ನವದೆಹಲಿ : PM Kisan Update : ಪಿಎಂ ಕಿಸಾನ್ ಸಮ್ಮಾನ್ ನಿಧಿಯ 10 ಕೋಟಿಗೂ ಹೆಚ್ಚು ರೈತರಿಗೆ ಸರ್ಕಾರವು ಮತ್ತೊಮ್ಮೆ  ದೊಡ್ಡ ಘೋಷಣೆ ಮಾಡಿದೆ. . ಇ-ಕೆವೈಸಿಯ ಕೊನೆಯ ದಿನಾಂಕವನ್ನು ಸರ್ಕಾರವು ಎರಡು ಬಾರಿ ವಿಸ್ತರಿಸಿದ ನಂತರವೂ , ರೈತರು ಇನ್ನೂ ಈ ಕೆಲಸವನ್ನು ಮಾಡಿರದಿದ್ದರೆ,  ಈ ಸುದ್ದಿಯನ್ನೊಮ್ಮೆ ಓದಿ .  ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು e-KYCಯ ಕೊನೆಯ ದಿನಾಂಕವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದೆ. ಮೊದಲು ಇದನ್ನು ಜುಲೈ 31ಕ್ಕೆ ನಿಗದಿ ಮಾಡಿತ್ತು. ಸರ್ಕಾರದ ಮೂಲಗಳ ಪ್ರಕಾರ, ಇದುವರೆಗೆ ಕೆಲವೇ ರೈತರು ಮಾತ್ರ ಇ-ಕೆವೈಸಿ ಮಾಡಿಸಿ ದ್ದಾರೆ. ಇದರಿಂದಾಗಿ ಸರ್ಕಾರ ಈ ದಿನಾಂಕವನ್ನು ಮತ್ತೆ ವಿಸ್ತರಿಸಿದೆ.


COMMERCIAL BREAK
SCROLL TO CONTINUE READING

ಕೊನೆಯ ದಿನಾಂಕ ಆಗಸ್ಟ್ 31 :
ಆಗಸ್ಟ್  31 ರ ನಂತರ ವಿಸ್ತರಣೆಯಾಗುವ ಸಾಧ್ಯತೆ ಕಡಿಮೆ. e-kyc ಮಾಡಿಸದ ರೈತರಿಗೆ ಸರಕಾರದಿಂದ 12ನೇ ಕಂತಿನ ಹಣ ಸಿಗುವುದಿಲ್ಲ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.  ಈ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ಮಾಡುವುದು ಅವಶ್ಯಕ. 


ಇದನ್ನೂ ಓದಿ : Edible Oil Price: ದೇಶದ ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ


12ನೇ ಕಂತಿನಲ್ಲಿ ಬರಲಿದೆ 4 ಸಾವಿರ ರೂಪಾಯಿ!
ಪಿಎಂ ಕಿಸಾನ್ ನಿಧಿಯ 12 ನೇ ಕಂತಿನ ಹಣವು ( PM Kisan 12 th installment update) ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಬರುತ್ತದೆ. 12ನೇ ಕಂತು ಸೆಪ್ಟೆಂಬರ್ ಮೊದಲ ವಾರದಲ್ಲಿ ರೈತರ ಖಾತೆ ಸೇರುವ ನಿರೀಕ್ಷೆ ಇದೆ. ಇದಕ್ಕೂ ಮೊದಲು ಮೇ 31 ರಂದು  ರೈತರ ಖಾತೆಗೆ ಪಿಎಂ ಕಿಸಾನ್ ನಿಧಿಯ  2  ಸಾವಿರ ರೂಪಾಯಿಗಳನ್ನು ವರ್ಗಾಯಿಸಲಾಗಿತ್ತು. ಯಾವ ರೈತರ ಖಾತೆಗೆ ಇನ್ನೂ 11ನೇ ಕಂತಿನ ಹಣ ಬಂದಿಲ್ಲವೋ ಅಂತಹ ರೈತರಿಗೆ ಈ ಬಾರಿ 12ನೇ ಕಂತಾಗಿ 4 ಸಾವಿರ ರೂ. ಸಿಗಲಿದೆ. 


ಈ ರೀತಿಯಲ್ಲಿ ಮಾಡಿಸಿ ಇ-ಕೆವೈಸಿ :
1. ಮೊದಲು pmkisan.gov.in ನಲ್ಲಿ PM Kisan Yojana ವೆಬ್‌ಸೈಟ್‌ಗೆ ಹೋಗಿ.
2. ಇಲ್ಲಿfarmers Cornerನಲ್ಲಿ ಇ-ಕೆವೈಸಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
3. ಈಗ ತೆರೆಯುವ ಹೊಸ ವೆಬ್ ಪುಟದಲ್ಲಿ, ಆಧಾರ್ ಸಂಖ್ಯೆಯನ್ನು ನಮೂದಿಸಿ  ಸರ್ಚ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ. 
4. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ  OTPಯನ್ನು ಸಬ್ಮಿಟ್  ಮಾಡಿ. 
5.  ಇಷ್ಟು ಮಾಡಿದರೆ  ಇ-ಕೆವೈಸಿ  ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. 


ಇದನ್ನೂ ಓದಿ : NPS Rule Update: NPS ನಿಯಮದಲ್ಲಿ ಮಹತ್ವದ ಬದಲಾವಣೆ, ಈ ಹೊಸ ಬದಲಾವಣೆ ನಿಮಗೂ ತಿಳಿದಿರಲಿ


ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ :
ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಆರ್ಥಿಕವಾಗಿ ಸಬಲರನ್ನಾಗಿಸುವ ಸಲುವಾಗಿ, ಮೋದಿ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ ( PM Kisan 12 th installment update) . ಯೋಜನೆಯಡಿ, ಅರ್ಹ ರೈತರಿಗೆ ಪ್ರತಿ ವರ್ಷ 6000 ರೂ.ಗಳನ್ನು ನೀಡಲಾಗುತ್ತದೆ. ಈ ಹಣವನ್ನು ರೈತರಿಗೆ ಪ್ರತಿ ಷ ತಲಾ 2 ಸಾವಿರದಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.