PK Kisan eKYC : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್) ಯ ಮುಂದಿನ ಕಂತು ಶೀಘ್ರದಲ್ಲೇ ಬರಲಿದೆ. ಈ ಕಂತಿನಡಿ ಅರ್ಹ ರೈತರಿಗೆ 2 ಸಾವಿರ ರೂ. ಹಣವನ್ನ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದರೆ, ಈ ಎರಡು ಸಾವಿರ ರೂ.ಗಳನ್ನು ಪಡೆಯಲು ರೈತರು ಮಹತ್ವದ ಕೆಲಸವನ್ನ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಈ ಕೆಲಸ ಮಾಡದಿದ್ದರೆ ನಿಮಗೆ  2 ಸಾವಿರ ರೂಪಾಯಿಯೂ ಸಿಗುವುದಿಲ್ಲ. ಕೇಂದ್ರ ಸರ್ಕಾರದ ಈ ಯೋಜನೆಯಡಿ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂ. ಜಮಾ ಮಾಡಲಾಗುತ್ತಿದೆ. ಹಾಗೆ, ರೈತರಿಗೆ ಇಡೀ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಒಟ್ಟು 6000 ರೂ. ಸಿಗಲಿದೆ. 


COMMERCIAL BREAK
SCROLL TO CONTINUE READING

ತಪ್ಪದೆ ಈ ಕೆಲಸ ಮಾಡಿ


ಪಿಎಂ ಕಿಸಾನ್‌ನ ಕಂತು ಪಡೆಯಲು KYC ಮಾಡುವುದು ಬಹಳ ಮುಖ್ಯ. ಇ-ಕೆವೈಸಿ ಮಾಡಲು ಈಗ ಒಂದು ವಾರ ಉಳಿದಿದೆ. ಇದರ ಕೊನೆಯ ದಿನಾಂಕ 31 ಜುಲೈ 2022. ಪಿಎಂ ಕಿಸಾನ್ ಅಡಿಯಲ್ಲಿ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸದ ಫಲಾನುಭವಿಗಳು, ಕೊನೆಯ ದಿನಾಂಕದ ಮೊದಲು ಇಕೆವೈಸಿ ಮಾಡಿಸಿಕೊಳ್ಳುವುದು ಬಹಳ ಮುಖ್ಯ, ಇಲ್ಲದಿದ್ದರೆ  2000 ರೂ. ಸಿಗುವುದಿಲ್ಲ.


ಇದನ್ನೂ ಓದಿ : ಕಾರು-ಬೈಕ್ ಸವಾರರಿಗೆ ಸಿಹಿ ಸುದ್ದಿ ಪ್ರಕಟಿಸಿದ ಸಚಿವ ನಿತಿನ್ ಗಡ್ಕರಿ.!


eKYC ಮಾಡುವುದು ಕಡ್ಡಾಯ


ಪಿಎಂ ಕಿಸಾನ್ ನೋಂದಾಯಿತ ರೈತರು ತಮ್ಮ ಇಕೆವೈಸಿಯನ್ನು ಪೂರ್ಣಗೊಳಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಹಿಂದೆ, ಕೇಂದ್ರ ಸರ್ಕಾರವು ಎಲ್ಲಾ ರೈತರಿಗೆ eKYC ಯ ಕೊನೆಯ ದಿನಾಂಕವನ್ನು ಹಲವು ಬಾರಿ ವಿಸ್ತರಿಸಿದೆ. ಮತ್ತೊಂದೆಡೆ, OTP ಆಧಾರಿತ eKYC PM ಕಿಸಾನ್ ಪೋರ್ಟಲ್‌ನಲ್ಲಿ ಲಭ್ಯವಿದೆ ಅಥವಾ ಬಯೋಮೆಟ್ರಿಕ್ ಆಧಾರಿತ eKYC ಗಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಬಹುದು.


ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 12ನೇ ಕಂತು ಬರಲಿದೆ. ಹೀಗಾಗಿ, ನೀವು 12ನೇ ಕಂತಿನ ಹಣ ಪಡೆಯಲು ನೀವು eKYC ಮಾಡಿಸುವುದು ಅನಿವಾರ್ಯವಾಗಿದೆ. eKYC ಯನ್ನ ಹೀಗೆ ಮಾಡಿ.


ಹಂತ 1: ಅಧಿಕೃತ ವೆಬ್‌ಸೈಟ್ pmkisan.nic.in ಗೆ ಭೇಟಿ ನೀಡಿ
ಹಂತ 2: 'ಫಾರ್ಮರ್ಸ್ ಕಾರ್ನರ್' ವಿಭಾಗದ ಅಡಿಯಲ್ಲಿ 'eKYC' ಮೇಲೆ ಕ್ಲಿಕ್ ಮಾಡಿ.
ಹಂತ 3: 'OTP ಆಧಾರಿತ eKYC' ಆಯ್ಕೆಯ ಅಡಿಯಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
ಹಂತ 4: 'Search' ಕ್ಲಿಕ್ ಮಾಡಿ.
ಹಂತ 5: ಈಗ ನಿಮ್ಮ ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು 'OTP ಪಡೆಯಿರಿ' ಕ್ಲಿಕ್ ಮಾಡಿ.
ಹಂತ 6: OTP ನಮೂದಿಸಿ.
ಹಂತ 7: ನಮೂದಿಸಿದ ವಿವರಗಳ ಯಶಸ್ವಿ ಪರಿಶೀಲನೆಯ ನಂತರ EKYC ಪೂರ್ಣಗೊಳ್ಳುತ್ತದೆ.


ಇದನ್ನೂ ಓದಿ : EPFO- ಡೈರೆಕ್ಟ್ UAN ರಚಿಸುವ ಸುಲಭ ಪ್ರಕ್ರಿಯೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.