ಬೆಂಗಳೂರು : PM Kisan Yojana: ನೀವು ಕೂಡ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಈ ಸುದ್ದಿ ನಿಮಗೆ ಪ್ರಯೋಜನಕಾರಿಯಾಗಲಿದೆ. ಶೀಘ್ರದಲ್ಲೇ ನಿಮ್ಮ ಖಾತೆಗೆ 11ನೇ ಕಂತಿನ 2 ಸಾವಿರ ರೂಪಾಯಿ ಬರಲಿದೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರು 11 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಈ ಯೋಜನೆಯಡಿ ಇದುವರೆಗೆ ರೈತರು 10 ಕಂತುಗಳನ್ನು ಪಡೆದಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಸಂಬಂಧಪಟ್ಟಂತೆ 2021 ರಲ್ಲಿ ಕೇಂದ್ರ ಸರ್ಕಾರವು ಅನೇಕ ದೊಡ್ಡ ಬದಲಾವಣೆಗಳನ್ನು ಮಾಡಿದೆ. ಈಗ ರೈತರು 11 ನೇ ಕಂತಿನ ಹಣಕ್ಕಾಗಿ KYC ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.


COMMERCIAL BREAK
SCROLL TO CONTINUE READING

ಇ-ಕೆವೈಸಿ ಕಡ್ಡಾಯ : 
ನೀವು ಮನೆಯಲ್ಲಿ ಕುಳಿತು KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಕೆಲವು ಸಮಯದ ಹಿಂದೆ ಕಿಸಾನ್ ಯೋಜನೆಯ ಪೋರ್ಟಲ್‌ನಲ್ಲಿ ಇ-ಕೆವೈಸಿ ಸೌಲಭ್ಯವನ್ನು ನಿಲ್ಲಿಸಲಾಗಿತ್ತು. ಆದರೆ ಈಗ ಮತ್ತೆ ಅದನ್ನು ಆರಂಭಿಸಲಾಗಿದೆ. ನೀವು 11 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದರೆ, ಇ-ಕೆವೈಸಿ ಪ್ರಕ್ರಿಯೆಯನ್ನು ಮುಂಚಿತವಾಗಿ ಪೂರ್ಣಗೊಳಿಸಬೇಕಾಗುತ್ತದೆ. ಇಲ್ಲವಾದರೆ ಪಿಎಂ ಕಿಸಾನ್ ಯೋಜನೆಯ  ಮುಂದಿನ ಕಂತು ಅಂದರೆ 11ನೇ ಕಂತಿನ ಹಣ ನಿಮ್ಮ ಖಾತೆ ಸೇರದೇ ಇರಬಹುದು. 


ಇದನ್ನೂ ಓದಿ : PNB Interest Rates: ಹೋಂ ಲೋನ್ ಸೇರಿದಂತೆ ಇತರಸಾಲಗಳ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್


ಇ-ಕೆವೈಸಿ ಮಾಡುವುದು ಹೇಗೆ?
ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಆನ್‌ಲೈನ್ ಕೆವೈಸಿ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ ಕಿಸಾನ್ ಕಾರ್ನರ್‌ನಲ್ಲಿರುವ ಇ-ಕೆವೈಸಿ ಆಯ್ಕೆಗೆ ಹೋಗುವ ಮೂಲಕ  ಇದನ್ನು ಮಾಡಬಹುದು. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ, ಹತ್ತಿರದ CSC ಕೇಂದ್ರಕ್ಕೆ ಭೇಟಿ ನೀಡಬೇಕು. ಮನೆಯಲ್ಲಿ ಕುಳಿತೇ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.  


ಇ-ಕೆವೈಸಿ  ಪ್ರಕ್ರಿಯೆಯನ್ನು ತಿಳಿಯಿರಿ
1. ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸಹಾಯದಿಂದ ನೀವು ಮನೆಯಲ್ಲಿಯೇ ಕುಳಿತು ಇ-ಕೆವೈಸಿ ಮಾಡಬಹುದು.
2. ಇದಕ್ಕಾಗಿ, ನೀವು ಮೊದಲು https://pmkisan.gov.in/ ಪೋರ್ಟಲ್‌ಗೆ ಹೋಗಿ.
3. ಈಗ ನೀವು ಈ ಪುಟದ ಬಲಭಾಗದಲ್ಲಿ ಟ್ಯಾಬ್‌ಗಳನ್ನು ಕಾಣಬಹುದು.
4. E-KYC ಮೇಲೆ ಕ್ಲಿಕ್ ಮಾಡಿ.
5. ಇಲ್ಲಿ ನೀವು ನಿಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು . 
6. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಿ.


ಇದನ್ನೂ ಓದಿ : Canara Bank: ಬಡ್ಡಿ ದರ ಹೆಚ್ಚಿಸಿದ ಕೆನರಾ ಬ್ಯಾಂಕ್


ಇ-ಕೆವೈಸಿಗೆ ಕೊನೆಯ ದಿನಾಂಕ ಯಾವಾಗ?
ಇ-ಕೆವೈಸಿ ಮಾಡಿಸಲು ಮಾರ್ಚ್ 31 ಕೊನೆಯ ದಿನಾಂಕ ಎದ್ನು ಈ ಮೊದಲು ಹೇಳಲಾಗಿತ್ತು. ಆದರೆ ಈಗ ಅದನ್ನು ಮೇ 22 ಕ್ಕೆ ವಿಸ್ತರಿಸಲಾಗಿದೆ. ಈ ಮಾಹಿತಿಯನ್ನು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ನೀಡಲಾಗಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.