವ ಅವಶ್ಯಕತೆ ಇದೆ
ಪಿಎಂ-ಕಿಸಾನ್ ಯೋಜನೆಯ ಫಲಾನುಭವಿ ರೈತರು ಫೆಬ್ರವರಿ 10 ರೊಳಗೆ ತಮ್ಮ ಬ್ಯಾಂಕ್ ಖಾತೆಗಳ ಇ-ಕೆವೈಸಿ ಪರಿಶೀಲನೆಯನ್ನು ನಡೆಸಬೇಕಾಗಲಿದೆ. ಈ ಕುರಿತು ಮಾಹಿತಿ ನೀಡಿದ ಈ ಯೋಜನೆಯ ಉತ್ತರ ಪ್ರದೇಶ ನೋಡಲ್ ಅಧಿಕಾರಿ ಮೇಘರಾಜ್ ಸಿಂಗ್ ರತ್ನು, ಪಿಎಂ ಕಿಸಾನ್ ಫಲಾನುಭವಿಗಳಿಗೆ ಮುಂದಿನ ಕಂತಿನ ಹಣವನ್ನು ಪಡೆಯಲು ಈ ಪರಿಶೀಲನೆ ನಡೆಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ-Gautam Adani ಗೆ ಮುಳುವಾಯಿತೆ ಶನಿಯ ಸಾಡೆಸಾತಿ! ಮುಂದೀನಾಗಲಿದೆ? ಜೋತಿಷ್ಯ ಪಂಡಿತರು ಹೇಳುವುದೇನು?
ಸರ್ಕಾರ ಹೊರಡಿಸಿದ ಸೂಚನೆ ಏನು?
ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳು ಮುಂಬರುವ ಕಂತಿನ ವರ್ಗಾವಣೆಗಾಗಿ ಇ-ಕೆವೈಸಿ, ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಮತ್ತು ನೇರ ಲಾಭ ವರ್ಗಾವಣೆಗಾಗಿ ಫೆಬ್ರವರಿ 10, 2023 ರ ಮೊದಲು ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದಿಂದ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ.
ಇದನ್ನೂ ಓದಿ-Indian Railways: ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಯಾತ್ರಿಗಳಿಗೆ ಒಂದು ಭಾರಿ ಸಂತಸದ ಸುದ್ದಿ
1.94 ಲಕ್ಷ ರೈತರು ಲಿಂಕ್ ಮಾಡಿಲ್ಲ
ಜನವರಿ 2023 ರ ವೇಳೆಗೆ ರಾಜ್ಯದಲ್ಲಿ ಈ ಯೋಜನೆಯ ಫಲಾನುಭವಿಗಳಲ್ಲಿ ಶೇ.67 ಜನರು ಇ-ಕೆವೈಸಿ ಮತ್ತು ಶೇ.88 ರಷ್ಟು ಜನರು ಬ್ಯಾಂಕ್ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದಾರೆ ಎಂದು ರತ್ನು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸುಮಾರು 24.45 ಲಕ್ಷ ಫಲಾನುಭವಿಗಳು ಇ-ಕೆವೈಸಿ ಮಾಡಬೇಕಿದೆ ಮತ್ತು 1.94 ಲಕ್ಷ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Ration Card Update: ಉಚಿತ ಪಡಿತರ ಪಡೆಯುವವರಿಗೆ ಬಂಬಾಟ್ ಲಾಟರಿ, ಸರ್ಕಾರದ ಹೊಸ ಆದೇಶ ಜಾರಿ
ಫೆಬ್ರವರಿ 10 ರ ಮೊದಲು ಈ ಕೆಲಸವನ್ನು ಮಾಡಿ
ಇದುವರೆಗೆ ಇ-ಕೆವೈಸಿ ಮಾಡದಿರುವ ಮತ್ತು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದ ಫಲಾನುಭವಿಗಳು ಫೆಬ್ರವರಿ 10 ರ ಮೊದಲು ಅದನ್ನು ಮಾಡಬೇಕು ಎಂದು ಅವರು ಹೇಳಿದ್ದಾರೆ. ಇ-ಕೆವೈಸಿ ಮತ್ತು ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳನ್ನು ತೆರೆಯಲು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ಗೆ ಭಾರತ ಸರ್ಕಾರ ಅನುಮತಿ ನೀಡಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.